ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 25,986 ಮಂದಿ ಕೊರೊನಾ ಸೋಂಕಿತರು ಪತ್ತೆ: ಶೇ.31.76ರಷ್ಟಿದೆ ಪಾಸಿಟಿವಿಟಿ ಪ್ರಮಾಣ

|
Google Oneindia Kannada News

ನವದೆಹಲಿ, ಏಪ್ರಿಲ್ 29: ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ 25,986 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.31.76ರಷ್ಟಿದೆ.

ದೆಹಲಿಯಲ್ಲಿ ಮಂಗಳವಾರ 24,149 ಪ್ರಕರಣಗಳು ವರದಿಯಾಗಿತ್ತು, ಸೋಮವಾರ 20,201, ಭಾನುವಾರ 22,933, ಶನಿವಾರ 24,103, ಶುಕ್ರವಾರ 24,331, ಗುರುವಾರ 26, 169, ಹಾಗೂ ಕಳೆದ ಬುಧವಾರ 24, 638 ಪ್ರಕರಣಗಳು ಪತ್ತೆಯಾಗಿದ್ದವು.

ಕೇರಳದಲ್ಲಿ ಬರೋಬ್ಬರಿ 35 ಸಾವಿರ ಕೊರೊನಾ ಸೋಂಕಿತರು ಪತ್ತೆ ಕೇರಳದಲ್ಲಿ ಬರೋಬ್ಬರಿ 35 ಸಾವಿರ ಕೊರೊನಾ ಸೋಂಕಿತರು ಪತ್ತೆ

ನಗರದಲ್ಲಿ ಮಂಗಳವಾರ 381 ಸಾವುಗಳು ಸಂಭವಿಸಿದ್ದು, ಕಳೆದ ವರ್ಷ ಕೊರೊನಾ ಆರಂಭವಾದಾಗಿನಿಂದ ಇಷ್ಟು ಮಟ್ಟದ ಸಾವು ಸಂಭವಿಸಿರಲಿಲ್ಲ, ಬುಧವಾರ 368 ಮಂದಿ ಮೃತಪಟ್ಟಿದ್ದಾರೆ. ಸೋಮವಾರ 380, ಭಾನುವಾರ 350 ಮಂದಿ ಸಾವನ್ನಪ್ಪಿದ್ದಾರೆ.

Delhi Records 25,986 Covid-19 Cases, 368 Deaths; Positivity Rate Over 31%

ದೆಹಲಿಯಲ್ಲಿ ಒಟ್ಟು 10,53,701 ಪ್ರಕರಣಗಳಿವೆ, 14,616 ಮಂದಿ ಮೃತಪಟ್ಟಿದ್ದಾರೆ, 99,752 ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,60,960 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 3293 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಗುಣಮುಖರಾದವರ ಸಂಖ್ಯೆ 2,61,162ರಷ್ಟಿದೆ.

ಮಂಗಳವಾರ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿತ್ತು. ಸೋಮವಾರಕ್ಕೆ ಹೋಲಿಸಿದರೆ ಸುಮಾರು 20 ಸಾವಿರ ಕಡಿಮೆ ಪ್ರಕರಣಗಳು ದಾಖಲಾಗಿದ್ದವು. ಆದರೆ ಮತ್ತೆ ಪ್ರಕರಣಗಳು ಏರುಗತಿಯತ್ತ ಸಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯ ದೇಶದಲ್ಲಿನ ಕೊರೊನಾ ಪ್ರಕರಣಗಳ ಕುರಿತು ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾದ ಪ್ರಕರಣಗಳೊಂದಿಗೆ ಒಟ್ಟಾರೆ ಪ್ರಕರಣಗಳ ಸಂಖ್ಯೆ 1,79,97,267ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 29,78,709 ಆಗಿದೆ.

ಇದುವರೆಗೂ ಸೋಂಕಿನಿಂದ 1,48,17,371 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ 2,01,187 ಮಂದಿ ಮೃತಪಟ್ಟಿದ್ದಾರೆ. ಜನವರಿ 16ರಿಂದ ಏಪ್ರಿಲ್ 27ರವರೆಗೆ 14,78,27,367 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

English summary
Delhi recorded 368 more COVID-19 deaths and 25,986 new cases of the infection on Wednesday with a positivity rate of 31.76 per cent, according to the latest bulletin issued by the city health department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X