ಮಹತ್ವದ ಸಭೆ: ಆರ್ಬಿಐ-ಸರ್ಕಾರದ ನಡುವಿನ ಸಂಘರ್ಷಕ್ಕೆ ಇಂದು ತೆರೆ?
ನವದೆಹಲಿ, ನವೆಂಬರ್ 19: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ)ದ ಮಹತ್ವದ ಬೋರ್ಡ್ ಮೀಟಿಂಗ್ ಇಂದು(ಸೋಮವಾರ) ನಡೆಯಲಿದ್ದು, ಸರ್ಕಾರ ಮತ್ತು ಆರ್ಬಿಐ ನಡುವಿನ ಸಂಘರ್ಷಕ್ಕೆ ತೆರೆಬೀಳುವ ನಿರೀಕ್ಷೆ ಇದೆ.
ಈ ಸಭೆಯಲ್ಲಿ ಸಮಿತಿಯೊಂದನ್ನು ನಿರ್ಮಿಸಿ, ಅದಕ್ಕೆ ಆರ್ಬಿಐ ನ ಕೆಲಸಕಾರ್ಯಗಳನ್ನು ಮೇಲ್ವಿಚಾರಣೆ ಮಾಡಬಲ್ಲ ಅಧಿಕಾರವನ್ನು ನೀಡುವಂತೆ ನಿಯಮವನ್ನು ಬದಲಿಸುವ ಸಾಧ್ಯತೆ ಇದೆ. ಮೇಲ್ವಿಚಾರಣಾ ಸಂಸ್ಥೆಯು ಸರ್ಕಾರವೇ ನೇಮಿಸಿದ ಕೆಲವು ಸಲಹೆಗಾರರು, ಆರ್ಥಿಕ ತಜ್ಞರನ್ನು ಒಳಗೊಳ್ಳಲಿರುವುದರಿಂದ ಪರೋಕ್ಷವಾಗಿ ಸರ್ಕಾರವೇ ಅದನ್ನು ಹಿಡಿತದಲ್ಲಿಟ್ಟುಕೊಳ್ಳಲಿದೆ ಎನ್ನಲಾಗುತ್ತಿದೆ.

ಸರ್ಕಾರವು ತನ್ನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಮೂಗುತೂರಿಸುತ್ತಿದೆ ಎಂದು ಆರ್ಬಿಐ ನ ಆಯಕಟ್ಟಿನ ಹುದ್ದೆಯಲ್ಲಿರುವವರು ದೂರಿದ ಪರಿಣಾಮ ಆರ್ಬಿಐ ಮತ್ತು ಸರ್ಕಾರದ ನಡುವೆ ಮುಸಿಕನ ಹೋರಾಟ ಆರಂಭವಾಗಿತ್ತು.
ಈ ಸಂಬಂಧ ಇಂದು ನಡೆಯುತ್ತಿರುವ ಆರ್ ಬಿಐ ಬೋರ್ಡ್ ಸಭೆಯಲ್ಲಿ ಆರ್ಬಿಐ ನ ಸೆಂಟ್ರಲ್ ಬೋರ್ಡ್ ನ 18 ಸದಸ್ಯರು ಭಾಗವಹಿಸಲಿದ್ದಾರೆ.












Click it and Unblock the Notifications