ತ.ನಾಡಿಗೆ ವಿದ್ಯಾಸಾಗರ್ ರಾವ್ ರಾಜ್ಯಪಾಲರಾಗಿ ನೇಮಕ ಸಾಧ್ಯತೆ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜುಲೈ 24: ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿನ ಪೂರ್ಣಾವಧಿ ರಾಜ್ಯಪಾಲರಾಗಿ ಆಯ್ಕೆ ಆಗುವ ಸಾಧ್ಯತೆಗಳಿವೆ. ಆಗಸ್ಟ್ ಹನ್ನೊಂದರಂದು ಕೇಂದ್ರ ಸಂಪುಟದ ಪುನಾರಚನೆ ಆಗುವ ಸಂಭವವಿದ್ದು, ಆ ನಂತರ ನಿರ್ಧಾರ ಹೊರಬೀಳಲಿದೆ.

ಕೇಂದ್ರ ಸಂಪುಟ ಪುನಾರಚನೆ: ಸದಾನಂದ ಗೌಡ, ಅನಂತ್ ಗೆ ಪ್ರಮುಖ ಖಾತೆ?

ಸದ್ಯಕ್ಕೆ ತಮಿಳುನಾಡು ಹಾಗೂ ಮಹಾರಾಷ್ಟ್ರ ಎರಡಕ್ಕೂ ರಾವ್ ಅವರೇ ರಾಜ್ಯಪಾಲರಾಗಿದ್ದಾರೆ. ತಮಿಳುನಾಡಿಗೆ ಹೊಸ ಮುಖವನ್ನು ಹುಡುಕುವ ಬದಲು ರಾವ್ ಅವರನ್ನೇ ನೇಮಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Rao to be made permanent Governor of Tamil Nadu

ಇದರ ಜತೆಗೆ ಸರಕಾರವು ಏಳು ರಾಜ್ಯಗಳಿಗೆ ರಾಜ್ಯಪಾಲರ ನೇಮಕ ಮಾಡಲಿದೆ. ಬಿಹಾರ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್, ಅಸ್ಸಾಮ್ ಮತ್ತು ಅರುಣಾಚಲಪ್ರದೇಶಕ್ಕೆ ನೇಮಕ ಮಾಡಲಾಗುವುದು. ತೆಲಂಗಾಣದಲ್ಲೂ ಬದಲಾವಣೆ ಮಾಡುವ ಬಗ್ಗೆ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈಗಾಗಲೇ ಪಟ್ಟಿ ತಯಾರು ಮಾಡಿಕೊಂಡಿದ್ದು, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಮಾತುಕತೆ ನಡೆಸಬೇಕಿದೆ.

Jayalalitha's soul is still wandering in Poes Garden, Kodnad Estate

ಬಿಹಾರದ ರಾಜ್ಯಪಾಲರಾಗಿದ್ದ ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದರಿಂದ ಆ ಸ್ಥಾನಕ್ಕೂ ನೇಮಕ ಮಾಡಬೇಕಾಗಿದೆ. ಆದರೆ ತಮಿಳುನಾಡಿಗೆ ಬಹಳ ಕಾಲದಿಂದ ಪೂರ್ಣಾವಧಿ ರಾಜ್ಯಪಾಲರ ನೇಮಕವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vidyasagar Rao is likely to be made the permanent Governor of Tamil Nadu. A decision to this effect is expected after August 11 when the Cabinet reshuffle is likely to take place.
Please Wait while comments are loading...