ರಾಹುಲ್ ಪರ ರಮ್ಯಾ ಟ್ವೀಟ್: ಅಣಕಿಸಿದ ಟ್ವಿಟ್ಟಿಗರು!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 5: ಗುಜರಾತ್‌ನ ಬನಷ್ಕಂಠ ಜಿಲ್ಲೆಗೆ ಪ್ರವಾಹ ಸಂತ್ರಸ್ತರ ಭೇಟಿಗೆಂದು ರಾಹುಲ್ ಗಾಂಧಿಯವರು ಬಂದಾಗ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿರುವುದನ್ನು ಖಂಡಿಸಿ, ಕಾಂಗ್ರೆಸ್‌‌ನ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ರಮ್ಯಾ ಅವರು ಮಾಡಿರುವ ಟ್ವೀಟ್ ಗಳಿಗೆ ಭಾರೀ ಟೀಕೆ ವ್ಯಕ್ತವಾಗಿದೆ.

ರಮ್ಯಾ 'ಕೊಲೆಗಡುಕ' ಎಂದಿದ್ದು ಮೋದಿಗೋ, ಅಮಿತ್ ಶಾ ಅವರಿಗೋ?

ಕಾಂಗ್ರೆಸ್ ಪರವಾಗಿ ಅಥವಾ ಬಿಜೆಪಿ ವಿರುದ್ಧವಾಗಿ, ರಾಹುಲ್ ಗಾಂಧಿಯವರನ್ನು ಹೊಗಳಿ ಅಥವಾ ನರೇಂದ್ರ ಮೋದಿಯವರನ್ನು ತೆಗಳಿ, ಕನ್ನಡ ಚಿತ್ರರಂಗದ ಮಾಜಿ ಚಿತ್ರನಟಿ ರಮ್ಯಾ ಅವರು ಏನೇ ಟ್ವೀಟ್ ಮಾಡಿದರೂ ಅದು ವಿವಾದಕ್ಕೆ ಈಡಾಗುತ್ತಿರುವುದು ನಿಜಕ್ಕೂ ವಿಪರ್ಯಾಸ.

ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯನ್ನು ಕುಟುಕಿದ ರಮ್ಯಾ

ಕಲ್ಲು ತೂರಾಟದ ವಿಷಯದಲ್ಲಿ ಆಗಿರುವುದೂ ಅದೇ. ರಾಹುಲ್ ಕಾರಿನ ಮೇಲೆ ಕಲ್ಲು ತೂರಿರುವುದು ಖಂಡನೀಯವಾದರೂ, ರಮ್ಯಾ ಅವರು ಏನೇ ಟ್ವೀಟ್ ಮಾಡಿದರೂ ಟ್ವಿಟ್ಟಿಗರಿಗೆ ಖಂಡನೀಯವಾಗುತ್ತದೆ. ವಿವೇಚನೆಯಿಲ್ಲದೆ ಹಿಂದೆ ಮಾಡಿರುವ ಹಲವಾರು ಟ್ವೀಟ್ ಗಳು ಇದಕ್ಕೆ ಕಾರಣವಿದ್ದರೂ ಇರಬಹುದು.

ರಾಹುಲ್ ಮೇಲೆ ಕಲ್ಲು ಎಸೆದಿರುವುದರ ಹಿಂದೆ ಬಿಜೆಪಿಯ ಯುವ ಮೋರ್ಚಾ ಕೆಲಸ ಮಾಡಿರಬಹುದೆ ಎಂದು ಅವರು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಪ್ರಶ್ನಿಸಿದ್ದಾರೆ. ನೀವೇಕೆ ಆ ಕಲ್ಲು ತೂರಾಟ ಮಾಡುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಟೀಕಿಸಿದ್ದಾರೆ.

ರಮ್ಯಾ ಅವರು ಮಾಡುವ ಪ್ರತಿಯೊಂದು ಟ್ವೀಟುಗಳಲ್ಲಿ ಕಲ್ಲು ಹುಡುಕುವವರಿಗೆ ಇಷ್ಟು ಸಾಕು. ಕೆಲವೊಬ್ಬರು ರಮ್ಯಾ ಅವರನ್ನು ಶ್ಲಾಷಿಸಿದ್ದರೆ, ಕೆಲವರು ರಾಹುಲ್ ಬಗ್ಗೆ ವ್ಯಂಗ್ಯವಾಡಿ ಟೀಕಾಸ್ತ್ರವನ್ನು ಎಸೆದಿದ್ದಾರೆ.

ಕಲ್ಲುತೂರಾಟಕ್ಕೆ ಹೊಣೆ ಯಾರು?

ಈ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ನಟಿ ರಮ್ಯಾ, "ಈ ಕಲ್ಲುತೂರಾಟಕ್ಕೆ ಭಾರತೀಯ ಜನತಾ ಯುವ ಮೋರ್ಚಾ ಹೊಣೆಯೆ? ಪೊಲೀಸರು ಯಾಕೆ ಕಲ್ಲು ತೂರಾಟ ನಡೆಸಿದವರ ಹೆಸರು ಹೇಳುತ್ತಿಲ್ಲ?" ಎಂದು ಪ್ರಶ್ನಿಸಿದ್ದರು.

ಅರುಣ್ ಠಾಕೂರ್

ಇದೊಂದು ಪೂರ್ವನಿಯೋಜಿತ ಕೃತ್ಯ. ಇದರ ಹಿಂದೆ ಬಿಜೆಪಿ ಇದೆ. ಅದಕ್ಕೆಂದೇ ಇದುವರೆಗೂ ಒಂದೂ ಎಫ್ ಐಆರ್ ದಾಖಲಿಸಲಾಗಿಲ್ಲ ಎಂದು ಅರುಣ್ ಠಾಕೂರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪೋಸ್ ಕೊಟ್ರೆ ಸಾಕಾಗಲ್ಲ!

ಮ್ಯಾಡಂ ನಿಮ್ಮ ಗಾಂಧಿ ಅವರು ನಿರಾಶ್ರಿತರಿಗೆ ಆಹಾರ ಕೊಡುವಾಗ್ಲೂ ಮಾಧ್ಯಮದ ಮುಂದೆ ಪೋಸ್ ಕೊಡ್ತಾ ನಿಂತಿದ್ರು. ಜನ ಸುಮ್ನೆ ಇರ್ತಾರಾ? ಪಬ್ಲಿಸಿಟಿಗೆ ಹೋದ್ರೆ ಸಾಕಾಗಲ್ಲ ಎಂದು ನವೀನ್ ಶೆಟ್ಟಿ ಎಂಬ ಕನ್ನಡಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಕಡೆಯ ಗೂಂಡಾಗಳು ಏನುಮಾಡುತ್ತಿದ್ದರು?

ಈ ಸಮಯದಲ್ಲಿ ರಾಹುಲ್ ಗಾಂಧಿಯವರ ಗೂಂಡಾಗಳು ಏನು ಮಾಡುತ್ತಿದ್ದರು? ಕಲ್ಲು ತೂರಾಟ ಮಾಡುವವರಿಗೆ ಸಹಾಯ ಮಾಡ್ತಾ ಇದ್ರಾ? ಎಂದು ಶುಭಂ ಎ ರತ್ನಾಕರ್ ಎನ್ನುವವರು ಟ್ವೀಟ್ ಮಾಡಿದ್ದಾರೆ!

ತನಿಖೆ ನಡೆಸಿ, ಶಿಕ್ಷಿಸಿ

ಈ ಕೆಲಸ ಮಾಡಿದವರು ಯಾರು ಎಂಬ ತನಿಖೆ ನಡೆಸಿ, ಈ ರೀತಿ ಯೋಜನೆ ಹಾಕಿದವರನ್ನು ಶಿಕ್ಷಿಸಿ ಎಂದು ವೈಭವ್ ದೇಶಪಾಂಡೆ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Is BJYM responsible for the attack on Rahul Gandhi ji? Why are the police not revealing their names? Congress social media head and well known Kannada actress Ramya tweeted. She was blaming BJP and it's supporter for attack on Rahul Gandhi in Gujarat on August 4th.
Please Wait while comments are loading...