Lungi Ngidi: ಲುಂಗಿ ಎನ್‌ಗಿಡಿ ಆರೋಗ್ಯ ಸ್ಥಿತಿ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್

Lungi Ngidi: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ (ಏಪ್ರಿಲ್‌ 25) ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್‌ ಪಂದ್ಯದ ವೇಳೆ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್‌ಗಿಡಿ ಅವರ ತಲೆ ನೆಲಕ್ಕೆ ಬಡಿದು ಗಾಯಗೊಂಡಿದ್ದರು. ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಲ್ಲಾ ಫ್ರಾಂಚೈಸಿಗಳು ಶೀಘ್ರ ಗುಣಮುಖರಾಗಿ ಮೈದಾನಕ್ಕೆ ಮರಳಲಿ ಎಂದು ಹಾರೈಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದವು. ಇದೀಗ ಎನ್‌ಗಿಡಿ ಆರೋಗ್ಯ ಸ್ಥಿತಿ ಬಗ್ಗೆ ಡಿಸಿ ಬಿಗ್ ಅಪ್ಡೇಟ್‌ ನೀಡಿದೆ.

ತಲೆನೋವು ಮತ್ತು ಕುತ್ತಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಎನ್‌ಗಿಡಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಶೀಘ್ರದಲ್ಲೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಚ್‌ ಆಗಲಿದ್ದಾರೆ. ಎನ್‌ಗಿಡಿ ಅವರ ಬದಲಿಗೆ ವಿಪ್ರಜ್ ನಿಗಮ್ 'ಕನ್ಕ್ಯೂಶನ್ ಸಬ್‌ಸ್ಟಿಟ್ಯೂಟ್' ಆಗಿ ಮೈದಾನಕ್ಕಿಳಿದಿದ್ದರು. ಮುಂದಿನ ಹಲವು ಪಂದ್ಯಗಳವರೆಗೂ ಅವರೇ ಇರಲಿದ್ದಾರೆ ಎನ್ನುವ ಮಾಹಿತಿಯಿದೆ. ಎನ್‌ಗಿಡಿ ಅವರಿಗೆ ಸದ್ಯ ದೀರ್ಘಕಾಲದ ವಿಶ್ರಾಂತಿ ನೀಡಲಾಗುವುದು ಎಂದು ತಿಳಿಸಿದೆ ಎಂದು ತಿಳಿದುಬಂದಿದೆ.

Lungi Ngidi Health Update Delhi Pacer Stable After Head Injury Likely to Be Discharged Soon

ಕನ್ಕ್ಯೂಶನ್ ಸಬ್‌ಸ್ಟಿಟ್ಯೂಟ್ ಎಂದರೇನು?

ಕನ್ಕ್ಯೂಶನ್ ಸಬ್‌ಸ್ಟಿಟ್ಯೂಟ್ ಎನ್ನುವುದು ಕ್ರೀಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕ್ರಿಕೆಟ್ ಪಂದ್ಯಗಳ ವೇಳೆ ಆಟಗಾರನ ತಲೆಗೆ ಪೆಟ್ಟು ಬಿದ್ದಾಗ ಆತನ ಬದಲಿಗೆ ಪಂದ್ಯದ ಮಧ್ಯದಲ್ಲಿ ಬೇರೆ ಆಟಗಾರನನ್ನು ಆಡಿಸಲು ಅವಕಾಶ ನೀಡುವ ನಿಯಮವಾಗಿದೆ. ಆಟದ ಸಂದರ್ಭದಲ್ಲಿ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಮಾಡುವಾಗ ಆಟಗಾರನ ತಲೆಗೆ ಚೆಂಡು ಬಡಿದು, ಆತ ಆಡಲು ಅಸಮರ್ಥನಾದಾಗ ಈ ನಿಯಮ ಅನ್ವಯಿಸುತ್ತದೆ.

ಐಸಿಸಿ ನಿಯಮ ಹೇಳೋದೇನು?

ಐಸಿಸಿ ನಿಯಮದಂತೆ ಗಾಯಗೊಂಡ ಆಟಗಾರನಿಗೆ ಬದಲಾಗಿ ಬರುವ ಆಟಗಾರನು, ಗಾಯಗೊಂಡ ಆಟಗಾರನಂತೆಯೇ ಅದೇ ರೀತಿಯ ಕೌಶಲ್ಯವನ್ನು ಹೊಂದಿರಬೇಕು. ಉದಾಹರಣೆಗೆ ಬ್ಯಾಟ್ಸ್‌ಮನ್ ಬದಲಿಗೆ ಬ್ಯಾಟ್ಸ್‌ಮನ್, ಬೌಲರ್ ಬದಲಿಗೆ ಬೌಲರ್. ಮ್ಯಾಚ್ ರೆಫ್ರಿ ಅಥವಾ ವೈದ್ಯಕೀಯ ತಂಡದ ಪರಿಶೀಲನೆಯ ನಂತರವೇ ಈ ಬದಲಾವಣೆಗೆ ಅವಕಾಶ ನೀಡಲಾಗುತ್ತದೆ. ಗಾಯಗೊಂಡ ಆಟಗಾರನ ಆರೋಗ್ಯದ ದೃಷ್ಟಿಯಿಂದ ಈ ನಿಯಮ ಬಹಳ ಮುಖ್ಯವಾಗುತ್ತದೆ. ಇದು ಆಟಗಾರರ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+