ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆಯಿಂದ ಹೊಸ ಸೇವೆ

ನವದೆಹಲಿ, ಅಕ್ಟೋಬರ್ 25 : ಭಾರತೀಯ ರೈಲ್ವೆ 'ಬ್ಯಾಗ್ ಆನ್ ವೀಲ್ಸ್' ಎಂಬ ನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುತ್ತಿದೆ. ಮೊದಲು ದೆಹಲಿಯಲ್ಲಿ ಇದು ಜಾರಿಗೆ ಬರಲಿದ್ದು, ಬಳಿಕ ಇತರ ನಗರಗಳಿಗೆ ವಿಸ್ತರಣೆಯಾಗಲಿದೆ.

ಪ್ರಯಾಣಿಕರ ಲಗೇಜ್‌ಗಳನ್ನು ರೈಲ್ವೆ ನಿಲ್ದಾಣದಿಂದ ಮನೆಗೆ, ಮನೆಯಿಂದ ರೈಲು ನಿಲ್ದಾಣಕ್ಕೆ ಸಾಗಣೆ ಮಾಡುವ ಯೋಜನೆ ಇದಾಗಿದೆ. ದೆಹಲಿಯ ಆಯ್ದ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಇದು ಜಾರಿಗೆ ಬರಲಿದೆ.

ಮೊಬೈಲ್ ಅಪ್ಲಿಕೇಶನ್ ಮಾದರಿಯ ಸೇವೆ ಇದಾಗಿದ್ದು, ಲಗೇಜ್‌ಗಳ ಭಾರ, ಮನೆ ಇರುವ ದೂರದ ಆಧಾರದ ಮೇಲೆ ದರವನ್ನು ನಿಗದಿ ಮಾಡಲಾಗುತ್ತದೆ. ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ರೈಲು ನಿಲ್ದಾಣಕ್ಕೆ ಸಾಗಣೆ ಮಾಡಲು ಬುಕ್ ಮಾಡಬಹುದಾಗಿದೆ.

Railways To Launch Bags On Wheels Scheme

ಪ್ರಯಾಣಿಕರು ಸಂಚರಿಸಬೇಕಾದ ರೈಲಿನ ವಿವರಗಳನ್ನು ನೀಡಿದರೆ ಅದೇ ಬೋಗಿಗೆ ಲಗೇಜ್ ತಲುಪಿಸಲಾಗುತ್ತದೆ. ಇದಕ್ಕಾಗಿ ರೈಲ್ವೆ ಖಾಸಗಿ ಅವರಿಗೆ ಟೆಂಡರ್ ನೀಡಿದ್ದು, ಸಂಪೂರ್ಣ ನಿರ್ವಹಣೆ ಅವರದ್ದಾಗಿದೆ.

ರೈಲಿನಲ್ಲಿ ಸಂಚಾರ ನಡೆಸುವ ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡು ಈ ಸೇವೆ ಆರಂಭಿಸಲಾಗಿದೆ. ರೈಲು ನಿಲ್ದಾಣಕ್ಕೆ ಹೊರಡುವ ಮುನ್ನ ಬುಕ್ ಮಾಡಿದರೆ ನಿಲ್ದಾಣ ತಲುಪುವ ವೇಳೆಗೆ ಲಗೇಜ್ ಸಹ ತಲುಪಿರಲಿದೆ.

ದೆಹಲಿಯಲ್ಲಿ ಈ ಸೇವೆ ಯಶಸ್ವಿಯಾದರೆ ಬೇರೆ ನಗರಗಳಿಗೂ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಂದ ಆಟೋ, ಟ್ಯಾಕ್ಸಿಗಳು ಲಗೇಜ್ ಹೆಸರಿನಲ್ಲಿ ಹೆಚ್ಚು ಹಣ ವಸೂಲಿ ಮಾಡುವುದು ತಪ್ಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+