ಸೋಮವಾರದಿಂದ ರೈಲು ಪ್ರಯಾಣ ದುಬಾರಿ

Railways
ನವದೆಹಲಿ, ಅ.7 : ರೈಲು ಪ್ರಯಾಣ ದರ ಶೇ 2ರಷ್ಟು ಹೆಚ್ಚಳವಾಗಿದೆ. ಎಸಿ ಕೋಚ್‌ ಪ್ರಯಾಣ ದರ ಸೋಮವಾರಿಂದ ಹೆಚ್ಚಳವಾಗಲಿದೆ. ಆದರೆ, ದ್ವಿತೀಯ ಮತ್ತು ಮಾಸಿಕ ಪಾಸ್‌ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ರೈಲ್ವೇ ಇಲಾಖೆ ಮೇಲೆ ಬೀಳುತ್ತಿರುವ 1200 ಕೋಟಿ ರೂ. ಹೊರೆ ತಪ್ಪಿಸಲು ರೈಲು ಪ್ರಯಾಣದರವನ್ನು ಹೆಚ್ಚಳ ಮಾಡಲಾಗಿದೆ. ಶೇ 2ರಷ್ಟು ಹೆಚ್ಚನ ಪ್ರಯಾಣ ದರ ಸೋಮವಾರದಿಂದ ಜಾರಿಗೆ ಬರಲಿದೆ.

ಎಸಿ ಕೋಚ್ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ. ಆದರೆ, 400 ಕಿ.ಮೀ.ಗಿಂತ ಜಾಸ್ತಿ ದೂರದ ಸಾಮಾನ್ಯ ಮತ್ತು ಸ್ಲಿಪರ್ ಪ್ರಯಾಣಕ್ಕೂ ಹೆಚ್ಚುವರಿ ಹಣ ಪಾವತಿ ಮಾಡಬೇಕಾಗುತ್ತದೆ.

ನೂತರ ದರದ ಅನ್ವಯ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿನಿಂದ ದೆಹಲಿಗೆ ಎಸಿ ಪ್ರಥಮ ದರ್ಜೆ ಸೀಟಿನಲ್ಲಿ ಪ್ರಯಾಣಿಸಬೇಕಾದರೆ ಪ್ರಯಾಣಿಕರು 95 ರೂ. ಹೆಚ್ಚು ಹಣ ಪಾವತಿ ಮಾಡಬೇಕು.

ಉಪನಗರದ ಎರಡನೇ ದರ್ಜೆ ರೈಲು ಪ್ರಯಾಣಕ್ಕೆ ಈ ದರ ಹೆಚ್ಚಳ ಅನ್ವಯವಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಪರಿಷ್ಕೃತ ದರವು ಅ.7ರ ಪ್ರಯಾಣಕ್ಕಾಗಿ ಮುಂಗಡವಾಗಿ ಬುಕ್ ಮಾಡಿರುವ ಟಿಕೆಟ್‌ಗಳಿಗೂ ಅನ್ವಯವಾಗಲಿದೆ.

ಡೀಸೆಲ್‌ ಮತ್ತು ವಿದ್ಯುತ್‌ ದರ ಹೆಚ್ಚಾಗಿರುವುದರಿಂದ ರೈಲ್ವೆ ಇಲಾಖೆ ಮೇಲೆ ಹೆಚ್ಚುವರಿಯಾಗಿ 1,200 ಕೋಟಿ ರೂ. ಹೊರೆ ಬೀಳಲಿದೆ. ಆದ್ದರಿಂದ ರೈಲು ಪ್ರಯಾಣ ದರ ಹೆಚ್ಚಳ ಮಾಡುವುದಾಗಿ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದರು. (ದರ ಏರಿಕೆ ಎಲ್ಲಿ? ಎಷ್ಟು?)

ಸರಕು ಸಾಗಣೆಯೂ ದುಬಾರಿ : ರೈಲ್ವೆ ಸರಕು ಸಾಗಣೆ ದರದಲ್ಲೂ ಶೇ 2ರಷ್ಟು ಏರಿಕೆ ಮಾಡಿದ್ದು, ಅಕ್ಟೋಬರ್‌ 10ರಿಂದ ಇದು ಜಾರಿಗೆ ಬರಲಿದೆ. ದರ ಪರಿಷ್ಕರಣೆಯಿಂದ ಮುಂದಿನ ಆರು ತಿಂಗಳಲ್ಲಿ ಇಲಾಖೆ 1,250 ಕೋಟಿ ಹೆಚ್ಚವರಿ ವರಮಾನವನ್ನು ನಿರೀಕ್ಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+