"ನಗೆಯ ಲಾಲಿಪಾಪ್ ನೀಡಿ, ವೋಟು ಕೇಳುವ ರಾಹುಲ್ ಒಬ್ಬ ಮಿಮಿಕ್ರಿ ಕಲಾವಿದ"
ನವದೆಹಲಿ, ನವೆಂಬರ್ 14: ರಾಹುಲ್ ಗಾಂಧಿ ಒಬ್ಬ ಉತ್ತಮ ರಾಜಕಾರಣಿಯಲ್ಲ. ಅವರು ಒಬ್ಬ ಉತ್ತಮ ಮಿಮಿಕ್ರಿ ಕಲಾವಿದರಾಗುತ್ತಿದ್ದಾರೆ ಎಂದು ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ ಗೇಲಿ ಮಾಡಿದ್ದಾರೆ.
ನವದೆಹಲಿಯಲ್ಲಿ ಇಂದು(ನ.14) ಪತ್ರಕರ್ತರೊಂದಿಗೆ ಮಾತನಾಡಿದ ನಖ್ವಿ, ಇದೇ ಡಿಸೆಂಬರ್ 9 ಮತ್ತು 14ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗಾಗಿ ವ್ಯಾಪಕ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಟೀಕಿಸಿದರು.

"ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನೀತಿ-ನಿಯಮಗಳಿಲ್ಲ, ಶಿಸ್ತೂ ಇಲ್ಲ. ಒಬ್ಬ ಮಿಮಿಕ್ರಿ ಕಲಾವಿದ ಜನರಿಗೆ ನಗೆಯ ಲಾಲಿಪಾಪ್ ನೀಡಿ ವೋಟು ಕೊಡುವಂತೆ ಕೇಳುತ್ತಿದ್ದಾರೆ" ಎಂದು ಕಾಂಗ್ರೆಸ್ ಯುವರಾಜನನ್ನು ತರಾಟೆಗೆ ತೆಗೆದುಕೊಂಡರು.
ನಿನ್ನೆ(ನ.13) ಗುಜರಾತಿನಲ್ಲಿ ಪ್ರಚಾರ ಸಬೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, 'ಕಳೆದ ಎರಡು ದಶಕಗಳ ಆಳ್ವಿಕೆಯ ನಂತರ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮ್ಯಾಜಿಕ್ ಮಾಡಿ 'ಹಣ' ಮಾಯುವಾಗುವಂತೆ ಮಾಡಿದ್ದಾರೆ. ಇದೇ ಬಿಜೆಪಿಯ ಸಾಧನೆ ಎಂದಿದ್ದರು.












Click it and Unblock the Notifications