Get Updates
Get notified of breaking news, exclusive insights, and must-see stories!

'ನಾನು ಯಾರು?' ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಪಾಪ್ ಕ್ವಿಜ್!

ನವದೆಹಲಿ, ಜುಲೈ 18: 'ನಾನು ಕಾಂಗ್ರೆಸ್' ಎಂದು ಮಾರುದ್ದದ ಟ್ವೀಟ್ ಮಾಡಿ ಸುದ್ದಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ.

ಹರ್ಯಾಣದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಹಲ್ಲೆ ನಡೆಸಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಟ್ವಿಟ್ಟರ್ ಮೂಲಕ ಪ್ರಶ್ನೆಯೊಂದನ್ನು ಕೇಳಿದ್ದಾರೆ.

"ನಾನು ಎಂದಿಗೂ ಶಕ್ತಿಶಾಲಿಗಳಿಗೆ ಮಾತ್ರ ತಲೆಬಾಗುತ್ತೇನೆ. ಯಾರ ಬಳಿ ಅಧಿಕಾರ ಮತ್ತು ಬಲವಿದೆಯೋ ಅವರಷ್ಟೇ ನನಗೆ ಮುಖ್ಯ. ಅಧಿಕಾರದ ಶ್ರೇಣಿಯನ್ನು ದ್ವೇಷ ಮತ್ತು ಭಯ ನಿರ್ವಹಿಸುವಂತೆ ನಾನು ನೋಡಿಕೊಳ್ಳುತ್ತೇನೆ. ದುರ್ಬಲರನ್ನು ಹುಡುಕಿ ಅವರನ್ನು ತುಳಿಯಲು ನಾನು ಪ್ರಯತ್ನಿಸುತ್ತೇನೆ. ಯಾವುದೇ ಮನುಷ್ಯನಿಂದ ನನಗೆಷ್ಟು ಉಪಯೋಗ ಎಂಬುದನ್ನು ನೋಡಿ ಅವರ ಅರ್ಹತೆಯನ್ನು ಅಳೆಯುತ್ತೇನೆ. ಹಾಗಾದರೆ ನಾನು ಯಾರು?" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.

'ಹಾಗಾದರೆ ನಾನು ಯಾರು?' ಎಂಬ ರಾಹುಲ್ ಗಾಂಧಿಯವರ ಪ್ರಶ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿದ್ದೇ? ಗೊತ್ತಿಲ್ಲ. ಅವರು ಅದನ್ನು ನೇರವಾಗಿ ಉಲ್ಲೇಖಿಸಿಲ್ಲ.

Rahul Gandhis pop quiz on twitter

"ಕಾಂಗ್ರೆಸ್ ಒಂದು ಮುಸ್ಲಿಂ ಪಾರ್ಟಿ" ಎಂಬ ತಮ್ಮ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆಯೇ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸಮಜಾಯಿಷಿ ನೀಡಿದ್ದರು.

"ಸಾಲಿನಲ್ಲಿ ಕೊನೆಯಲ್ಲಿ ನಿಂತಿರುವ ವ್ಯಕ್ತಿಯೊಂದಿಗೆ ನಿಲ್ಲುತ್ತೇನೆ. ದೌರ್ಜನ್ಯಕ್ಕೊಳಗಾದವರು, ಮೂಲೆಗುಂಪಾದವರು ಮತ್ತು ಹಲ್ಲೆಗೊಳಗಾದವರ ಪರ ನಾನು ನಿಲ್ಲುತ್ತೇನೆ. ನನಗೆ ಮತ, ಜಾತಿ ಮತ್ತು ನಂಬಿಕೆಗಳು ಮುಖ್ಯವಲ್ಲ. ಯಾರು ನೋವಿನಲ್ಲಿದ್ದಾರೋ ಅವರಿಗೆ ನಾನು ಸಾಂತ್ವನ ನೀಡುತ್ತೇನೆ. ದ್ವೇಷ ಮತ್ತು ಭಯವನ್ನು ನಾನು ಹೋಗಲಾಡಿಸುತ್ತೇನೆ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಕಾಂಗ್ರೆಸ್" ಎಂದು ರಾಹುಲ್ ಗಾಂಧಿ ನಿನ್ನೆ ಟ್ವೀಟ್ ಮಾಡಿದ್ದರು.

ಇದೀಗ ಅಗ್ನಿವೇಶ್ ಮೇಲಿನ ದಾಳಿಯನ್ನಿಟ್ಟುಕೊಂಡು ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಚರ್ಚೆಯ ಕೇಂದ್ರ ಬಿಂದುವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+