• search

ಮೋದಿ ಮೌನ 'ಚುಡಾಯಿಸಿ' ಕವನ ಬರೆದ ರಾಹುಲ್ ಗಾಂಧಿ!

Subscribe to Oneindia Kannada
For new-delhi Updates
Allow Notification
For Daily Alerts
Keep youself updated with latest
new-delhi News
    ನರೇಂದ್ರ ಮೋದಿ ಕುರಿತು ಕವನ ಬರೆದ ರಾಹುಲ್ ಗಾಂಧಿ | Oneindia Kannada

    ನವದೆಹಲಿ, ಅಕ್ಟೋಬರ್ 04: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಉತ್ತಮ ಕವಿಯಂತೂ ಆಗುತ್ತಾರೆ ಎಂಬಷ್ಟರ ಮಟ್ಟಿಗೆ ಟ್ವಿಟ್ಟರ್ ನಲ್ಲಿ ಪ್ರಾಸಬದ್ಧ ಕವನಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

    ಇತ್ತೀಚೆಗಷ್ಟೇ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕವನವೊಂದನ್ನು ಗೀಚಿದ್ದ ರಾಹುಲ್ ಗಾಂಧಿ, ಇದೀಗ ಮತ್ತೊಂದು ಕವನ ಗೀಚಿದ್ದಾರೆ.

    ಯುವಜನರಿಂದ ಹಣ ಕದ್ದು, ಅಂಬಾನಿ ಕಿಸೆಗೆ ತುಂಬಿಸುವ ಚೌಕಿದಾರ: ರಾಹುಲ್ ಆರೋಪ

    ಫ್ರಾನ್ಸ್ ಜೊತೆಗಿನ ರಫೇಲ್ ಯುದ್ಧ ವಿಮಾನ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದೇಕೆ ಎಂದು ಅವರು ತಮ್ಮ ಕವನದಲ್ಲಿ ಪ್ರಶ್ನಿಸಿದ್ದಾರೆ.

    ರಾಹುಲ್ ಕವನದಲ್ಲಿ ಏನಿದೆ?

    "ಭಾರತೀಯ ರೂಪಾಯಿ ಡಾಲರ್ ಎದುರು 73 ರೂಪಾಯಿಗೆ ಕುಸಿದಿದೆ. ಬೆಲೆ ಏರಿಕೆ ದೇಶದಲ್ಲಿ ದಂಗೆ ಎಬ್ಬಿಸಿದೆ. ತೈಲ ಮತ್ತು ಇಂಧನ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆ ಕುಸಿಯುತ್ತಿದೆ. ಇಷ್ಟಾದರೂ 56 ಇಂಚಿನ ಎದೆ ಸೈಲೆಂಟ್ ಮೋಡಿನಲ್ಲಿರುವುದೇಕೆ? ನಿಮ್ಮ ಅಚ್ಚೇ ದಿನದ ಆಣೆ-ಪ್ರಮಾಣಗಳು ಏನಾದವು?" ಎಂದು ತಮ್ಮ ಕವನದಲ್ಲಿ ರಾಹುಲ್ ಪ್ರಶ್ನಿಸಿದ್ದಾರೆ. ಹಿಂದಿ ಭಾಷೆಯಲ್ಲಿರುವ ಈ ಕವನವನ್ನು ಪ್ರಾಸಬದ್ಧವಾಗಿ ಬರೆದ ರಾಹುಲ್ ತಾವೊಬ್ಬ ಉತ್ತಮ ಕವಿ ಎಂಬುದನ್ನು ಸಾಬೀತುಪಡಿಸಿದ್ದಾರೆ!

    ಸಾಹೆಬ್ ಕಾ ಕಮಾಲ್ ದೇಖೋ...

    ಕೆಲ ದಿನಗಳ ಹಿಂದೆ ಟ್ವಿಟ್ಟರ್ ನಲ್ಲಿ ಪದ್ಯ ಬರೆದಿದ್ದ ರಾಹುಲ್ ಗಾಂಧಿ, 'ಸಾಹೆಬ್ ಕಾ ಕಮಾಲ್ ದೇಖೋ...' ಎಂಬ ಸಾಲಿನಿಂದ ಪ್ರಧಾನಿ ಮೋದಿಯವರನ್ನು ಹಳಿದಿದ್ದರು. ರಫೇಲ್ ಡೀಲ್ ನಲ್ಲಿ ಹಗರಣವಾಗಿದ್ದರೂ, ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ, ತೈಲ ಬೆಲೆ ಏರುತ್ತಿದ್ದರೂ ಪ್ರಧಾನಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದೇ ಸಾಹೇಬ ಮಾಡಿದ ಕಮಾಲು ಎಂದಿದ್ದರು ರಾಹುಲ್ ಗಾಂಧಿ!

    ರಫೇಲ್ ಭ್ರಷ್ಟಚಾರಕ್ಕೆ ನೊಂದು ಬಿಜೆಪಿ ತೊರೆದ ಮಹಾರಾಷ್ಟ್ರ ಶಾಸಕ

    ಮತ್ತೊಂದು ಪದ್ಯ

    "ಮೋದಿ-ಅಂಬಾನಿಯವರ ಆಟ ನೋಡಿ, ತಮ್ಮ ಸ್ವಾರ್ಥಕ್ಕಾಗಿ ಎಚ್ ಎಎಲ್ ನಿಂದ ರಫೇಲ್ ಅನ್ನು ಕಿತ್ತುಕೊಂಡಿದ್ದಾರೆ. ಈ ದೇಶದ ಸೈನಿಕ ಬಲಿದಾನಕ್ಕೆ ಬೆಲೆ ಇಲ್ಲ. ರಕ್ಷಣಾ ಸಚಿವರು ರಜೆಯಲ್ಲಿದ್ದಾಗಲೇ, ಬಹುಮಹತ್ವದ ಒಪ್ಪಂದ ನಡೆದಿದೆ. ಈ ಮೂಲಕ ಮೋದಿ ಸರ್ಕಾರ ಜನರಿಗೆ ಮೋದ ಮಾಡುತ್ತಿದೆ" ಎಂದು ಅವರು ದೂರಿದ್ದರು.

    ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?

    ರಾಹುಲ್ ಪದ್ಯದಲ್ಲಿ ಇಣುಕುವ ರಫೇಲ್ ಡೀಲ್ ಏನು?

    ರಾಹುಲ್ ಪದ್ಯದಲ್ಲಿ ಇಣುಕುವ ರಫೇಲ್ ಡೀಲ್ ಏನು?

    ಭಾರತವು ಫ್ರಾನ್ಸ್ ದೇಶದೊಂದಿಗೆ ಯುದ್ಧ ವಿಮಾನ ಖರೀದಿಗಾಗಿ ಮಾಡಿಕೊಂಡ ಒಪ್ಪಂದವೇ ರಫೇಲ್ ಡೀಲ್. ಆದರೆ ರಫೇಲ್ ಯುದ್ಧ ವಿಮಾನಗಳ ಬಿಡಿ ಭಾಗಗಳ ತಯಾರಿಕೆಯ ಜವಾಬ್ದಾರಿಯನ್ನು ಎಚ್ ಎಎಲ್ ಗೆ ನೀಡುವ ಬದಲು ಭಾರತ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಗೆ ಈ ಹೊಣೆ ನೀಡಿದ್ದು ವಿವಾದ ಸೃಷ್ಟಿಸಿದೆ. ರಫೇಲ್ ಗೆ ಸಂಬಂಧಿಸಿದಂತೆ ಬಹುಕೋಟಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ದೂರಿದೆ.

    ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

    ಇನ್ನಷ್ಟು ನವದೆಹಲಿ ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Congress president Rahul Gandhi on his twitter posted many poems on rafale deal. He blames Prime minister Narendra Modi for the alleged scam.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more