ಒಬಿಸಿ/SC/ST ನಾಯಕರನ್ನು ಪಕ್ಷಾಧ್ಯಕ್ಷರನ್ನಾಗಿ ಮಾಡಿ: ರಾಹುಲ್ ಸಲಹೆ

ನವದೆಹಲಿ, ಮೇ 30: ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯಾರಾದರೂ ಒಬಿಸಿ ಅಥವಾ ಎಸ್ಸಿ, ಎಸ್ಟಿ ನಾಯಕರಿಗೆ ನೀಡಿ ಎಂದು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಹಿರಿಯರಿಗೆ ಸಲಹೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪದಿರುವುದು ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಹುಲ್ ಗಾಂಧಿ ಅವರ ಮನವೊಲಿಕೆಗೆ ಕಾಂಗ್ರೆಸ್ ನ ನಾಯಕರು, ಕಾರ್ಯಕರ್ತರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದಿಂದ ಬೇಸರಗೊಂಡಿರುವ ರಾಹುಲ್ ಗಾಂಧಿ, ನಾಯಕತ್ವ ಬದಲಾವಣೆಗೆ ಸ್ವತಃ ಮುಂದಾಗಿದ್ದಾರೆ. ಯಾರ ಮನವೊಲಿಕೆಗೂ ಬಗ್ಗದ ರಾಹುಲ್ ಗಾಂಧಿ, ಪಕ್ಷದ ಚುಕ್ಕಾಣಿಯನ್ನು ಯಾರಾದರೂ ಎಸ್ಸಿ ಎಸ್ಟಿ ನಾಯಕರಿಗೆ ನೀಡಿ ಎಂಬ ಸಲಹೆ ನೀಡಿದ್ದಾರೆ.

Rahul Gandhi suggests to appoint SC, ST or OBC leaders as Congress president

ಮೇ 23 ರಂದು ಬಿಡುಗಡೆಯಾದ ಫಲಿತಾಂಶದಲ್ಲಿ ಕಾಮಗ್ರೆಸ್ ಕೇವಲ 52 ಕ್ಷೇತ್ರಗಳಲ್ಲಷ್ಟೇ ಗೆದ್ದಿತ್ತು. ರಾಜಸ್ಥಾನ, ಗುಜರಾತ್, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮುಂತಾದ ರಾಜ್ಯಗಳಲ್ಲಿ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+