ಪ್ರಧಾನಿ ಮೋದಿಗೆ ನಿದ್ದೆ ಮಾಡೋಕೆ ಬಿಡಲ್ಲ ಎಂದ ರಾಹುಲ್ ಗಾಂಧಿ

Recommended Video

      ಪ್ರಧಾನಿ ಮೋದಿಗೆ ನಿದ್ದೆ ಮಾಡೋಕೆ ಬಿಡಲ್ಲ ಎಂದ ರಾಹುಲ್ ಗಾಂಧಿ | Oneindia Kannada

      ನವದೆಹಲಿ, ಡಿಸೆಂಬರ್ 18: 'ರೈತರ ಸಾಲಮನ್ನಾ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ದೆ ಮಾಡಲು ನಾವು ಬಿಡುವುದಿಲ್ಲ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      "ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ಗಂಟೆಯ ಒಳಗಾಗಿ ರೈತರ ಸಾಲಮನ್ನಾ ಮಾಡಿದೆ. ಈ ಮೂಲಕ ಆದರ್ಶವಾಗಿದೆ. ಈ ಎರಡು ರಾಜ್ಯಗಳನ್ನೇ ಉದಾಹರಣೆಯಾಗಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರೈತರ ಸಾಲಮನ್ನಾ ಮಾಡಬೇಕು" ಎಂದು ರಾಹುಲ್ ಗಾಂಧಿ ಹೇಳಿದರು.

      ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ನಾವು ಸಾಲಮನ್ನಾ ಮಾಡುತ್ತೇವೆ ಎಂದು ಅವರು ಅಭಯ ಸಹ ನೀಡಿದರು.

      ಮೋದಿಯಿಂದ ಇಬ್ಬಗೆ ಭಾರತ ನಿರ್ಮಾಣ

      ಮೋದಿಯಿಂದ ಇಬ್ಬಗೆ ಭಾರತ ನಿರ್ಮಾಣ

      ಪ್ರಧಾನಿ ಮೋದಿಯವರು ಇಬ್ಬಗೆಯ ಭಾರತ ನಿರ್ಮಾಣ ಮಾಡುತ್ತಿದ್ದಾರೆ. ಒಂದು ರೈತರು, ಬಡವರು, ಯುವಕರು ಮತ್ತು ಇನ್ನಿತರ ಸಣ್ಣ ಉದ್ಯಮಿಗಳು. ಇನ್ನೊಂದು ಭಾರತದಲ್ಲಿದೇಶದ ಅಗ್ರ 15 ಉದ್ಯಮಿಗಳನ್ನು ಅವರು ಬೆಳೆಸುತ್ತಿದ್ದಾರೆ ಎಂದು ಅವರು ದೂರಿದರು.

      ಮೋದಿಗೆ ನಿದ್ದೆ ಮಾಡಲು ಬಿಡುವುದಿಲ್ಲ.

      ಮೋದಿಗೆ ನಿದ್ದೆ ಮಾಡಲು ಬಿಡುವುದಿಲ್ಲ.

      ಪ್ರಧಾನಿ ನರೇಂದ್ರ ಮೋದಿಯವರು ಒಂದು ಕ್ಷಣ ನಿದ್ದೆ ಮಾಡುವುದಕ್ಕೆ, ಒಂದು ಕ್ಷಣವೂ ವಿಶ್ರಾಂತಿ ಪಡೆಯುವುದಕ್ಕೆ ನಾವು ಬಿಡುವುದಿಲ್ಲ. ಅವರು ರೈತರ ಸಾಲಮನ್ನಾ ಮಾಡಬೇಕು. ಇಂದಿನವರೆಗೂ ಪ್ರಧಾನಿ ಮೋದಿ ಒಂದೇ ಒಂದು ರೂಪಾಯಿ ಸಾಲವನ್ನೂ ಮನ್ನಾ ಮಾಡಿಲ್ಲ- ರಾಹುಲ್ ಗಾಂಧಿ

      ಅಪನಗದೀಕರಣ ಅತೀ ದೊಡ್ಡ ಹಗರಣ

      ಅಪನಗದೀಕರಣ ಅತೀ ದೊಡ್ಡ ಹಗರಣ

      ಅಪನಗದೀಕರಣವೇ ಈ ದೇಶದ ಬಹುದೊಡ್ಡ ಹಗರಣ. ಜೆಪಿಸಿ(ಜಂಟಿ ಸಂಸದೀಯ ಮಂಡಳಿ), ರಫೇಲ್, ರೈತರ ಸಾಲಮನ್ನಾ, ಅಪನಗದೀಕರಣ ಮುಂತಾದ ಪ್ರಮಾದಗಳು ಸದ್ಯದಲ್ಲೇ ಹೊರಬರಲಿವೆ. ಜನರಿಗೆ ಸುಳ್ಳು ಹೇಳಲಾಗುತ್ತಿದೆ. ಅವರನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಅಪನಗದೀಕರಣ ಈ ದೇಶದ ಬಹುದೊಡ್ಡ ಹಗರಣ- ರಾಹುಲ್ ಗಾಂಧಿ

      ಸಜ್ಜನ್ ಕುಮಾರ್ ಬಗ್ಗೆ ಸೊಲ್ಲೆತ್ತದ ರಾಹುಲ್

      ಸಜ್ಜನ್ ಕುಮಾರ್ ಬಗ್ಗೆ ಸೊಲ್ಲೆತ್ತದ ರಾಹುಲ್

      1984 ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ನೀಡಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಲು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದರು. ಸಿಖ್ ದಂಗೆಯ ಬಗ್ಗೆ ನನ್ನ ನಿಲುವನ್ನು ಈ ಮೊದಲೇ ನಾನು ಸ್ಪಷ್ಟಪಡಿಸಿದ್ದೇನೆ. ಈ ಪತ್ರಿಕಾಗೋಷ್ಠಿ ಏರ್ಪಡಿಸಿದ್ದು ರೈತರ ಬಗ್ಗೆ ಮಾತನಾಡುವುದಕ್ಕೆ ಮತ್ತು ರೈತರ ಸಾಲಮನ್ನಾಗಿ ಪ್ರಧಾನಿಯವರನ್ನು ಒತ್ತಾಯಿಸುವುದಕ್ಕೆ. ಬೇರೆ ವಿಷಯಗಳ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+