ಟ್ವಿಟ್ಟರಲ್ಲಿ ಅಪಹಾಸ್ಯಕ್ಕೀಡಾದ ರಾಹುಲ್ 'ಭೂಕಂಪ'ದ ಮಾತು

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 09 : "ನಾನು ಲೋಕಸಭೆಯಲ್ಲಿ ಮಾತು ಆರಂಭಿಸಿದರೆ ಭೂಕಂಪವಾಗುತ್ತದೆ" ಎಂಬ ರಾಹುಲ್ ಗಾಂಧಿ ಅವರ ಅಬ್ಬರದ ನುಡಿಗಳು, ಆಡಳಿತ ಪಕ್ಷದ ನಾಯಕರಲ್ಲಿ ನಡುಕ ತರುವ ಬದಲು, ಗಹಗಹಿಸಿ ನಗುವಂತಾಗಿದೆ. ಅವರ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಅಪಹಾಸ್ಯಕ್ಕೀಡಾಗುತ್ತಿವೆ.

ನೋಟು ನಿಷೇಧದ ಯಜ್ಞ ನಡೆದು ಸರಿಯಾಗಿ ಒಂದು ತಿಂಗಳು ಮುಗಿದಿರುವ ಸಂದರ್ಭದಲ್ಲಿ, ನರೇಂದ್ರ ಮೋದಿಯವರ ಈ ನಡೆ ಮೂರ್ಖತನದ್ದು ಎಂದು ತೀವ್ರವಾಗಿ ಟೀಕಿಸುತ್ತಿರುವ ರಾಹುಲ್ ಗಾಂಧಿ, "ಅಪನಗದೀಕರಣದ ಚರ್ಚೆಯಿಂದ ಕೇಂದ್ರ ಸರಕಾರ ಪಲಾಯನ ಮಾಡುತ್ತಿದೆ. ಲೋಕಸಭೆಯಲ್ಲಿ ನಾನು ಮಾತನಾಡಿದರೆ ಭೂಕಂಪವಾಗುತ್ತದೆ" ಎಂದು ಶುಕ್ರವಾರ ಅಬ್ಬರಿಸಿದ್ದರು.[ಮಾತಾಡಲು ಬಿಡಿ, ಭೂಕಂಪ ಏನಂತ ತೋರಿಸ್ತೀನಿ : ರಾಹುಲ್]

Rahul Gandhi's eathquake statement mocked in Twitter

ರಾಹುಲ್ ಗಾಂಧಿಯವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಳ್ಳದ ವಿರೋಧ ಪಕ್ಷದ ನಾಯಕರು, "ಎಲ್ಲ ಹಗರಣಗಳ ಕೇಂದ್ರ ಅವರ (ಕಾಂಗ್ರೆಸ್) ಪಕ್ಷದಲ್ಲಿಯೇ ಇದೆ" ಎಂದು ಟ್ವಿಟ್ಟರ್ ನಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ.

"ಕಳೆದ 60 ವರ್ಷಗಳಿಂದ ಎಲ್ಲ ಹಗರಣಗಳ ಕೇಂದ್ರಬಿಂದುವಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಈಗ 'ಭೂಕಂಪ'ದ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ರಾಜಕೀಯ ಭೂಕಂಪಗಳಿಗಲ್ಲ, ರಾಜಕೀಯ ಕಪಟ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ" ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಅವರು ಅಣಕವಾಡಿದ್ದಾರೆ. [ನಗದು ಬದಲು ಕಾರ್ಡ್ ಬಳಸುವವರಿಗೆ ಭರ್ಜರಿ ರಿಯಾಯಿತಿ]

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಬರ್ಖಾ ದತ್, 'ನೋಟು ನಿಷೇಧಕ್ಕಾಗಿ ನನ್ನನ್ನು ಕೊಂದರೂ ಅಚ್ಚರಿಯಿಲ್ಲ ಅಂತ ಮೋದಿ ಹೇಳಿದ್ದರು, ನನ್ನ ಜೀವಕ್ಕೂ ಬೆದರಿಕೆಯಿದೆ ಎಂದು ಮಮತಾ ಬ್ಯಾನರ್ಜಿ ನುಡಿದಿದ್ದರು, ಈಗ ರಾಹುಲ್ ಗಾಂಧಿ ಭೂಕಂಪದ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಅಪಹಾಸ್ಯ ಮಾಡಿದ್ದಾರೆ.

ಆಕ್ಸಿಸ್ ಬ್ಯಾಂಕ್ ನ ಮಾಜಿ ಹಿರಿಯ ಉಪಾಧ್ಯಕ್ಷ ಎನ್ ಮೋಹನ್ ರಾಜಾ ಎಂಬುವವರು, 'ವಾಟ್ ಎ ಜೋಕ್! ರಾಹುಲ್ ಗಾಂಧಿ ಅವರ ಮಾತುಗಳು ಎಂದಿಗೂ ನಗೆಬುಗ್ಗೆ ಉಕ್ಕಿಸುವಂತಿರುತ್ತವೆ. LOL' ಎಂದು ಟ್ವೀಟಿಸಿದ್ದಾರೆ. ಅರವಿಂದ್ ಸಾಯಿ ಎಂಬುವವರು, ಎಲ್ಲಿ ಇಟಲಿಯಲ್ಲಿ ಭೂಕಂಪವಾಗುತ್ತದಾ ಎಂದು ಜೋಕ್ ಕತ್ತರಿಸಿದ್ದಾರೆ. [ನಿದ್ದೆ ಮಾಡಿದ ರಾಹುಲ್ ಗೆ ಗುದ್ದು ನೀಡಿದ ಟ್ವಿಟ್ಟರ್]

ಈ ಬಗ್ಗೆ ಟ್ವಿಟ್ಟರಲ್ಲಿ ಚರ್ಚೆ ನಡೆಯುತ್ತಿರುವಾಗಲೇ ನ್ಯೂಜಿಲೆಂಡ್ ನಲ್ಲಿ 2.8 ಪ್ರಮಾಣದ ಭೂಕಂಪವಾದ ವರದಿ ಬಂದಿದೆ. ಆಸ್ಟ್ರೇಲಿಯಾದ ಕಲ್ವರ್ಡನ್ ಎಂಬಲ್ಲಿಂದ 10 ಕಿ.ಮೀ. ದೂರದಲ್ಲಿ ಬೆಳಿಗ್ಗೆ 8.29ಕ್ಕೆ 2.9 ಪ್ರಮಾಣದ ಭೂಕಂಪ ಸಂಭವಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tweeples are making fun of statement by Rahul Gandhi on demonetisation. He had said if he is allowed to speak, he will show what an earthquake is. But, instead of taking his word seriously people on twitter are making fun of it.
Please Wait while comments are loading...