• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್ ಗಾಂಧಿ ವ್ಯಂಗ್ಯದ ಬಲೆಗೆ ಸಿಕ್ಕಿದ 'ಕಪ್ಪುಹಣ ಮತ್ತು ಮೋದಿ!'

|

ನವದೆಹಲಿ, ಜೂನ್ 30: ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಚಾಯಿಸುವುದೇನು ಹೊಸ ವಿಷಯವಲ್ಲ. ಇದೀಗ ಸ್ವಿಸ್ ಬ್ಯಾಂಕಿನ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಮೋದಿಯವರನ್ನು ಲೇವಡಿ ಮಾಡಿದ್ದಾರೆ.

2017ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿರುವ ಹಣದ ಪ್ರಮಾಣ ಶೇ 50ರಷ್ಟು ಹೆಚ್ಚಳವಾಗಿದೆ ಎಂಬ ವರದಿ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ವಿದೇಶದಲ್ಲಿರುವ ಕಪ್ಪುಹಣದ ಮಾಹಿತಿ ಶೀಘ್ರದಲ್ಲೇ ಹೊರಕ್ಕೆ: ಗೋಯಲ್

'2018 ರಲ್ಲಿ ಸ್ವಿಸ್ ಬ್ಯಾಂಕಿನಲ್ಲಿರುವ ಠೇವಣಿಯೆಲ್ಲ ಅಧಿಕೃತ(ವೈಟ್ ಮನಿ) ಹಣವಾಗಲಿದ್ದು, ಕಪ್ಪು ಹಣ ಇರುವುದೇ ಇಲ್ಲ, ಆದ್ದರಿಂದ ಅದನ್ನು ತರುವ ಪ್ರಮೇಯವೇ ಬರುವುದಿಲ್ಲ' ಎಂದು ಮೋದಿ ಹೇಳಿದ್ದಾರೆ ಎಂದು ರಾಹುಲ್ ಲೇವಡಿ ಮಾಡಿ ಟ್ವೀಟಿಸಿದ್ದಾರೆ!

ರಾಹುಲ್ ಟ್ವೀಟ್ ನಲ್ಲೇನಿದೆ?

ರಾಹುಲ್ ಟ್ವೀಟ್ ನಲ್ಲೇನಿದೆ?

2014 ರಲ್ಲಿ ಮೋದಿ ಹೇಳಿದ್ದರು: ಸ್ವಿಸ್ ಬ್ಯಾಂಕಿನಿಂದ ಎಲ್ಲಾ ಕಪ್ಪುಹಣವನ್ನು ತಂದು ಪ್ರತಿ ಭಾರತೀಯನ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ.

2016 ರಲ್ಲಿ ಹೇಳಿದರು ಅಪನಗದೀಕರಣ ಎಲ್ಲಾ ಕಪ್ಪು ಹಣದ ಸಮಸ್ಯೆಯನ್ನು ನೀಗಿಸುತ್ತದೆ ಎಂದು.

2018 ರಲ್ಲಿ ಹೇಳುತ್ತಿದ್ದಾರೆ, ಸ್ವಿಸ್ ಬ್ಯಾಂಕಿನಲ್ಲಿರುವ ಠೇವಣಿ ಶೇ.50 ರಷ್ಟು ಹೆಚ್ಚಾಗಿದ್ದು, ಅಲ್ಲಿರುವ ಹಣವೆಲ್ಲವೂ ವೈಟಾಗಿದೆ. ಆದ್ದರಿಂದ ಸ್ವಿಸ್ ಬ್ಯಾಂಕಿನಲ್ಲಿ ಯಾವುದೇ ಕಪ್ಪು ಹಣವಿಲ್ಲ ಎಂದು! ಹೀಗೆ ಲೇವಡಿ ಮಾಡಿದ್ದಾರೆ ರಾಹುಲ್ ಗಾಂಧಿ.

ಬಿಜೆಪಿ ಏನೆನ್ನುತ್ತದೆ?

ಕಪ್ಪು ಹಣದ ಕುರಿತಂತೆ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಒಪ್ಪಂದ ನಡೆದಿದ್ದು, ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಎಲ್ಲ ಮಾಹಿತಿ ಲಭ್ಯವಾಗಲಿವೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯಲ್ ಹೇಳಿದ್ದರು. ಮುಂಬರುವ ಲೋಕಸಭಾ ಚುನಾವಣೆಯ ಹೊತ್ತಲ್ಲೇ ಈ ವರದಿಯೂ ಬಂದರೆ ಅದು ಆಡಳಿತ ಪಕ್ಷಕ್ಕೆ ಲಾಭವಾಗಲಿದೆ. ಆದರೆ ಇಷ್ಟು ದಿನ ಸುಮ್ಮನಿದ್ದು, ಚುನಾವಣೆಯ ವರ್ಷ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಬಿಜೆಪಿ ಹೇಳಿರುವುದು ವಿಪಕ್ಷಗಳನ್ನು ಕೆಂಡವಾಗಿಸಿದೆ. ಆದರೆ 'ಉಭಯ ದೇಶಗಳ ನಡುವೆ ಒಪ್ಪಂದ ಇದ್ದಿದ್ದೇ ಹಾಗೆ, ಸ್ವಿಸ್ ಹಣದ ಬಗ್ಗೆ ನಾವು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದ್ದೇವೆ' ಎಂದು ಬಿಜೆಪಿ ಸಮಜಾಯಿಷಿ ನೀಡಿದೆ.

ಕಪ್ಪು ಹಣವನ್ನು ನೀವೇ ಕಳಿಸಿ, ನೀವೇ ವಾಪಸ್ ತರಿಸುತ್ತೀರಾ?

ನೀವು ಕಪ್ಪು ಹಣ ವಾಪಸ್ ತರುವುದಾಗಿ ಪ್ರಾಮಿಸ್ ಮಾಡಿ ನಾಲ್ಕು ವರ್ಷಗಳು ಕಳೆದಿವೆ ಅರುಣ್ ಜೇಟ್ಲಿಯವರೇ. ಬ್ಲಾಕ್ ಮನಿಯನ್ನು ವಿದೇಶಗಳಿಗೆ ಕಳಿಸಲು ಸುಲಭವಾಗುವಂತೆ ಮಾಡಿದವರೇ ನೀವು. ಇದೀಗ ನೀವೇ ಅದನ್ನು ವಾಪಸ್ ತರುವುದಾಗಿ ಹೇಳುತ್ತೀರಾ? ನಿಮ್ಮನ್ನು ಇನ್ನು ಮುಂದೆ ಯಾರೂ ನಂಬುವುದಿಲ್ಲ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್.

ಅಪನಗದೀಕರಣದ ಹಣ ಎಲ್ಲಿ ಹೋಯ್ತು?

ಭಾರತೀಯರ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಶೇ.50 ರಷ್ಟು ಹೆಚ್ಚಾಗಿದೆಯಂತೆ. ಇದು ನನ್ನ ಅಭಿಪ್ರಾಯವಲ್ಲ. ಸ್ವಿಸ್ ಬ್ಯಾಂಕ್ ನೀಡಿದ ವರದಿ. ನರೇಂದ್ರ ಮೋದಿ ಮತ್ತು ಅರುಣ್ ಜೇಟ್ಲಿ ಅವರೇ ದಯವಿಟ್ಟು ಹೇಳಿ... ನಿಮ್ಮ ಅಪನಗದೀಕರಣದ ಹಣ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದ್ದಾರೆ ವಿಷ್ಣು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress president Rahul Gandhi again critiseses prime minister Narendra Modi over black money in swiss bank. Earlier Finance Minister Piyush Goyel said, the government would receive information on the money held in Swiss banks by next year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more