ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಹೆದರುಪುಕ್ಕಲರು ಎಂದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಫೆಬ್ರವರಿ 7: "ಮೋದಿ ಜೀ ನಿಮಗೆ ಐವತ್ತಾರು ಇಂಚಿನ ಎದೆ ಇದೆ ಎಂದು ಹೇಳ್ತೀರಿ. ನನ್ನ ಜತೆ ನೇರಾನೇರ ಚರ್ಚೆಗೆ ಬನ್ನಿ ಎಂದು ಸವಾಲು ಮಾಡುತ್ತಿದ್ದೇನೆ. ನಿಮಗೆ ಸವಾಲು ಮಾಡುತ್ತಿದ್ದೇನೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.

ರಾಷ್ಟ್ರಿಯ ಭದ್ರತೆ ಹಾಗೂ ರಫೇಲ್ ಒಪ್ಪಂದದ ವಿಚಾರದಲ್ಲಿ ಐದು ನಿಮಿಷ ನನ್ನ ಜತೆಗೆ ಚರ್ಚೆಗೆ ಬನ್ನಿ ಎಂದು ಗುರುವಾರದಂದು ಪಂಥಾಹ್ವಾನ ನೀಡಿದ್ದರೆ ರಾಹುಲ್. " ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ. ನರೇಂದ್ರ ಮೋದಿ ಜೀ ವೇದಿಕೆಯಲ್ಲಿ ನನ್ನ ಜತೆ ಚರ್ಚೆಗೆ ಬರಲಿ. ಅವರಿಗೆ ಭಯ. ಅವರೊಬ್ಬ ಹೇಡಿ (ಡರ್ ಪೋಕ್). ನನಗೆ ಅದು ಗೊತ್ತಾಗಿದೆ" ಎಂದು ಅವರು ಹೇಳಿದ್ದಾರೆ.

ಬಿಜೆಪಿಗೆ ಧಿಕ್ಕಾರ ಎನ್ನಬೇಡಿ, ಅವರನ್ನು ಪ್ರೀತಿಯಿಂದ ಸೋಲಿಸೋಣ: ರಾಹುಲ್ ಬಿಜೆಪಿಗೆ ಧಿಕ್ಕಾರ ಎನ್ನಬೇಡಿ, ಅವರನ್ನು ಪ್ರೀತಿಯಿಂದ ಸೋಲಿಸೋಣ: ರಾಹುಲ್

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ವಿಭಾಗವನ್ನು ಉದ್ದೇಶಿಸಿ ಮಾತನಾಡಿದರು. ಅವರ ಮಾತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಈ ಹಿಂದೆ ಕೂಡ ಹಲವು ಸಲ ಚರ್ಚೆಗಾಗಿ ಪ್ರಧಾನಿ ಮೋದಿಗೆ ವೇದಿಕೆ ಮೇಲೆ ಚರ್ಚೆಗೆ ಆಹ್ವಾನ ನೀಡಲಾಗಿದೆ. ರಫೇಲ್ ವ್ಯವಹಾರದ ಬಗ್ಗೆ ಚರ್ಚಿಸಲು ಕಳೆದ ವರ್ಷದ ನವೆಂಬರ್ ನಲ್ಲಿ ಕೂಡ ಇದೇ ರೀತಿ ಚರ್ಚೆಗೆ ಪಂಥಾಹ್ವಾನ ನೀಡಿದ್ದರು.

Rahul Gandhi criticises PM Modi and call him Darpok

ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. "ಚೌಕೀದಾರ್ ಚೋರ್ ಹೈ" (ಕಾಯುವವನೇ ಕಳ್ಳ) ಎಂಬ ಘೋಷ ವಾಕ್ಯವನ್ನು ಮೋದಿ ಅವರ ವಿರುದ್ಧ ಹುಟ್ಟುಹಾಕಿದ್ದಾರೆ. ಉದ್ಯಮಿ ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಈ ವ್ಯವಹಾರದ ಹಿಂದಿದೆ ಎಂದು ಆರೋಪ ಕೂಡ ಮಾಡಿದ್ದಾರೆ.

English summary
AICC president Rahul Gandhi criticises PM Narendra Modi for not accepting his challenge to discuss about Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X