• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್ ಭ್ರಷ್ಟಾಚಾರ: ಮೋದಿ ವಿರುದ್ಧ ತನಿಖೆ ನಡೆಯಲಿ ಎಂದ ರಾಹುಲ್

|

ನವದೆಹಲಿ, ಜನವರಿ 4: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರ ಮತ್ತು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿದ ಕಾರಣಕ್ಕಾಗಿ ತನಿಖೆ ನಡೆಸುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

'ಸಂಸತ್ ನಿಂದ ಓಡಿಹೋದ ಮೋದಿಯಿಂದ ಪಂಜಾಬ್ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ'

ಸ್ವೀಡನ್ ಟೆಲಿಕಾಂ ಕಂಪೆನಿ ಎರಿಕ್ಸನ್, ಅನಿಲ್ ಅಂಬಾನಿ 550 ಕೋಟಿ ರೂ. ಕಂಪೆನಿಗೆ ಪಾವತಿಸಬೇಕಾಗಿದ್ದು ಅಲ್ಲಿಯವರೆಗೂ ಅವರನ್ನು ಬಂಧಿಸಿ ವಿದೇಶಕ್ಕೆ ತೆರಳದಂತೆ ನಿರ್ಬಂಧಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ ಎಂಬುದಾಗಿ ದಿ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟವಾದ ವರದಿಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.

'ಮೂರು' ಮರೆತ ರಾಹುಲ್ ಗಾಂಧಿ, ಕಾಲೆಳೆದ ಟ್ರೋಲ್ ಹೈಕ್ಳು!

ಭ್ರಷ್ಟಾಚಾರದ ಜೊತೆಗೆ ತಮ್ಮ ಸ್ನೇಹಿತ ಮತ್ತು ಅಂತಾರಾಷ್ಟ್ರೀಯ ಸಾಲಗಾರ ಅನಿಲ್ ಅಂಬಾನಿ ಅವರಿಗೆ ರಫೇಲ್ ಒಪ್ಪಂದವನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

500 ಕೋಟಿ ರೂ. ಮರುಪಾವತಿಗೆ ಸಂಬಂಧಿಸಿದಂತೆ ಅಂಬಾನಿ ಅವರ ರಿಲಯನ್ಸ್ ಕಮ್ಯುನಿಕೇಷನ್ ಮತ್ತು ಎರಿಕ್ಸನ್ ಕಂಪೆನಿಗಳು ಕಾನೂನು ಸಮರ ನಡೆಸಿವೆ.

English summary
Congress President Rahul Gandhi demanded for investigation against Narendra Modi for corruption and weakening national security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X