ರಫೇಲ್ ತೀರ್ಪು: ಮೇಲ್ಮನವಿ ಸಲ್ಲಿಸಲಿರುವ ಅರುಣ್ ಶೌರಿ, ಯಶವಂತ್ ಸಿನ್ಹಾ
ನವದೆಹಲಿ, ಜನವರಿ 2: ರಫೇಲ್ ಒಪ್ಪಂದದ ಜಂಟಿ ಸಂಸದೀಯ ಸಮಿತಿ ತನಿಖೆಗೆ ನಿರಾಕರಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರೊಂದಿಗೆ ವಕೀಲ ಪ್ರಶಾಂತ್ ಭೂಷಣ್ ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದ್ದಾರೆ.
ಡಿಸೆಂಬರ್ 14ರಂದು ಸುಪ್ರೀಂಕೋರ್ಟ್ ನೀಡಿದ ರಫೇಲ್ ಡೀಲ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಲಿದ್ದಾರೆ.
ಅವರೊಂದಿಗೆ ಇನ್ನಿಬ್ಬರು ಅರ್ಜಿದಾರರಾದ ಶೌರಿ ಮತ್ತು ಸಿನ್ಹಾ ಅವರು ತೀರ್ಪನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಮರುಪರಿಶೀಲನಾ ಅರ್ಜಿಯನ್ನು ತೆರೆಯ ಕೋರ್ಟ್‌ನಲ್ಲಿ ಮೌಖಿಕ ವಿಚಾರಣೆಗೆ ಒಳಪಡಿಸುವಂತೆಯೂ ಕೋರಿದ್ದಾರೆ.

ತೀರ್ಪಿನಲ್ಲಿ ಹಲವು ದೋಷಗಳಿವೆ. ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಹಿ ಹಾಕದೆ ನೀಡಿದ ತಪ್ಪಾದ ವಿವರಣೆಗಳನ್ನು ಆಧಾರವಾಗಿಟ್ಟುಕೊಂಡು ತೀರ್ಪು ನೀಡಲಾಗಿದ್ದು, ಇದು ಸ್ವಾಭಾವಿಕ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ತೀರ್ಪು ನೀಡಿದ ಬಳಿಕ ಅನೇಕ ಹೊಸ ಸಂಗತಿಗಳು ಬಹಿರಂಗವಾಗಿವೆ. ಇವುಗಳ ಬಗ್ಗೆಯೂ ವಿಚಾರಣೆ ನಡೆಯುವ ಅಗತ್ಯವಿದೆ ಎಂದಿದ್ದಾರೆ.












Click it and Unblock the Notifications