ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್ : ಜೆಪಿಸಿಯಿಂದ ತನಿಖೆ ನಿರಾಕರಿಸಿದ ಅರುಣ್ ಜೇಟ್ಲಿ

|
Google Oneindia Kannada News

ನವದೆಹಲಿ, ಡಿಸೆಂಬರ್ 17 : ಬೋಫೋರ್ಸ್ ಲಂಚ ಹಗರಣ ಮತ್ತು ರಫೇಲ್ ಯುದ್ಧ ವಿಮಾನ ಪ್ರಕರಣವನ್ನು ಸಮಾನ ಎಂದು ಸಾಧಿಸಲು ರಾಹುಲ್ ಗಾಂಧಿ ಅವರು ವಿಫಲ ಯತ್ನ ನಡೆಸಿದ್ದಾರೆ ಎಂದಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯನ್ನು ನಿರಾಕರಿಸಿದ್ದಾರೆ.

ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್ ದೇಶದಿಂದ ಕೊಳ್ಳುವುದು ಎನ್ಡಿಎ ಸರಕಾರದ ಆಯ್ಕೆ ಮಾತ್ರ ಆಗಿರಲಿಲ್ಲ, ಅದವ ಯುಪಿಎ ಸರಕಾರ ಕೂಡ ವಾಯು ಸೇನೆಗೆ ಅಗತ್ಯವಾಗಿ ಬೇಕಾಗಿದ್ದ ಈ ಯುದ್ಧ ವಿಮಾನಗಳನ್ನು ಕೊಳ್ಳಲು ಯತ್ನಿಸಿತ್ತು ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಹಿಂದೆ ಕೂಡ ರಫೇಲ್ ನಂಥ ಅಗ್ನಿ ಪರೀಕ್ಷೆ ಎದುರಿಸಿತ್ತು! ಬಿಜೆಪಿ ಹಿಂದೆ ಕೂಡ ರಫೇಲ್ ನಂಥ ಅಗ್ನಿ ಪರೀಕ್ಷೆ ಎದುರಿಸಿತ್ತು!

ಸರ್ವೋಚ್ಚ ನ್ಯಾಯಾಲಯ ರಫೇಲ್ ಕೊಳ್ಳುವಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿರುವುದರಿಂದ, ವಿರೋಧಿಗಳು ಈ ಡೀಲ್ ಬಗ್ಗೆ ಅನಗತ್ಯವಾಗಿ ವಿವಾದದ ಧೂಳು ಎಬ್ಬಿಸಲು ಯತ್ನಿಸಿರುವುದು ಸಾಬೀತಾಗಿದೆ. ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ಕ್ಲೀನ್ ಚಿಟ್ ನೀಡಿಲ್ಲ, ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಲೇಬೇಕು ಎಂದು ವಿರೋಧ ಪಕ್ಷದವರು ಪಟ್ಟು ಹಿಡಿದಿರುವುದಕ್ಕೆ ಅವರು ತಮ್ಮ ಬ್ಲಾಗ್ ನಲ್ಲಿ ನೀಡಿರುವ ಪ್ರತಿಕ್ರಿಯೆಯಿದು.

Rafale deal : Arun Jaitley denies JPC probe

ವಿರೋಧ ಪಕ್ಷದ ವಾದದಲ್ಲಿ ಯಾವುದೇ ಹುರುಳಿಲ್ಲದಿರುವುದು ಸಾಬೀತಾಗುತ್ತದೆಂಬ ಕಾರಣದಿಂದ, ಸಂಸತ್ತಿನಲ್ಲಿ ರಫೇಲ್ ಡೀಲ್ ಕುರಿತ ಚರ್ಚೆಯನ್ನು ತಪ್ಪಿಸಿಕೊಳ್ಳಲು ಕಾಂಗ್ರೆಸ್ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಒತ್ತಾಯಿಸುತ್ತಿದೆ ಎಂದು ಅರುಣ್ ಜೇಟ್ಲಿ ವಾಗ್ದಾಳಿ ಮಾಡಿದ್ದಾರೆ.

ರಫೇಲ್: 126 ವಿಮಾನಗಳ ಬದಲು 36 ವಿಮಾನದ ಒಪ್ಪಂದ ನಡೆದಿದ್ದು ಹೀಗೆ ರಫೇಲ್: 126 ವಿಮಾನಗಳ ಬದಲು 36 ವಿಮಾನದ ಒಪ್ಪಂದ ನಡೆದಿದ್ದು ಹೀಗೆ

ವಿಶ್ವಾಸಾರ್ಹತೆಯನ್ನು ಬಲಿಕೊಟ್ಟಾದರೂ ಸರಿ ಎಂದು ಕಾಂಗ್ರೆಸ್ ಸುಳ್ಳನ್ನು ಸೃಷ್ಟಿಸಿದೆ ಎಂದು ಅವರು ಆರೋಪಿಸಿದ್ದಾರೆ. ಬೋಫೋರ್ಸ್ ಕಳಂಕವನ್ನು ತೊಡೆದು ಹಾಕುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರಕಾರದ ಮೇಲೆ ಅನಗತ್ಯವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಜೇಟ್ಲಿ ಟೀಕಿಸಿದ್ದಾರೆ.

ಕಿವುಡನಿಗೆ ಉತ್ತರ ಕೇಳಿಸುವುದಿಲ್ಲ: ರಾಹುಲ್‌ ವಿರುದ್ಧ ಜೇಟ್ಲಿ ವ್ಯಂಗ್ಯ ಕಿವುಡನಿಗೆ ಉತ್ತರ ಕೇಳಿಸುವುದಿಲ್ಲ: ರಾಹುಲ್‌ ವಿರುದ್ಧ ಜೇಟ್ಲಿ ವ್ಯಂಗ್ಯ

ಮೋದಿ ಅಡಿಯಲ್ಲಿ ಎನ್ಡಿಎ ಸರಕಾರ ಅತ್ಯಂತ ಪಾರದರ್ಶಕವಾಗಿ ಆಡಳಿತ ನಡೆಸುತ್ತಿರುವುದರಿಂದ ಮಧ್ಯವರ್ತಿಗಳು ಮತ್ತು ಹಗರಣಗಳಲ್ಲಿ ಸಿಲುಕಿಕೊಂಡವರು ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ. ಯುಪಿಎ ಸರಕಾರವಿದ್ದಾಗ ಹಗರಣ ಮಾಡಿ ಪರಾರಿಯಾದವರನ್ನು ಭಾರತಕ್ಕೆ ಈಗ ಹಸ್ತಾಂತರಿಸಲಾಗುತ್ತಿದೆ. ಇವರಲ್ಲಿ ಯಾರು ಏನು ಬಾಯಿಬಿಡುತ್ತಾರೋ ಎಂಬ ಹೆದರಿಕೆ ಕಾಂಗ್ರೆಸ್ ನಲ್ಲಿ ಮನೆಮಾಡಿದೆ ಎಂದು ಅರುಣ್ ಜೇಟ್ಲಿ, ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದಲ್ಲಿ ಬಂಧಿಯಾಗಿರುವ ಕ್ರಿಶ್ಚಿಯನ್ ಮೈಕೆಲ್ ಬಗ್ಗೆ ಪ್ರಸ್ತಾಪಿಸಿ ವ್ಯಂಗ್ಯ

English summary
Rafale deal : Finance minister Arun Jaitley has denied JPC probe in the purchase of fighter jet plane from France government. He alleged Rahul Gandhi opposition to Rafale was intended to get rid of Bofors taint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X