ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Jahangirpuri Violence: ಪುಷ್ಪಾ ಸ್ಟೈಲ್‌ನಲ್ಲಿ ಬಿಂದಾಸ್ ಆಗಿ ಕೋರ್ಟ್ ಆವರಣ ಪ್ರವೇಶಿಸಿದ ಆರೋಪಿ

|
Google Oneindia Kannada News

ನವದೆಹಲಿ, ಏ. 18: ಹನುಮಾನ್ ಜಯಂತಿ ಸಂದರ್ಭದಲ್ಲಿ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಸಂಭವಿಸಿದ ಕೋಮು ಹಿಂಸಾಚಾರ ಘಟನೆಯಲ್ಲಿ ಪೊಲೀಸರು 21 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಇವರ ಪೈಕಿ ನಿನ್ನೆ ಭಾನುವಾರ ಸಂಜೆ 14 ಆರೋಪಿಗಳನ್ನ ರೋಹಿಣಿ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಈ 14 ಮಂದಿಯಲ್ಲಿ ಪ್ರಮುಖ ಆರೋಪಿಗಳೆನಿಸಿರುವ ಅನ್ಸಾರ್ ಮತ್ತು ಅಸ್ಲಮ್ ಎಂಬಿಬ್ಬರನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ ಮಾಡಿತು. ಉಳಿದ 12 ಮಂದಿಯನ್ನು ನ್ಯಾಯಾಂಗ ಕಸ್ಟಡಿಗೆ ಕೊಡಲಾಗಿದೆ.

ಹಿಂಸಾಚಾರದಲ್ಲಿ ಹಲವಾರು ಮಂದಿಗೆ ಗಾಯವಾಗಿದ್ದರೂ ಆರೋಪಿಗಳ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಇಲ್ಲದಿರುವುದು ನಿನ್ನೆ ಒಬ್ಬ ಆರೋಪಿಯ ವರ್ತನೆಯಿಂದ ವೇದ್ಯವಾಯಿತು. ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಆರೋಪಿಗಳನ್ನ ನಿನ್ನೆ ಕರೆದೊಯ್ಯುವಾಗ ಪ್ರಮುಖ ಆರೋಪಿ ಅನ್ಸಾರ್ ಮಾಧ್ಯಮದವರನ್ನು ಕಂಡ ಕೂಡಲೇ ಪುಷ್ಪಾ ಸಿನಿಮಾ ಸ್ಟೈಲ್‌ನಲ್ಲಿ ವರ್ತಿಸಿರುವುದು ಕಂಡುಬಂದಿದೆ.

ಮಧ್ಯಪ್ರದೇಶ ಹಿಂಸಾಚಾರ: 'ಇದು ರಾಮನ ಕಲ್ಪನೆಗೆ ಮಾಡಿದ ಅವಮಾನ' ರಾವತ್ಮಧ್ಯಪ್ರದೇಶ ಹಿಂಸಾಚಾರ: 'ಇದು ರಾಮನ ಕಲ್ಪನೆಗೆ ಮಾಡಿದ ಅವಮಾನ' ರಾವತ್

ಪುಷ್ಪಾ ಸಿನಿಮಾದ ಹೀರೋ ಮಾಡುವಂತೆ ಅನ್ಸಾರ್ ತನ್ನ ಮುಂಗೈಯನ್ನು ಕತ್ತಿನ ಬಳಿ ಸವರುತ್ತಾ ಮಾಧ್ಯಮಗಳ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾನೆ.

Jahangirpuri Violence Case: Accused Enter Court in Pushpa Style

35 ವರ್ಷದ ಅನ್ಸಾರ್ ಈ ಹಿಂದೆ ಹಲವು ಅಪರಾಧ ಕರತ್ಯಗಳಲ್ಲಿ ಆರೋಪಿಯಾಗಿದ್ದಾನೆ. ಗ್ಯಾಂಬ್ಲಿಂಗ್ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ (Gambling and Arms Act) ಎಂಟು ಬಾರಿ ಆತನ ಮೇಲೆ ಪ್ರಕರಣ ದಾಖಲಾಗಿದೆ. ಎರಡು ಹಲ್ಲೆ ಪ್ರಕರಣಗಳಿವೆ.

ಮೊನ್ನೆ ಶನಿವಾರ ಅಂದರೆ ಏಪ್ರಿಲ್ 16ರಂದು ಜಹಾಂಗೀರ್‌ಪುರಿಯಲ್ಲಿ ಹನುಮಾನ್ ಜಯಂತಿ ಮೆರವಣಿಗೆ ವೇಳೆ ಎರಡು ಕೋಮಗಳ ಮಧ್ಯೆ ಘರ್ಷಣೆ ಆಗಿದೆ. ಈ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. ಗಾಯಗೊಂಡವರಲ್ಲಿ ಎಂಟು ಮಂದಿ ಪೊಲೀಸರು ಸೇರಿದ್ದಾರೆ.

ಜಹಾಂಗೀರಪುರಿ ಗಲಭೆ : ಪೊಲೀಸರ ಪಕ್ಷಪಾತದ ನಡೆಗೆ ಮುಸ್ಲಿಂ ಸಮುದಾಯದ ಆಕ್ರೋಶಜಹಾಂಗೀರಪುರಿ ಗಲಭೆ : ಪೊಲೀಸರ ಪಕ್ಷಪಾತದ ನಡೆಗೆ ಮುಸ್ಲಿಂ ಸಮುದಾಯದ ಆಕ್ರೋಶ

ಈ ಘಟನೆಯಲ್ಲಿ ಅಸ್ಲಮ್ ಮತ್ತು ಅನ್ಸಾರ್ ಇಬ್ಬರು ಪ್ರಮುಖ ಆರೋಪಿಗಳಾಗಿದ್ದಾರೆ. ಗಲಭೆಗೆ ಸಂಚು ರೂಪಿಸಿದ್ದು ಇವರಿಬ್ಬರು ಎಂಬುದು ಪೊಲೀಸರ ಆರೋಪ. ನಿನ್ನೆ ರೋಹಿಣಿ ಕೋರ್ಟ್ ನ್ಯಾಯಾಧೀಶರ ಎದುರು ಈ ವಿಚಾರ ಮುಂದಿಟ್ಟ ಪೊಲೀಸರು, ಶನಿವಾರ ಮೆರವಣಿಗೆ ನಡೆಯುವ ವಿಚಾರ ಈ ಇಬ್ಬರಿಗೆ ಶುಕ್ರವಾರವಷ್ಟೇ ಗೊತ್ತಾಗಿದ್ದು. ಅಂದೇ ಅವರು ಸಂಚು ರೂಪಿಸಿದರು ಎಂದು ಹೇಳಿದ್ದಾರೆ.

Jahangirpuri Violence Case: Accused Enter Court in Pushpa Style

ಶನಿವಾರ ಸಂಜೆ 6ಗಂಟೆಗೆ ಆರಂಭವಾದ ಹಿಂಸಾಚಾರದಲ್ಲಿ ಉದ್ರಿಕ್ತ ಜನರು ಕೆಲ ವಾಹನಗಳನ್ನ ಜಖಂಗೊಳಿಸಿ ಬೆಂಕಿ ಇಟ್ಟಿದ್ದಾರೆ. ಪೊಲೀಸರ ಪ್ರಕಾರ ಗಲಭೆಕೋರರ ಪೈಕಿ ಒಬ್ಬ ಆರೋಪಿ ಗುಂಡಿನ ದಾಳಿ ಮಾಡಿದ್ದ. ಆತ ಬಳಸಿದ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಕೋಮುಘರ್ಷಣೆ ಘಟನೆಗೆ ಏನು ಕಾರಣ ಎಂಬುದು ಸ್ಪಷ್ಟಗೊಂಡಿಲ್ಲ. ಜಗಳವೊಂದರಲ್ಲಿ ಘರ್ಷಣೆ ಮೊದಲುಗೊಂಡಿತೇ ಅಥವಾ ಗಲಭೆಗೆ ಮುಂಚೆಯೇ ಸಂಚು ರೂಪಿಸಲಾಗಿತ್ತೇ ಎಂಬುದನ್ನು ಕಂಡುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಉದ್ರಿಕ್ತ ಜನರು ಕಲ್ಲು ತೂರಾಟ ನಡೆಸಿದ್ದರು. ಈ ಕಲ್ಲುಗಳನ್ನ ಮೊದಲೇ ಸಂಗ್ರಹಿಸಲಾಗಿತ್ತಾ ಎಂಬುದನ್ನ ತಿಳಿಯಲು ಪೊಲೀಸರು ವಿವಿಧ ಪ್ರದೇಶಗಳಲ್ಲಿನ ಡ್ರೋನ್ ಕ್ಯಾಮರಾಗಳ ದೃಶ್ಯಗಳನ್ನ ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನ ಗುರುತಿಸಲು ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನ ನೋಡಲಾಗುತ್ತಿದೆ.

ಮೆರವಣಿಗೆ ವೇಳೆ ಕತ್ತಿ, ಗನ್ ಝಳುಪಿಸಿದ್ದ ಜನರ:
ಹನುಮಾನ್ ಜಯಂತಿ ಮೆರಣಿಗೆಯಲ್ಲಿ ಭಾಗಿಯಾದ ಗುಂಪಿನಲ್ಲಿ ಕೆಲವರು ಕತ್ತಿ ಮತ್ತು ಗನ್‌ಗಳನ್ನ ಝಳುಪಿಸಿದ ದೃಶ್ಯಗಳು ಇದೀಗ ಬೆಳಕಿಗೆ ಬಂದಿವೆ. ಪೊಲೀಸರು ಈ ವಿಡಿಯೋಗಳನ್ನ ಪರಿಶೀಲಿಸಿ ಕಿಡಿಕೇಡಿಗಳನ್ನ ಗುರುತಿಸುವ ಕೆಲಸದಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ವಿಶೇಷ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್ ಅವರು, ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಜಹಾಂಗೀರ್‌ಪುರಿಯಷ್ಟೇ ಅಲ್ಲ ವಿವಿಧ ಪ್ರದೇಶಗಳಲ್ಲಿ ಹನುಮಾನ್ ಜಯಂತಿ ಮತ್ತು ರಾವನವಮಿ ಉತ್ಸವಗಳ ವೇಳೆ ಹಿಂಸಾಚಾರ ಘಟನೆಗಳು ನಡೆದಿರುವುದು ವರದಿಯಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Police have arrestd 21 people in the case of violence during Hanuman Jayanti procession at Jahangirpuri in Delhi. One accused showed no remorse of the incident of fear of police when he displayed mannerism of Pushpa while entering court complex with police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X