ಮೋದಿಗೆ ದೆಹಲಿ ಹುಡುಗಿಯ ಓಪನ್ ಚಾಲೆಂಜ್ ಎಂದ ಪ್ರಿಯಾಂಕಾ
ನವದೆಹಲಿ, ಮೇ 9: ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧದ ಭ್ರಷ್ಟಾಚಾರಿ ನಂ.1 ಹೇಳಿಕೆಗೆ ಗರಂ ಆಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೆಹಲಿ ಹುಡುಗಿ ಪ್ರಿಯಾಂಕಾ ನಿಮಗೆ ಸವಾಲು ಹಾಕುತ್ತಿದ್ದಾಳೆ. ಮುಂದಿನ ಎರಡು ಹಂತದ ಚುನಾವಣೆಯನ್ನು ನೋಟು ಅಮಾನ್ಯೀಕರಣ, ಜಿಎಸ್ಟಿ, ಮಹಿಳಾ ಸುರಕ್ಷತೆ ಹಾಗೂ ಉದ್ಯೋಗ ವಿಷಯ ಆಧರಿಸಿ ಎದುರಿಸಲು ಎಂದು ಪಂಥಾಹ್ವಾನ ನೀಡಿದ್ದಾರೆ.
ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಹೋಮ್ ವರ್ಕ್ ಮಾಡದ ಮಕ್ಕಳ ಹಾಗೆ ಮಾಡುತ್ತಿದ್ದಾರೆ. ನಾನೇನು ಮಾಡಲಿ, ನೆಹರು ನನ್ನ ಕೆಲಸ ಕಿತ್ತುಕೊಂಡಿದ್ದಾರೆ. ಇಂದಿರಾ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸುತ್ತಾ ಕುಳಿತಿದ್ದಾರೆ.

ಆದರೆ ಅವರು ಪ್ರಧಾನಿಯಾಗಿ ಮಾಡಬೇಕಿರುವ ಕೆಲಸ ಮರೆತುಹೋಗಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.












Click it and Unblock the Notifications