ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸೂಚನೆ

ದೆಹಲಿ, ಜುಲೈ 1: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Recommended Video

      Patanjali,ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು , ಕೈ ಎತ್ತಿದ ಬಾಬಾ ರಾಮ್‌ದೇವ್ | Oneindia Kannada

      ಜೊತೆಗೆ ಪ್ರಿಯಾಂಕಾ ಅವರಿಗೆ ಒದಗಿಸಲಾಗಿದ್ದು ಎಸ್‌ಪಿಜಿ ಭದ್ರತೆಯನ್ನು ಸಹ ಹಿಂಪಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.

      ಎಸ್‌ಪಿಜಿ ಭದ್ರತೆ ಹಿಂಪಡೆದ ಕಾರಣ ಆಗಸ್ಟ್ 1ರೊಳಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸರ್ಕಾರ ಒದಗಿಸಿರುವ ಮನೆಯನ್ನು ಖಾಲಿ ಮಾಡಬೇಕಿದೆ. ಇಲ್ಲವಾದಲ್ಲಿ ಆಗಸ್ಟ್ 1ರ ನಂತರ ಎಷ್ಟು ದಿನ ಆ ಮನೆಯಲ್ಲಿ ವಾಸವಾಗಿರುತ್ತಾರೋ ಅಷ್ಟು ದಿನಕ್ಕೆ ದಂಡ ಹಾಗೂ ಹಾನಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

      ಪ್ರಿಯಾಂಕಾ ಗಾಂಧಿಗೆ ಒದಗಿಸಲಾಗಿದ್ದ ಎಸ್‌ಪಿಜಿ ಭದ್ರತೆ ಹಾಗು ಝೆಡ್ + ಸೆಕ್ಯುರಿಟಿ ಮುಂದುವರಿಯದೆ ಹೋದರೆ ಸರ್ಕಾರಿ ವಸತಿ ಸೌಲಭ್ಯ ಇರುವುದಿಲ್ಲ. ಹೀಗಾಗಿ, ದೆಹಲಿಯ ಲೂದಿ ಎಸ್ಟೇಟ್‌ನಲ್ಲಿ ಒದಗಿಸಲಾಗಿರುವ ಟೈಪ್ 6ಬಿ, ಮನೆ ನಂ 35ರ ಮನೆಯನ್ನು ರದ್ದುಗೊಳಿಸಲಾಗಿದೆ.

      Priyanka Gandhi Vadra To Vacate Government Accommodation By August 1st

      ಕೇಂದ್ರದ ಈ ಆದೇಶಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಪ್ರಿಯಾಂಕಾ ಗಾಂಧಿ ಅವರಗಾಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

      ಪ್ರಿಯಾಂಕಾ ಗಾಂಧಿಯವರಿಗೆ ಫೆಬ್ರವರಿ 21, 1997 ರಂದು ಎಸ್‌ಪಿಜಿ ಭದ್ರತಾ ನೆಲೆಯಲ್ಲಿ ಲೋಧಿ ಎಸ್ಟೇಟ್ ಬಂಗಲೆ ನೀಡಲಾಗಿತ್ತು. ಎಸ್‌ಪಿಜಿ ಭದ್ರತೆ ಎನ್ನುವುದು ಮಾಜಿ ಪ್ರಧಾನಿ ಮತ್ತು ಕುಟುಂಬಸ್ಥರಿಗೆ ನಿರ್ದಿಷ್ಟ ಅವಧಿಯವರೆಗೂ ನೀಡಲಾಗುವುದು ಭದ್ರತಾ ನಿಯಮ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+