ಸುಸಜ್ಜಿತ ಕಾರು ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ
ನವದೆಹಲಿ, ಸೆಪ್ಟೆಂಬರ್ 20: ಸದಾ ಬಿದಿ ಭದ್ರತೆಯಲ್ಲಿ ಹಿಂದೊಂದಿಷ್ಟು, ಮುಂದೊದಿಷ್ಟು ಕಪ್ಪು ಕಾರುಗಳ ಮಧ್ಯೆ ಸಂಚರಿಸುವ ಪ್ರಧಾನಿ ಮೋದಿ ಇಂದು ಸಾಮಾನ್ಯರಂದೆ ದೆಹಲಿಯ ಮೆಟ್ರೋದಲ್ಲಿ ಕೆಲ ಕಾಲ ಸಂಚಿಸಿದರು.

ದೌಲಾ ಕೌನ್‌ನಿಂದ ದ್ವಾರಕಾಗೆ ಅವರು ಮೆಟ್ರೋದಲ್ಲಿ ಸಂಚರಿಸಿದರು, ಜೊತೆಗೆ ತಮ್ಮ ಸಹ ಪ್ರಯಾಣಿಕರ ಜೊತೆ ಮಾತುಕತೆಯನ್ನೂ ಮಾಡಿದರು.

ಮೋದಿ ಅವರು ದ್ವಾರಕೆಯಲ್ಲಿ ಆಯೋಜಿಸಿದ್ದ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಆಂಡ್ ಎಕ್ಸ್‌ಪೋದ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆಂದು ಮೋದಿ ಅವರು ಮೆಟ್ರೋದಲ್ಲಿ ತೆರಳಿದರು. ಮೋದಿ ಅವರು ಮೆಟ್ರೋದಲ್ಲಿ ಸಹ ಪ್ರಯಾಣಿಕರೊಂದಿಗೆ ಚರ್ಚಿಸಿದರು. ಪ್ರಯಾಣಿಕರು ಮೋದಿ ಅವರೊಂದಿಗೆ ಸೆಲ್ಫಿ ಸಹ ತೆಗೆದುಕೊಂಡರು.

ಮೋದಿ ಅವರೊಂದಿಗೆ ಭದ್ರತಾ ಸಿಬ್ಬಂದಿ ಕೆಲವು ಅಧಿಕಾರಿಗಳು, ಹಾಗೂ ಮೆಟ್ರೋದ ಅಧಿಕಾರಿಗಳೂ ಸಹ ಹಾಜರಿದ್ದರು. ಈ ಮುಂಚೆಯೂ ಮೋದಿ ಅವರು ಕೆಲವು ಕಡೆ ಮೆಟ್ರೋದಲ್ಲಿ ಪ್ರಯಾಣಿಸಿದ್ದರು.












Click it and Unblock the Notifications