ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಭಾಷಣ: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

|
Google Oneindia Kannada News

ನವದೆಹಲಿ, ಮಾರ್ಚ್ 27: ಬಾಹ್ಯಾಕಾಶ ಲೋಕದಲ್ಲಿ ಭಾರತವು ಮಹತ್ವದ ಮೈಲಿಗಲ್ಲು ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೆಳಮಟ್ಟದ ಭೂ ಕಕ್ಷೆಯ (ಎಲ್‌ಇಒ) ಉಪಗ್ರಹವನ್ನು ಹೊಡೆದುರುಳಿಸಿಬಲ್ಲ ಮಿಶನ್ ಶಕ್ತಿ ಹೆಸರಿನ ಕಾರ್ಯಾಚರಣೆಯ ಬಗ್ಗೆ ಮೋದಿ ಮಾತನಾಡಿದರು.

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಪ್ರಧಾನಿ ನರೇಂದ್ರ ಮೊದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.

ಮಿಶನ್ ಶಕ್ತಿಯ ಮೂಲಕ ಉಪಗ್ರಹವನ್ನು ಯಶಸ್ವಿಯಾಗಿ ಹೊಡೆದುರುಳಿಸಿ, ಉಪಗ್ರಹ ವಿರೋಧಿ ಅಸ್ತ್ರವನ್ನು ಹೊಂದಿರುವ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಅಸ್ತ್ರವನ್ನು ಈಗಾಗಲೇ ಹೊಂದಿವೆ.

Prime minister Narendra Modi to address country soon

"ನಾನು ಇಂದು ಒಂದು ಮಹತ್ವದ ಸಂದೇಶದೊಂದಿಗೆ 11:45 ರಿಂದ 12 ಗಂಟೆ ವರೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದೇನೆ. ಟಿವಿ, ರೆಡಿಯೋ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಭಾಷಣವನ್ನು ಕೇಳಿ" ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಇದರಿಂದ ದೇಶದೆಲ್ಲೆಡೆ ಸಾಕಷ್ಟು ಕುತೂಹಲ ಸೃಷ್ಟಿಸಿತ್ತು.

ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಏಪ್ರಿಲ್ 11 ರಿಂದ ಆರಂಭವಾಗಲಿದ್ದು, ಮೇ 19 ರವರೆಗೆ ನಡೆಯಲಿದೆ. ಫಲಿತಾಂಶ ಮೇ 23 ರಂದು ಹೊರಬೀಳಲಿದೆ.

Newest FirstOldest First
1:07 PM, 27 Mar

*

"ಎ-ಸ್ಯಾಟ್-ಮಿಶನ್ ಶಕ್ತಿ" ಯಾವುದೇ ದೇಶದ ವಿರುದ್ಧ ನಡೆಸುವ ಕಾರ್ಯಾಚರಣೆಯಲ್ಲ. ಬದಲಾಗಿ ಭಾರತ ರಕ್ಷಣೆಯ ಕ್ಷೇತ್ರದಲ್ಲಿ ಮತ್ತಷ್ಟು ಸ್ವಾವಲಂಬನೆ ಸಾಧಿಸಲು ಇದು ಸಹಾಯಕವಾಗಲಿದೆ-ನರೇಂದ್ರ ಮೋದಿ
12:54 PM, 27 Mar

*

ಭಾರತ ಇದೀಗ ಬಾಹ್ಯಾಕಾಶದ ದೈತ್ಯ ಶಕ್ತಿಗಳಾದ ಅಮೆರಿಕ, ರಷ್ಯಾ, ಚೀನಾಗಳೊಂದಿಗೆ ತನ್ನ ಹೆಸರನ್ನೂ ನಮೂದಿಸಿದೆ- ನರೇಂದ್ರ ಮೋದಿ
12:50 PM, 27 Mar

*

ಅಗತ್ಯ ಬಂದರೆ ಬಾಹ್ಯಾಕಾಶದಲ್ಲಿ ಜೀವಂತ ಉಪಗ್ರಹಗಳನ್ನು ಹೊಡೆದುರುಳಿಸಬಲ್ಲ anti satellite ಭಾರತದ ಶಕ್ತಿ. ಈ ಮೂಲಕ ಹೊಸ ಕ್ರಾಂತಿಗೆ ಭಾರತ ನಾಂದಿ ಹಾಡಿದೆ-ನರೇಂದ್ರ ಮೋದಿ
12:46 PM, 27 Mar

*

'ಮಿಶನ್ ಶಕ್ತಿ' Anti-satellite ಭಾರತದ ಬಾಹ್ಯಾಕಾಶ ಲೋಕದ ಹೊಸ ಶಕ್ತಿ-ನರೇಂದ್ರ ಮೋದಿ
12:38 PM, 27 Mar

*

ಬಾಹ್ಯಾಕಾಶದಲ್ಲಿ ಜೀವಂತ ಸೆಟಲೈಟ್ ಹೊಡೆದುರುಳಿಸಿದ ಭಾರತ-ನರೇಂದ್ರ ಮೋದಿ
12:33 PM, 27 Mar

*

ಭಾರತದ ಸುರಕ್ಷತೆಯ ದೃಷ್ಟಿಯಿಂದ 'ಮಿಶನ್ ಶಕ್ತಿ' ಕಾರ್ಯಾಚರಣೆ ಅತ್ಯಗತ್ಯ. ಗುರಿಯನ್ನು ತಲುಪುವುದಕ್ಕೆ ಕಷ್ಟವಾದರೂ, ಕೇವಲ ಮೂರು ನಿಮಿಷಗಳಲ್ಲಿ ಈ ಗುರಿಯನ್ನು ತಲುಪಲಾಗಿದೆ-ನರೇಂದ್ರ ಮೋದಿ
12:31 PM, 27 Mar

*

ಇಂದಿನ ಜಗತ್ತು ನಿಂತಿರುವುದೇ ಉಪಗ್ರಹಗಳ ಮೇಲೆ. ಇಂದು ನಾವು ಕೃಷಿ, ಹವಾಮಾನ, ಸಂವಹನಕ್ಕಾಗಿ ಸಾಕಷ್ಟು ಉಪಗ್ರಹವನ್ನು ಹೊಂದಿದ್ದೇವೆ-ನರೇಂದ್ರ ಮೋದಿ
Advertisement
12:29 PM, 27 Mar

*

ಭಾರತವು ಎಲೈಟ್ ಸ್ಪೇಸ್ ಪವರ್ ನಲ್ಲಿ ತನ್ನ ಹೆಸರನ್ನು ಮೂಡಿಸಿದೆ- ನರೇಂದ್ರ ಮೋದಿ
12:20 PM, 27 Mar

*

ಇನ್ನು ಐದು ನಿಮಿಷಗಳಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ
12:14 PM, 27 Mar

*

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮೆಗಾ ಮೀಟಿಂಗ್
12:13 PM, 27 Mar

*

ಪ್ರಧಾನಿ ಮೋದಿ ಭಾಷಣ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, 'ಮೋದಿ ವಿಶೇಷ' ಸಂದೇಶ ಏನಿರಬಹುದು ಎಂಬ ಊಹೆ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾಗಿದೆ.
12:09 PM, 27 Mar

*

ಭಾರತೀಯ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅವರು ಯಾವ ಘೋಷಣೆ ಮಾಡುವುದಕ್ಕೆ ಸಾಧ್ಯ? ಓಮರ್ ಅಬ್ದುಲ್ಲಾ
Advertisement
12:08 PM, 27 Mar

*

ಅವ್ರು ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಿಸುತ್ತಾರೆ- ಓಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ
12:05 PM, 27 Mar

*

ಭಾರತ-ಪಾಕಿಸ್ತಾನದ ನಡುವಿನ ಸಂಬಂಧದ ಕುರಿತಂತೆ ಮಾತನಾಡಬಹುದೆಂಬ ನಿರೀಕ್ಷೆ
11:55 AM, 27 Mar

*

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂಡ ಯಾವುದೇ ಮಹತ್ವದ ಘೋಷಣೆ ಮಾಡುವಂತಿಲ್ಲ, ಆದರೆ ವಿಶೇಷ ಸಂದೇಶ ಎಂದು ಮೋದಿಯವರು ತಮ್ಮ ಟ್ವೀಟ್ ನಲ್ಲಿ ಹಾಕಿರುವುದು ಕುತೂಹಲ ಕೆರಳಿಸಿದೆ.

English summary
Lok Sabha elections 2019: Prime minister Narendra Modi to address country soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X