ಕೊರೊನಾ ತಲ್ಲಣ; ಪ್ರಧಾನಿ ಮೋದಿ ಮತ್ತೊಂದು ಮಹತ್ವದ ನಿರ್ಧಾರ

ನವದೆಹಲಿ, ಮಾರ್ಚ್ 5: ಹೋಳಿ ಮಿಲನ್ ಕಾರ್ಯಕ್ರಮದಿಂದ ಹಿಂದೆ ಸರಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್‌ ಸೋಂಕಿನ ಭಯದಿಂದಾಗಿ ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಮುಂದಿನ ವಾರ ಯುರೋಪ್‌ನ ಬ್ರೂಸೆಲ್ಸ್‌ನಲ್ಲಿ ನಡೆಯಬೇಕಿದ್ದ ಯೂರೋಪಿನ್ ಯೂನಿಯನ್‌ನ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಳ್ಳಬೇಕಿತ್ತು. ಆದರೆ, ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು ತಲ್ಲಣ ಸೃಷ್ಠಿಸಿರುವುದರಿಂದ ತಜ್ಞರ ಸಲಹೆ ಮೇರೆಗೆ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಮುಂದಿನ ವಾರ ಹೋಳಿ ಸಂಭ್ರಮಾಚರಣೆ ಇಡೀ ದೇಶಾದ್ಯಂತ ನಡೆಯಲಿದ್ದು, ಕೊರೊನಾ ವೈರಸ್ ಆತಂಕ ಹೋಳಿ ಮೇಲೆ ಬಿದ್ದಿರುವುದರಿಂದ ಹೋಳಿ ಸಂಭ್ರಮಾಚರಣೆಗೆ ಅಡ್ಡಿಯಾಗಬಹುದು ಎನ್ನಲಾಗಿದೆ. ಕೊರೊನಾ ಸೋಂಕು ತಗುಲುವ ಸಾಧ್ಯತೆಯ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಮೋದಿ ಹೋಳಿಯಲ್ಲಿ ಕೂಡ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

Prime Minister Narendra Modi Canceled Foreign Trip Ahead Of Coronavirus

ಈ ಕುರಿತು ಟ್ವೀಟ್ ಮಾಡಿದ್ದ ಮೋದಿ ಅವರು, ಹೋಳಿ ಆಚರಣೆ ವೇಳೆ ಜನಸಮೂಹದಲ್ಲಿ ಪಾಲ್ಗೊಂಡು ಹೋಳಿ ಆಚರಿಸಲು ತಜ್ಞರ ಸಲಹೆ ಮೇರೆಗೆ ನಿರ್ಧರಿಸಿದ್ದೇನೆ. ಈ ವರ್ಷ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದಿದ್ದರು.

ಕೊರೊನಾ ಸೋಂಕು ಪೀಡಿತರನ್ನು ಕೈ ಕುಲುಕುವುದರಿಂದ, ಅಪ್ಪಿಕೊಳ್ಳುವುದರಿಂದ ಹಾಗೂ ಸನಿಹ ಬೆರೆಯುವುದರಿಂದ ವೈರಸ್ ತಗಲುತ್ತದೆ. ದೆಹಲಿಯಲ್ಲೂ ಮೂರು ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+