ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಬ್ ಗೆ ದೊರೆತ ರಾಜ ಮರ್ಯಾದೆಯನ್ನು ಕಣ್ತುಂಬಿಕೊಳ್ಳಿ

By Vanitha
|
Google Oneindia Kannada News

ನವದೆಹಲಿ,ಫೆಬ್ರವರಿ,23: ಕೇಂದ್ರ ಬಜೆಟ್ ಅಧಿವೇಶನ ಮಂಗಳವಾರದಿಂದ ಆರಂಭವಾಗಿದ್ದು, ಇದು ಮಾರ್ಚ್ 16ಕ್ಕೆ ಮುಕ್ತಾಯವಾಗಲಿದೆ. ಎರಡನೇ ಭಾಗದ ಅಧಿವೇಶನ ಏಪ್ರಿಲ್ 25ರಿಂದ ಮೇ 13ರವರೆಗೆ ನಡೆಯಲಿದೆ. ಫೆ.25ರಂದು ರೈಲ್ವೆ ಮತ್ತು ಫೆ. 29ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ.

ಬಜೆಟ್ ಅಧಿವೇಶನದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, 'ಎಲ್ಲರ ಶ್ರೇಯಾಭಿವೃದ್ಧಿಯೇ ಬಜೆಟ್ಟಿನ ಮೂಲ ಮಂತ್ರ, ಆರ್ಥಿಕವಾಗಿ ಎಲ್ಲರನ್ನು ಸದೃಢರನ್ನಾಗಿ ಮಾಡಬೇಕು. ಸೌರಶಕ್ತಿಯು ಪ್ರತಿಯೊಬ್ಬರಿಗೂ ಲಭ್ಯವಾಗಬೇಕು.

ರೈತರ, ಬಡವರ, ಯುವಜನರ ಏಳಿಗೆಯಿಂದ ಮಾತ್ರ ದೇಶ ಅಭಿವೃದ್ಧಿ ಕಾಣುತ್ತದೆ. ಪ್ರತಿಯೊಬ್ಬರು ಒಂದಾಗಿ ಶ್ರಮಿಸಿದಾಗ ಮಾತ್ರ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ' ಎಂದು ಕಿವಿಮಾತು ಹೇಳಿದರು.[LIVE: ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶ]

ಬಜೆಟ್ ಅಧಿವೇಶನಕ್ಕೆ ತೆರಳುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಲಭಿಸಿದ ರಾಜ ಮರ್ಯಾದೆ, ರತ್ನಗಂಬಳಿ ಹಾಸು, ಸಾರೋಟಿನ ಅಕ್ಕಪಕ್ಕದಲ್ಲಿದ್ದ ಹತ್ತಾರು ಕುದುರೆಗಳ ರಾಜ ಗಾಂಭೀರ್ಯತೆ ನೋಡುಗರನ್ನು ಕ್ಷಣಕಾಲ ಹಿಡಿದಿಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸುಂದರ ಕ್ಷಣಗಳನ್ನು ನೀವು ನೋಡಿರಿ. ಕೆಳಗಿನ ಸ್ಲೈಡ್ ಗಳಲ್ಲಿವೆ.

ರಾಷ್ಟ್ರದ ಪ್ರಥಮ ಪ್ರಜೆಗೆ ಸಕಲ ಗೌರವ

ರಾಷ್ಟ್ರದ ಪ್ರಥಮ ಪ್ರಜೆಗೆ ಸಕಲ ಗೌರವ

ಬಜೆಟ್ ಅಧಿವೇಶನಕ್ಕೆ ತೆರಳುವ ಪ್ರಣಬ್ ಮುಖರ್ಜಿ ಅವರಿಗೆ 50ಕ್ಕೂ ಹೆಚ್ಚು ಕಾಲಾಳು ದಳದಿಂದ ಸಕಲ ಗೌರವ ದೊರೆಯಿತು.

ಬಜೆಟ್ ಅಧಿವೇಶನಕ್ಕೆ ಹೋಗುವ ಮುನ್ನ

ಬಜೆಟ್ ಅಧಿವೇಶನಕ್ಕೆ ಹೋಗುವ ಮುನ್ನ

ಇಕ್ಕೆಲಗಳಲ್ಲಿ ಬಣ್ಣ ಬಣ್ಣದ ಡೇರೆ ಹೂವಿನ ಸಾಲು, ರತ್ನ ಗಂಬಳಿಯ ಹಾಸು, ಅಧಿಕಾರಿಗಳ ಗೌರವದ ನಡುವೆ ರಾಜನಂತೆ ನಡೆದು ಹೋಗುತ್ತಿರುವ ಪ್ರಣಬ್ ಮುಖರ್ಜಿ.

ಸೇನಾ ವಂದನೆ ಗೌರವ ಸ್ವೀಕಾರ ಪ್ರಣಬ್

ಸೇನಾ ವಂದನೆ ಗೌರವ ಸ್ವೀಕಾರ ಪ್ರಣಬ್

ರಾಷ್ಟ್ರದ ಪ್ರಥಮ ಪ್ರಜೆ ಪ್ರಣಬ್ ಮುಖರ್ಜಿ ಅವರು ಕರೆದೊಯ್ಯಲು ಬಂದ ಸೇನಾ ತಂಡಕ್ಕೆ ಸೆಲ್ಯೂಟ್ ಸಲ್ಲಿಸಿಸುವುದರ ಮೂಲಕ ವಂದನೆ ಸಲ್ಲಿಸಿದರು.

ಸಾರೋಟಿನಲ್ಲಿ ಪ್ರಣಬ್

ಸಾರೋಟಿನಲ್ಲಿ ಪ್ರಣಬ್

ಕಾರುಗಳು ಬಂದ ಮೇಲೆ ಸಾರೋಟಿನ ಸವಾರಿ ನೋಡುವುದೇ ಕಷ್ಟ. ಕುದುರೆಗಳ ನಡಿಗೆಯಲ್ಲಿ ಸಾಗುವ ಸಾರೋಟಿನ ವೈಭವ ನೋಡುವುದೇ ಕಣ್ಣಿಗೆ ಹಬ್ಬ. ಆ ಸಂತೋಷ ಪ್ರಣಬ್ ಮುಖರ್ಜಿ ಅವರ ಪಾಲಿಗೆ ದೊರೆಯಿತು.

English summary
The President of India, Pranab Mukherjee, leaving from Forecourt of Rashtrapati Bhavan & way to Parliament for addressing Member of both the Houses of Parliament on 23rd
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X