ರಾಷ್ಟ್ರಪತಿ ಚುನಾವಣೆ: ಟ್ವಿಟ್ಟಿಗರು ಏನಂತಾರೆ?

Posted By:
Subscribe to Oneindia Kannada

ನವದೆಹಲಿ, ಜುಲೈ 17: ಇಂದು(ಜುಲೈ 17) ಇಡೀ ದೇಶದ ಕಣ್ಣೂ ರಾಷ್ಟ್ರಪತಿ ಚುನಾವಣೆಯ ಮೇಲಿದೆ. ಎನ್ ಡಿಎ ಮೈತ್ರಿಕೂಟದಿಂದ ರಾಮ್ ನಾಥ್ ಕೋವಿಂದ್ ಮತ್ತು ಯುಪಿಎ ಮೈತ್ರಿಕೂಟದಿಂದ ಮೀರಾ ಕುಮಾರ್ ಕಣದಲ್ಲಿದ್ದು, ಇಬ್ಬರು ದಲಿತ ನಾಯಕರಲ್ಲಿ ಯಾರು ರಾಷ್ಟ್ರಪತಿಯಾಗಲಿದ್ದಾರೆ ಎಂಬುದೂ ಈಗಾಗಲೇ ಬಹುತೇಕ ಜಗಜ್ಜಾಹೀರಾಗಿದೆ.

40 ಕ್ಕೂ ಹೆಚ್ಚು ಪಕ್ಷಗಳ ಬೆಂಬಲವನ್ನು ಪಡೆದಿರುವ ಎನ್ ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಭಾರತದ ಮುಂದಿನ ರಾಷ್ಟ್ರಪತಿ ಎಂಬುದು ಚುನಾವಣೆಗೂ ಮೊದಲೇ ಬಹುತೇಕ ಖಚಿತವಾಗಿದೆ. ಆದರೂ ಜುಲೈ 20 ರಂದು ನಡೆಯಲಿರುವ ಮತೆಣಿಕೆಯ ಮೇಲೆಯೂ ಕುತೂಹಲವಿಲ್ಲದಿಲ್ಲ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸಹ ರಾಮ್ ನಾಥ್ ಕೋವಿಂದ್ ಅವರಿಗೆ ಶುಭಾಶಯ ಕೋರಿಯಾಗಿದೆ.

ಇಂದು ರಾಷ್ಟ್ರಪತಿ ಚುನಾವಣೆ: ವಿಧಾನಸೌಧದ ಕೊಠಡಿ 106ರಲ್ಲಿ ಮತದಾನ

ಟ್ವಿಟ್ಟರ್ ನಲ್ಲಿಯೂ ಹಲವರು ಕೋವಿಂದ್ ಅವರಿಗೆ ಈಗಾಗಲೇ ಅಭಿನಂದನೆ ಹೇಳಿದ್ದಾರೆ. ಕೆಲವರು ಮೀರಾ ಕುಮಾರ್ ರಾಷ್ಟ್ರಪತಿಯಾಗಲಿ ಎಂದು ಹಾರೈಸಿದ್ದರೆ, ಇನ್ನೂ ಕೆಲವರು, ಯಾವ ಆರೋಪಗಳೂ ಇಲ್ಲದ, ನಿಶ್ಕಳಂಕ ವ್ಯಕ್ತಿತ್ವದ ರಾಮ್ ನಾಥ್ ಕೋವಿಂದ್ ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

N Santosh Hegde, the next President of India | Online Petition filed

ಎರಡು ಸಿದ್ಧಾಂತಗಳ ನಡುವಿನ ಹೋರಾಟವಲ್ಲ!

2017 ರ ರಾಷ್ಟ್ರಪತಿ ಚುನಾವಣೆ ಇಬ್ಬರು ದಲಿತರ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗುತ್ತಿದೆಯೇ ಹೊರತು, ಎರಡು ಸಿದ್ಧಾಂತಗಳ ನಡುವಿನ ಹೋರಾಟ ಎಂಬ ರೀತಿಯಲ್ಲಿ ಸುದ್ದಿಯಾಗುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದು ಗೀತಿಕಾ ಸ್ವಾಮಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಜಟಾಪಟಿ

ರಾಷ್ಟ್ರಪತಿ ಚುನಾವಣೆ ಎಂಬುದು ಒಬ್ಬ ಪರಿಶಿಷ್ಟ ಜಾತಿಯ ವಕೀಲ ರಾಮ್ ನಾಥ್ ಕೋವಿಂದ್ ಮತ್ತು ಸಾರ್ವಜನಿಕ ಹಣದಲ್ಲಿ ವಿದೇಶಿ ಪ್ರಯಾಣ ಮಾಡುವುದರಲ್ಲಿ ಪರಿಣಿತರಾದ ಮೀರಾ ಕುಮಾರ್ ನಡುವಿನ ಜಟಾಪಟಿ ಇದು ಎಂದು ಪ್ರಶಾಂತ್ ಪದ್ಮನಾಭ ಎನ್ನುವವರು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಮೈಸೂರಿನ ಮಾರ್ಕರ್ ಪೆನ್!

ಫಲಿತಾಂಶ ಗೊತ್ತಿದ್ದರೂ ಕುತೂಹಲ!

ಕೆಲವೊಮ್ಮೆ ನಮಗೆ ಫಲಿತಾಂಶ ಗೊತ್ತಿರುತ್ತದೆ. ಆದರೂ ನಾವು ಸ್ಪರ್ಧೆಯನ್ನು ನೋಡುವುದನ್ನು ಬಿಡುವುದಿಲ್ಲ ಎಂದು ಸಾಗರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಬಿಶ್ವಜಿತ್ ಮಜುಮ್ದಾರ್

ಪ್ರಜಾಪ್ರಭುತ್ವವನ್ನು ರಕ್ಷಿಸಬಲ್ಲ, ಜಾತ್ಯತೀತ ಅಭ್ಯರ್ಥಿ, ಅನುಭವಿ ಮೀರಾ ಕುಮಾರ್ ಅವರನ್ನು ರಾಷ್ಟ್ರಪತಿಯನ್ನಾಗಿ ಆರಿಸಿ ಎಂದು ಬಿಶ್ವಜಿತ್ ಮಜುಮ್ದಾರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2017 President of India election taking place today (July 17th). NDA candidate Ram Nath Kovind and UPA candidate Meira Kumar will fight today for President seat. Here is what twitteraties say about them.
Please Wait while comments are loading...