''ಕೆಟ್ಟ ಪರಿಸ್ಥಿತಿಗೆ ಸಿದ್ಧರಾಗಿರಿ''- ಕೊರೊನಾ ಬಗ್ಗೆ ಆರೋಗ್ಯ ಸಚಿವರ ಹೇಳಿಕೆ
ನವ ದೆಹಲಿ, ಮೇ 9: ಅನೇಕ ದೇಶಗಳಲ್ಲಿ ಕೊರೊನಾ ವೈರಸ್‌ನಿಂದ ಪರಿಸ್ಥಿತಿ ತೀರ ಹದಗೆಟ್ಟಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಆ ಕೆಟ್ಟ ಸ್ಥಿತಿ ಬಂದಿಲ್ಲ. ಆದರೆ, ಅದಕ್ಕೆ ಅಂತಹ ದಿನಗಳಿಗೂ ಸಿದ್ಧರಾಗಿರಿ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ದೆಹಲಿಯಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಈಶಾನ್ಯ ರಾಜ್ಯಗಳ ಹಿರಿಯ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ COVID-19 ಪರಿಸ್ಥಿತಿ ಬಗ್ಗೆ ಸಂವಹನ ನಡೆಸಿದರು.
ಕೆನಡಾ ಪ್ರಧಾನಿ ಕೈಗೊಂಡ ಈ ನಿರ್ಧಾರಕ್ಕೆ ಚಪ್ಪಾಳೆ ಹೊಡೆಯಲೇಬೇಕು!
ಈ ವೇಳೆ ಮಾತನಾಡಿದ ಅವರು ''ಅನೇಕ ಅಭಿವೃದ್ಧಿ ಹೊಂದಿದ ದೇಶಗಳಂತೆ ನಮ್ಮ ದೇಶದಲ್ಲಿ ಕೆಟ್ಟ ಪರಿಸ್ಥಿತಿಯನ್ನು ನಾವು ನಿರೀಕ್ಷಿಸುವುದಿಲ್ಲ. ಆದರೆ ಕೆಟ್ಟದ್ದನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.
ಭಾರತದಲ್ಲಿ ಸಾವಿನ ಪ್ರಮಾಣವು ಶೇಕಡಾ 3.3 ರಷ್ಟಿದೆ ಮತ್ತು ಚೇತರಿಕೆಯ ಪ್ರಮಾಣವು ಶೇಕಡಾ 29.9 ಕ್ಕೆ ಏರಿದೆ. ಕೇವಲ 0.38 ರಷ್ಟು ರೋಗಿಗಳು ಮಾತ್ರ ವೆಂಟಿಲೇಟರ್‌ಗಳಲ್ಲಿದ್ದಾರೆ. ಕೊರೊನಾ ಹೋರಾಟದಲ್ಲಿ ಭಾರತದ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
843 ಆಸ್ಪತ್ರೆಗಳನ್ನು COVID-19 ರೋಗಿಗಳ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದೇವೆ. ಅದರಲ್ಲಿ ಸುಮಾರು 1,65,991 ಹಾಸಿಗೆಗಳಿವೆ. ಅಲ್ಲಿ ದೇಶಾದ್ಯಂತ 1,991 COVID-19 ಆರೋಗ್ಯ ಕೇಂದ್ರಗಳಿವೆ. ಅವುಗಳು 1,35,643 ಹಾಸಿಗೆಗಳಿವೆ ಎಂದಿದ್ದಾರೆ.