ಚುನಾವಣಾ ಚಾಣಕ್ಯ ಕಾಂಗ್ರೆಸ್ ಸೇರ್ಪಡೆ?: ಗಾಂಧಿಗಳ ಜೊತೆ ಭೇಟಿ ಸೃಷ್ಟಿಸಿದ ಅನುಮಾನ
ನವದೆಹಲಿ, ಜು.14: ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗೆ ಪ್ರಶಾಂತ್ ಕಿಶೋರ್ ಚರ್ಚೆ ನಡೆಸಿದ ಒಂದು ದಿನದ ನಂತರ, ಚುನಾವಣಾ ಚಾಣಕ್ಯ ಭಾರತದ ಪ್ರಮುಖ ವಿರೋಧ ಪಕ್ಷಕ್ಕೆ ಸೇರುತ್ತಾರೆಯೇ ಎಂಬ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ.
ಮೂವರೂ ಗಾಂಧಿಗಳು ಮಂಗಳವಾರ ರಾಹುಲ್ ಗಾಂಧಿ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಜೊತೆ ಚರ್ಚೆಯ ಭಾಗವಾಗಿದ್ದರು. ಮೂವರು ಗಾಂಧಿಗಳು ಹಾಗೂ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷವನ್ನು ಬಲಾಡ್ಯಗೊಳಿಸುವ ಹಾಗೂ ಮುಂದಿನ ಚುನಾವಣೆಗಳನ್ನು ಸಿದ್ಧಪಡಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಮೂಲಗಳ ಪ್ರಕಾರ ಇದು ಮೊದಲ ಬಾರಿಗೆ ನಡೆದದ್ದಲ್ಲ. ಈ ನಡುವೆ ಈ ಸಭೆಯು ಪಂಜಾಬ್ ಅಥವಾ ಉತ್ತರ ಪ್ರದೇಶದ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಲಾಗಿಲ್ಲ ಎಂದು ಮೂಲಗಳು ತಿಳಿಸಿದೆ. ಆದರೆ 2024 ರ ಚುನಾವಣಾ ಹೋರಾಟಕ್ಕೆ ಕಾಂಗ್ರೆಸ್ ಅನ್ನು ಸಿದ್ಧಪಡಿಸುವಲ್ಲಿ ಪ್ರಶಾಂತ್ ಕಿಶೋರ್ ಮಹತ್ವದ ಪಾತ್ರವನ್ನು ವಹಿಸುವುದರ ಬಗ್ಗೆ ನಡೆಸಲಾಗಿದೆ ಎನ್ನಲಾಗಿದೆ.

ನಿವೃತ್ತಿ ಘೋಷಣೆ ಮಾಡಿದ್ದ ಪ್ರಶಾಂತ್
ಈ ಹಿಂದೆ ಎನ್‌ಡಿಟಿವಿ ಜೊತೆಗೆ ಮಾತನಾಡಿದ್ದ ಕಿಶೋರ್, "ನಾನು ಏನು ಮಾಡುತ್ತಿದ್ದೇನೆ ಅದನ್ನು ಮುಂದುವರಿಸಲು ನಾನು ಬಯಸುವುದಿಲ್ಲ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನು ವಿರಾಮ ತೆಗೆದುಕೊಂಡು ಜೀವನದಲ್ಲಿ ಬೇರೆ ಏನಾದರೂ ಮಾಡುವ ಸಮಯ ಇದು. ನಾನು ಈ ಜಾಗವನ್ನು ತ್ಯಜಿಸಲು ಬಯಸುತ್ತೇನೆ," ಎಂದು ಹೇಳುವ ಮೂಲಕ ನಿವೃತ್ತಿ ಘೋಷಣೆ ಮಾಡಿದ್ದರು. ಇದಕ್ಕೂ ಒಂದು ದಿನ ಮುಂಚೆ ಪ್ರಶಾಂತ್ ಚುನಾವಣಾ ಪ್ರಚಾರ ಮಾಡಿದ್ದ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಗೆಲುವು ಆಗಿತ್ತು.

ಚಹಾ ತೋಟಗಾರಿಕೆ ನಡೆಸಬೇಕು ಎಂದಿದ್ದ ಪ್ರಶಾಂತ್
ಇನ್ನು ಮತ್ತೆ ರಾಜಕೀಯಕ್ಕೆ ಸೇರುತ್ತಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಶಾಂತ್ ಕಿಶೋರ್, "ನಾನು ವಿಫಲ ರಾಜಕಾರಣಿ. ನಾನು ಏನು ಮಾಡಬೇಕು ಎಂಬುದನ್ನು ನಾನು ಹಿಂತಿರುಗಿ ನೋಡಬೇಕು," ಎಂದು ಹೇಳಿದ್ದರು. ಹಾಗೆಯೇ ತನ್ನ ಕುಟುಂಬದೊಂದಿಗೆ ಅಸ್ಸಾಂಗೆ ಹೋಗಿ ಅಲ್ಲಿ, "ಚಹಾ ತೋಟಗಾರಿಕೆ" ಮಾಡುವ ಬಗ್ಗೆಯೂ ಪ್ರಶಾಂತ್ ಮಾತನಾಡಿದ್ದರು.

ಕಾಂಗ್ರೆಸ್ ಹಾಗೂ ಕಿಶೋರ್
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಕಿಶೋರ್ ರಾಜಕೀಯಕ್ಕೆ ಮತ್ತೆ ಕಾಲಿಡುವ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಆದರೆ ಈ ಹಿಂದೆ ಕಾಂಗ್ರೆಸ್ ಜೊತೆ ಕಿಶೋರ್‌ನ ಅನುಭವವೂ ತೃಪ್ತಿಕರವಾಗಿಲ್ಲ. 2017 ರಲ್ಲಿ ಕಾಂಗ್ರೆಸ್ ಉತ್ತರ ಪ್ರದೇಶ ಚುನಾವಣೆಗೆ ಸಮಾಜವಾದಿ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡರೂ ಮೈತ್ರಿ ವಿಫಲವಾಯಿತು, ಬಿಜೆಪಿ ಜಯಗಳಿಸಿತು. ಕಾಂಗ್ರೆಸ್ ಕಾರ್ಯತಂತ್ರವನ್ನು ರೂಪಿಸಿದ ಕಿಶೋರ್ ಪಂಜಾಬ್‌ನಲ್ಲಿ ಪಕ್ಷದ ಗೆಲುವಿನಿಂದ ಮಾತ್ರ ಸಮಾಧಾನವನ್ನು ಪಡೆದುಕೊಳ್ಳಬೇಕಾಯಿತು.

ಕಾಂಗ್ರೆಸ್ ಬದಲಾಗಬೇಕು ಎಂದಿದ್ದ ಚುನಾವಣಾ ತಂತ್ರಜ್ಞ
ಅಂದಿನಿಂದ ಭಾರತದ ಹಳೆಯ ಪಕ್ಷ ಮತ್ತು ಅದರ ಕಾರ್ಯವೈಖರಿಯನ್ನು ಹೆಚ್ಚಾಗಿ ಟೀಕಿಸಿದ್ದಾರೆ. ಮೇ ತಿಂಗಳಲ್ಲಿ ಕಾಂಗ್ರೆಸ್ "100 ವರ್ಷಗಳ ಹಳೆಯ ರಾಜಕೀಯ ಪಕ್ಷವಾಗಿದೆ ಮತ್ತು ಅದು ತನ್ನದೇ ಆದ ಕಾರ್ಯನಿರ್ವಹಿಸುವ ವಿಧಾನಗಳನ್ನು ಹೊಂದಿದೆ. ಪ್ರಶಾಂತ್ ಕಿಶೋರ್ ಅಥವಾ ಇತರರು ಸೂಚಿಸಿದ ಮಾರ್ಗಗಳಲ್ಲಿ ಕೆಲಸ ಮಾಡಲು ಅದು ಸಿದ್ದವಿಲ್ಲ. ನನ್ನ ಕಾರ್ಯವೈಖರಿಯ ಪ್ರಕಾರ ಕಾಂಗ್ರೆಸ್ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ಅರ್ಥೈಸಿ ಸಮಸ್ಯೆ ಕಂಡುಕೊಳ್ಳಬೇಕು. ಕಾಂಗ್ರೆಸ್ ಎಲ್ಲಿ ತಪ್ಪಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು," ಎಂದು ಹೇಳಿದ್ದರು.
(ಒನ್‌ಇಂಡಿಯಾ ಸುದ್ದಿ)
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications