• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡರ ಜನ್ಮದಿನ: ದೀರ್ಘಾಯುಷ್ಯಕ್ಕಾಗಿ ಗಣ್ಯರ ಪ್ರಾರ್ಥನೆ

|

ನವ ದೆಹಲಿ, ಮೇ 18: ಮಾಜಿ ಪ್ರಧಾನಿ ದೇವೇಗೌಡರು ಇಂದು 88ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ದೂರವಾಣಿ ಮೂಲಕ ದೇವೇಗೌಡರಿಗೆ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆ ಮೂಲಕವೂ ವಿಶ್ ಮಾಡಿದ್ದಾರೆ. ದೇವರು ಉತ್ತಮ ಆರೋಗ್ಯ, ಆಯಸ್ಸು ನೀಡಲೆಂದು ಪ್ರಾರ್ಥನೆ ಮಾಡಿದ್ದಾರೆ.

ದೇವೇಗೌಡರಿಗೆ ಪ್ರಧಾನಿ ಮೋದಿಯಿಂದ ಪ್ರಶಂಸಾ ಪತ್ರ

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ, ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಅನೇಕ ಗಣ್ಯರು ಶುಭಾಶಯ ತಿಳಿಸಿದ್ದಾರೆ. ದೇವೇಗೌಡರ ಬೆಂಬಲಿಗರು, ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಸಹ ಶುಭಾಶಯ ತಿಳಿಸಿದ್ದಾರೆ.

ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಮನೆ ಬಳಿ ಬಾರದಂತೆ ಮನವಿ ದೇವೇಗೌಡರು ಮನವಿ ಮಾಡಿದ್ದರು. ಕೊರೋನಾ ವೈರಸ್‌ ಹಿನ್ನಲೆಯಲ್ಲಿ ಜನ ಸೇರುವುದು ಅಪಾಯಕಾರಿ ಎಂದು ಯಾರೂ ಕೂಡಾ ಮನೆ ಬಳಿ ಬಾರದಂತೆ ತಿಳಿಸಿದ್ದರು.

ದೇವರ ಅನುಗ್ರಹ ಸದಾ ಇರಲಿ

''ಭಾರತದ ಪ್ರಧಾನಮಂತ್ರಿಗಳಾಗಿ, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಮಹತ್ವದ ಸೇವೆ ಸಲ್ಲಿಸಿರುವ, ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ರಾಜಕೀಯ ಮುತ್ಸದ್ಧಿ ಸನ್ಮಾನ್ಯ ಶ್ರೀ ಹೆಚ್‌ಡಿ ದೇವೇಗೌಡ ರವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರ ಅನುಗ್ರಹ ತಮ್ಮ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.''- ಬಿಎಸ್‌ ಯಡಿಯೂರಪ್ಪ, ಮುಖ್ಯಮಂತ್ರಿ

ಸಿದ್ಧರಾಮಯ್ಯ ಶುಭಾಶಯ

''ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ 87ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಅನುಭವ, ಜ್ಞಾನ‌ ಮತ್ತು ಮಾರ್ಗದರ್ಶನ ಇನ್ನಷ್ಟು ಕಾಲ ರಾಜ್ಯಕ್ಕೆ, ದೇಶಕ್ಕೆ ಲಭ್ಯವಾಗಲಿ. ಆರೋಗ್ಯ ಮತ್ತು ಆಯುಷ್ಯದ ಭಾಗ್ಯ ನಿಮ್ಮದಾಗಲಿ.''- ಸಿದ್ಧರಾಮಯ್ಯ, ವಿರೋಧ ಪಕ್ಷದ ನಾಯಕ

ಕಳೆದ ವಾರದಿಂದ ಕೊರೊನಾ ಸೋಂಕಿತರು ಹೆಚ್ಚಾಗಿದ್ದು ನನ್ನನ್ನು ಚಿಂತೆಗೀಡು ಮಾಡಿದೆ!

ಬದ್ಧತೆ, ಛಲ, ಪರಿಶ್ರಮ

''ದೇಶದ ಅತ್ಯುನ್ನತ, ಅಸಾಮಾನ್ಯ ಹುದ್ದೆಯನ್ನು ಸಾಮಾನ್ಯನೂ ಅಲಂಕರಿಸಬಹುದು ಎಂಬುದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ. ಈ ಮಾತನ್ನು, ಹಳ್ಳಿಯ ಮಣ್ಣಿಂದ ಬಂದು, ರಾಷ್ಟ್ರೀಯ ಪಕ್ಷದ ಹಿನ್ನೆಲೆ ಇಲ್ಲದೇ ಸಾಧಿಸಿ ತೋರಿಸಿದವರು ಹೆಚ್‌ ಡಿ ದೇವೇಗೌಡರು. ಬದ್ಧತೆ, ಛಲ, ಪರಿಶ್ರಮ, ಹೋರಾಟ ಮತ್ತು ನಾಡಿಗೆ ಹೆಗ್ಗುರುತಾಗಿರುವ ಅವರ ಜನ್ಮದಿನಕ್ಕೆ ಶುಭಾಶಯಗಳು.''- ಹೆಚ್‌ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಆಯುರಾರೋಗ್ಯವನ್ನು ಚೆನ್ನಾಗಿಡಲಿ

''ಹಿರಿಯ ಮುತ್ಸದ್ಧಿ ಮಾಜಿ ಪ್ರಧಾನಿ ಶ್ರೀ ಎಚ್ ಡಿ ದೇವೇಗೌಡ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮ್ಮ ಆಯುರಾರೋಗ್ಯವನ್ನು ಚೆನ್ನಾಗಿಡಲಿ. ರಾಜ್ಯಕ್ಕೆ, ದೇಶಕ್ಕೆ ಸುದೀರ್ಘವಾಗಿ ನಿಮ್ಮ ಜನಸೇವೆ, ಮಾರ್ಗದರ್ಶನ ದೊರೆಯುವಂತಾಗಲಿ.''- ಸದಾನಂದ ಗೌಡ, ಕೇಂದ್ರ ಸಚಿವ

ಹುಟ್ಟುಹಬ್ಬದ ಶುಭಾಶಯಗಳು

''ಹುಟ್ಟುಹಬ್ಬದ ಶುಭಾಶಯಗಳು ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ದೇವೇಗೌಡ ಅವರಿಗೆ. ಅವರಿಗೆ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ''- ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ದೀರ್ಘಾಯುಷ್ಯವನ್ನು ದಯಪಾಲಿಸಲಿ

''ಹಿರಿಯ ರಾಜಕೀಯ ಧುರೀಣರು, ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು ದಯಪಾಲಿಸಲಿ ಎಂದು ಹಾರೈಸುತ್ತೇನೆ.'' ಡಾ ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ

ಜನರ ಸೇವೆ ಮಾಡಲು ಆರೋಗ್ಯ ನೀಡಲಿ

''ಹುಟ್ಟುಹಬ್ಬದ ಶುಭಾಶಯಗಳು ಮಾಜಿ ಪ್ರಧಾನಿ ಶ್ರೀ ದೇವೇಗೌಡ ಅವರಗೆ. ಜನರ ಸೇವೆ ಮಾಡಲು ದೇವರು ಅವರಿಗೆ ದೀರ್ಘಾಯುಷ್ಯ, ಆರೋಗ್ಯ ನೀಡಲಿ'' ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ

ಮಣ್ಣಿನ ಮಗನ ಕತೆ

''ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ಹೆಚ್ ಡಿ ದೇವೇಗೌಡ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಿಂದೆ ಮಾಜಿ ಪ್ರಧಾನಿಗಳ ಜನ್ಮದಿನದ ಅಂಗವಾಗಿ ಬರೆದಿದ್ದ ಅಂಕಣ. ತಂತ್ರ, ಮಂತ್ರದಾಚೆಗಿನ ಮಣ್ಣಿನ ಮಗನ ಕತೆ ಹೇಳಲಾ ?'' ಎಂದು ತಾವು ಹಿಂದೆ ದೇವೇಗೌಡರ ಬಗ್ಗೆ ಬರೆದಿದ್ದ ಅಂಕಣವನ್ನು ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ.

English summary
Indian political leaders wishes for EX PM HD Devegowd's birthday in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X