ಡೊನಾಲ್ಡ್ ಟ್ರಂಪ್ ಗೆಲುವು: ಶುಭಾಶಯ ಕೋರಿದ ಪ್ರಧಾನಿ ಮೋದಿ

Posted By:
Subscribe to Oneindia Kannada

ನವದೆಹಲಿ, ನವೆಂಬರ್, 9: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಶುಭಾಶಯ ತಿಳಿಸಿದ್ದಾರೆ.

"ಅಮೆರಿಕ ರಾಷ್ಟ್ರದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಶುಭಾಶಯಗಳು" ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

"ಚುನಾವಣಾ ಪ್ರಚಾರದಲ್ಲಿ ಭಾರತದ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿರುವ ನಿಮ್ಮ ಸ್ನೇಹಹಸ್ತಕ್ಕೆ ನನ್ನ ಧನ್ಯವಾದಗಳು" ಎಂದು ಮೋದಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಭಾರತ ಹೊಂದಿದ್ದು, ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದ್ದರು.ಟ್ರಂಪ್ ಅವರು ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿಯವರ ಭಾಷಣಗಳನ್ನೇ ಪುನರುಚ್ಚರಿಸಿದ್ದನ್ನು ಗಮನಿಸಬಹುದು.

PM Narendra Modi wishes to Donald Trump

2014ರ ಸಂಸತ್ ಚುನಾವಣೆ ಪ್ರಚಾರದಲ್ಲಿ ಮೋದಿಯವರು ಹೇಳಿದಂತೆ 'ಅಬ್ ಕೀ ಬಾರ್ ಮೋದಿ ಸರ್ಕಾರ್' ಎಂಬ ಘೋಷಣೆಯಂತೆ ಅವರು ಸಹ ಈ ಬಾರಿಯ ಸರ್ಕಾರ ಟ್ರಂಪ್ ಸರ್ಕಾರ ಆಗಲಿದೆ ಎಂದು ಹೇಳಿದ್ದರು.

ಅದೇ ರೀತಿ ಟ್ರಂಪ್ ಅವರು ಗೆದ್ದ ಬಳಿಕ ಮಾಡಿದ ಮೊದಲ ಭಾಷಣವೂ ನರೇಂದ್ರ ಮೋದಿಯವರ ಮಾತುಗಳನ್ನು ಪುನರುಚ್ಚರಿಸಿದಂತೆಯೇ ಇತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Prime Minister Narendra Modi wishes to Donald Trump for win as America 45th President, in Tweet
Please Wait while comments are loading...