ರಾಷ್ಟ್ರೀಯ ಪತ್ರಿಕಾ ದಿನ: ಮೋದಿ, ಸಿದ್ದರಾಮಯ್ಯ ಶುಭಹಾರೈಕೆ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 16: ಪ್ರತಿವರ್ಷ ನವೆಂಬರ್ 16 ಅನ್ನು ಭಾರತೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಪ್ರೆಸ್ ಕೌನ್ಸಿಲ್ ಕಾರ್ಯಾರಂಭ ಮಾಡಿದ್ದು, 1966 ರ ಇದೇ ದಿನ(ನ.16)ವಾದ್ದರಿಂದ, ಈ ದಿನವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಬ ಎಂದೇ ಕರೆಯಿಸಿಕೊಳ್ಳುವ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಮೋದಿಯನ್ನೇಕೆ ಪ್ರಶ್ನಿಸುವುದಿಲ್ಲ: ಮಾಧ್ಯಮದವರಿಗೆ ರಾಹುಲ್ ಪ್ರಶ್ನೆ

ಟ್ವಿಟ್ಟರ್ ನಲ್ಲಿಯೂ #NationalPressDay ಟ್ರೆಂಡಿಂಗ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಷ್ಟ್ರೀಯ ಪತ್ರಿಕಾ ದಿನಕ್ಕೆ, ಮಾಧ್ಯಮ ಮಿತ್ರರಿಗೆ ಶುಭಕೋರಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸಾರ್ವಜನಕ ಅಭಿಪ್ರಾಯ ಮೂಡಿಸಿ, ಅನ್ಯಾಯದ ವಿರುದ್ಧ ಜನಾಂದೋಲನ ಆರಂಭಿಸಿ, ಸಮಾಜದ ಹುಳುಕುಗಳನ್ನು ಹೊಡೆದೋಡಿಸುವ ಸಂಕಲ್ಪ ತೊಟ್ಟ ಎಲ್ಲ ಪತ್ರಕರ್ತರಿಗೂ ಪತ್ರಿಕಾ ದಿನದ ಶುಭ ಕೋರುತ್ತ, ಗಣ್ಯರ ಟ್ವೀಟ್ ನತ್ತ ಒಮ್ಮೆ ಕಣ್ಣು ಹಾಯಿಸೋಣ.

ಎಲ್ಲಾ ಪತ್ರಕರ್ತ ಮಿತ್ರರಿಗೂ ಶುಭಾಶಯ

ರಾಷ್ಟ್ರೀಯ ಪತ್ರಿಕಾ ದಿನದಂದು ನನ್ನೆಲ್ಲಾ ಪತ್ರಿಕರ್ತ ಮಿತ್ರರಿಗೂ ಶುಭಾಶಯಗಳು. ರಾಷ್ಟ್ರವನ್ನು ಬದಲಿಸುವಂಥ ಸುದ್ದಿಯನ್ನು ದಣಿವೂ ಲೆಕ್ಕಿಸದೆ ನೀಡುವ ಎಲ್ಲ ಪತ್ರಕರ್ತರ ಶ್ರಮವನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ನಾಲ್ಕನೇ ಆಧಾರ ಸ್ತಂಬವನ್ನು ಗಟ್ಟಿಗೊಳಿಸೋಣ

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಬವನ್ನು ಗಟ್ಟಿಕೊಳಿಸೋಣ. ಮತ್ತು ಮುಕ್ತ ಮತ್ತು ಸೌಹಾರ್ದಯುತ ಮಾಧ್ಯಮ ಜಗತ್ತಿಗೆ ಮುನ್ನುಡಿ ಬರೆದು ದೇಶದ ಹಿತ ಕಾಯೋಣ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಮಾಜಿಕ ಪ್ರಗತಿಗೆ ಜವಾಬ್ದಾರಿಯುತ ಪತ್ರಿಕೋದ್ಯಮ

ಎಲ್ಲಾ ಪತ್ರಕರ್ತ ಬಂಧುಗಳಿಗೂ ಪತ್ರಿಕಾ ದಿನದ ಶುಭಾಶಯಗಳು. ಪತ್ರಿಕಾ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ, ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ. ಮತ್ತು ಸಾಮಾಜಿಕ ಬೆಳವಣಿಗೆಗೂ ಅದು ಅಗತ್ಯ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಟ್ವೀಟ್ ಮಾಡಿದ್ದಾರೆ.

ಮಾಧ್ಯಮಗಳು ಸ್ವಾತಂತ್ರ್ಯ ಕಾಯ್ದುಕೊಳ್ಳುವಂತೆ ನೋಡೋಣ

ಪತ್ರಿಕಾ ದಿನದಂದು ಎಲ್ಲಾ ಪತ್ರಕರ್ತರಿಗೂ ಶುಭಹಾರೈಕೆಗಳು. ಪತ್ರಿಕಾರಂಗವು ಸದಾ ಸ್ವಾತಂತ್ರ್ಯ ಮತ್ತು ಬದ್ಧತೆಯನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳೋಣ ಎಂದು ಎಐಸಿಸಿ ಪ್ರಧಾನಿ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಟ್ವೀತ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Press Council of India started functioning as a responsible body overlooking the works of press as a whole body on November 16th, 1966. For this memory, Indians are celebrating National press day on this day. Indian PM Narendra Modi wishes all media friend on press day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ