ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

300+ ಕ್ಷೇತ್ರಗಳಲ್ಲಿ NDA ಗೆಲುವು ನಿಶ್ಚಿತ: ಮೋದಿ ನೀಡಿದ 5 ಕಾರಣಗಳು

|
Google Oneindia Kannada News

Recommended Video

ಲೋಕಸಭಾ ಚುನಾವಣೆಯಲ್ಲಿ 300+ ಕ್ಷೇತ್ರಗಳನ್ನ ಗೆಲ್ಲುವ ಹಿಂದೆ 5 ಕಾರಣಗಳನ್ನ ಕೊಟ್ಟ ಮೋದಿ | Oneindia Kannada

ನವದೆಹಲಿ, ಮಾರ್ಚ್ 29: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 300 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಎನ್ ಡಿಎ ಅಧಿಕಾರಕ್ಕೆ ಬಂದಾಗ 'ಮೋದಿ ಯಾರು? ಏನು ಮಾಡುತ್ತಾರೆ?' ಎಂದು ಪ್ರಶ್ನಿಸುತ್ತಿದ್ದರು. ಆದರೆ ಈಗ ಮೋದಿ ಯಾರು ಎಂಬುದು ಅರ್ಥವಾಗಿದೆ. ನಾವು ದೇಶದ ಭದ್ರತೆಗೆ, ಬಡತನ ನಿವಾರಣೆಗೆ ಏನೆಲ್ಲ ಮಾಡಿದ್ದೇವೆ ಎಂಬುದು ಜನರಿಗೆ ತಿಳಿದಿದೆ ಎಂದು ಮೋದಿ ಹೇಳಿದರು

ಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿ

ರಿಪಬ್ಲಿಕ್ ಟಿವಿಗೆ ಅವರು ನೀಡಿದ ಸಂದರ್ಶನದಲ್ಲಿ, ನರೇಂದ್ರ ಮೋದಿ ಅವರು ಹಿಂದಿನ ಸರ್ಕಾರವನ್ನು ತೀಕ್ಷ್ಣವಾಗಿ ಟೀಕಿಸಿದರು.

2019 ರ ಚುನಾವಣೆಯಲ್ಲಿ ಸ್ಪರ್ಧೆ ಎಂಬುದೇ ಇರುವುದಿಲ್ಲ, ನನ್ನ ರಾಜಕೀಯ ಅನುಭವದ ಮೇಲೆ ಹೇಳುತ್ತಿದ್ದೇನೆ. ಎನ್ ಡಿಎ ಮೈತ್ರಿ ಕೂಟ 300 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಮೋದಿ ಹೇಳಿದರು.

ಯುಪಿಎಗೆ ಭದ್ರತಾ ಒಪ್ಪಂದ ಎಂದರೆ ಎಟಿಎಂ!

ಯುಪಿಎಗೆ ಭದ್ರತಾ ಒಪ್ಪಂದ ಎಂದರೆ ಎಟಿಎಂ!

ಹಿಂದಿನ ಸರ್ಕಾರಕ್ಕೆ ಭದ್ರತಾ ಒಪ್ಪಂದ ಎಂದರೆ ಎಟಿಎಂ ಆಗಿತ್ತು. ಎಲ್ಲಾ ಕಾಂಗ್ರೆಸ್ ಸರ್ಕಾರಗಳೂ ಇದನ್ನು ಎಟಿಎಂ ಥರವೇ ಉಪಯೋಗಿಸಿದರು. ರಕ್ಷಣಾ ಒಪ್ಪಂದಗಳನ್ನೂ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಮಾಡಬಹುದು ಎಂದರೆ ಒಪ್ಪುವ ಸ್ಥಿತಿಯಲ್ಲಿ ಕಾಂಗ್ರೆಸ್ಸಿಗರು ಇರಲಿಲ್ಲ. ತಮ್ಮ ಹಿತಾಸಕ್ತಿ ಈಡೇರಿದ ಮೇಲೆ ಅವರು ಸೇನೆಯ ಹಿತಾಸಕ್ತಿಯ ಬಗ್ಗೆ ಯೋಚಿಸುತ್ತಲೂ ಇರಲಿಲ್ಲ-ನರೇಂದ್ರ ಮೋದಿ

ಕಿಚಡಿ ಸರ್ಕಾರ ಜನರಿಗೆ ಬೇಕಿಲ್ಲ!

ಕಿಚಡಿ ಸರ್ಕಾರ ಜನರಿಗೆ ಬೇಕಿಲ್ಲ!

ಕಿಚಡಿ ಸರ್ಕಾರ ಜನರಿಗೆ ಬೇಕಿಲ್ಲ. ಜನರು ಕಳೆದ ಮೂವತ್ತು ವರ್ಷಗಳಿಂದ ಬಹುಮತವಿಲ್ಲದ, ಅಸ್ಥಿರ ಸರ್ಕಾರವನ್ನು ನೋಡಿದ್ದಾರೆ, ಜೊತೆಗೆ ಐದು ವರ್ಷಗಳಲ್ಲಿ ಬಹುಮತ ಪಡೆದ ಒಂದು ಸ್ಥಿರ ಸರ್ಕಾರದ ಆಡಳಿತ ನೋಡಿದ್ದಾರೆ. ಆದ್ದರಿಂದ ದೇಶದ ಹಿತಕ್ಕೆ ಸ್ಥಿರ ಸರ್ಕಾರ ಬೇಕು ಎಂದು ಜನರೂ ಬಯಸಿದ್ದಾರೆ- ನರೇಂದ್ರ ಮೋದಿ

ಮತ್ತೆ ಬಿಜೆಪಿಯೇ ಅಧಿಕಾರಕ್ಕೆ, ಮೋದಿ ಬಾಯಿಂದ ಖಚಿತ ಭರವಸೆಮತ್ತೆ ಬಿಜೆಪಿಯೇ ಅಧಿಕಾರಕ್ಕೆ, ಮೋದಿ ಬಾಯಿಂದ ಖಚಿತ ಭರವಸೆ

ಕುಟುಂಬ ರಾಜಕೀಯ ಅಪಾಯಕಾರಿ!

ಕುಟುಂಬ ರಾಜಕೀಯ ಅಪಾಯಕಾರಿ!

ಪ್ರಜಾಪ್ರಭುತ್ವಕ್ಕೆ ಎಂದಿಗೂ ಕುಟುಂಬ ರಾಜಕೀಯ ಒಳ್ಳೆಯದಲ್ಲ. ಒಂದೇ ಕುಟುಂಬದ ನಾಲ್ಕು ತಲೆಮಾರು ಬಡತನ ನಿರ್ಮೂಲನೆ ಬಗ್ಗೆ ಮಾತನಾಡುತ್ತಿತ್ತು. ಇಂದಿರಾ ಗಾಂಧಿಯವರೂ ಅದನ್ನೇ ಮಾತನಾಡಿದರೂ, ರಾಜೀವ್ ಗಾಂಧಿಯೂ ಅದನ್ನೇ ಹೇಳಿದರು. ಈಗ ರಾಹುಲ್ ಗಾಂಧಿ ಅವರೂ ಅದನ್ನೇ ಹೇಳುತ್ತಿದ್ದಾರೆ!- ನರೇಂದ್ರ ಮೋದಿ

ಎಲ್ಲರೊಂದಿಗೂ ಕೆಲಸ ಮಾಡುತ್ತೇನೆ!

ಎಲ್ಲರೊಂದಿಗೂ ಕೆಲಸ ಮಾಡುತ್ತೇನೆ!

ನಾನೊಬ್ಬ ಜವಾಬ್ದಾರಿಯುತ ನಾಗರಿಕನಾಗಿ, ಜವಾಬ್ದಾರಿಯುತ ರಾಜಕಾರಣಿಯಾಗಿ, ಜವಾಬ್ದಾರಿಯುತ ಪ್ರಧಾನಿಯಾಗಿ ಎಲ್ಲರೊಂದಿಗೂ ಸೇರಿ ಕೆಲಸ ಮಾಡುತ್ತೇನೆ. ಅದು ಕಾಂಗ್ರೆಸ್ ಇರಲಿ, ಮಾಯಾವತಿ ಇರಲಿ, ಮಮತಾ ಬ್ಯಾನರ್ಜಿ ಇರಲಿ... - ನರೇಂದ್ರ ಮೋದಿ

ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ

ದೇಶಕ್ಕಾಗಿ ಬದುಕುತ್ತಿದ್ದೇನೆ

ದೇಶಕ್ಕಾಗಿ ಬದುಕುತ್ತಿದ್ದೇನೆ

ನಾನು ಜನರಿಗಾಗಿ ಕೆಲಸ ಮಾಡುವ ಪ್ರಧಾನಿ. ಜನರು ನನಗೊಂದು ಕೆಲಸ ಕೊಟ್ಟಿದ್ದಾರೆ, ನಾನು ಆ ಕೆಲಸ ಮಾಡಬೇಕೇ ಹೊರತು, ನನಗಾಗಿ ಬದುಕುವ ಹಕ್ಕು ನನಗಿಲ್ಲ. ನಾನು ದೇಶಕ್ಕಾಗಿ ಬದುಕುತ್ತೇನೆ, ಎಷ್ಟು ಕಾಲ ದೇಶ ಸೇವೆಗೆ ಜನ ಸವಕಾಶ ನೀಡುತ್ತಾರೋ ಅಷ್ಟು ಕಾಲ ನಾನು ಕೆಲಸ ಮಾಡುತ್ತೇನೆ- ನರೇಂದ್ರ ಮೋದಿ

English summary
Prime minister Narendra Modi in an interview with Republic TV, told, NDA will win over 300 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X