SWR: ರೈಲು ಪ್ರಯಾಣಿಕರೇ ಗಮನಿಸಿ: ಬೇಸಿಗೆ ವಿಶೇಷ ರೈಲುಗಳ ಸೇವೆ 2026 ಜೂನ್‌ವರೆಗೂ ವಿಸ್ತರಣೆ

ಬೆಂಗಳೂರು: ನೈಋರೈ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಬೇಸಿಗೆ ವೇಳೆ ಕಾರ್ಯಾಚರಣೆ ಮಾಡುತ್ತಿದ್ದ ವಿವಿಧ ಮಾರ್ಗಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಮುಂದುವರಿಸಿದೆ. ಈ ಮೂಲಕ ಹೆಚ್ಚುವರಿ ಸಂಚಾರ ದಟ್ಟಣೆ ನಿವಾರಣೆಗೆ ಮುಂದಾಗಿದೆ. ಹುಬ್ಬಳ್ಳಿ-ರಾಮೇಶ್ವರಂ, ಹುಬ್ಬಳ್ಳಿ-ಕೊಲ್ಲಂ ಹಾಗೂ ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲುಗಳ ಸೇವೆ ಇನ್ನಷ್ಟು ದಿನ ಪ್ರಯಾಣಕ್ಕೆ ಲಭ್ಯವಾಗಲಿವೆ.

ಪ್ರಯಾಣಿಕರ ಬೇಡಿಕೆ ಆಧಾರದಲ್ಲಿ ಬೇಸಿಗೆ ವಿಶೇಷ ರೈಲುಗಳ ಸೇವೆಗಳನ್ನು 2026 ಜೂನ್ ತಿಂಗಳವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ವಿಸ್ತರಣೆಗೊಂಡ ರೈಲುಗಳ ವೇಳಾಪಟ್ಟಿ, ಮಾರ್ಗಗಳ ಮಾಹಿತಿ ಇಲ್ಲಿದೆ.

South Western Railway

ವಿಸ್ತರಣೆಗೊಂಡ ವಿಶೇಷ ರೈಲುಗಳ ವೇಳಾಪಟ್ಟಿ

* ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು (07355) ಪ್ರತಿ ಭಾನುವಾರ ಸಂಚರಿಸಲಿದೆ. ಈ ಮೊದಲಿನಂತೆ ಮೇ 31ರವರೆಗೆ ಮಾತ್ರವಲ್ಲದೇ ಹೊಸ ಅಧಿಸೂಚನೆ ಪ್ರಕಾರ ಜೂನ್ 7ರಿಂದ ಜೂನ್ 28ರವರೆಗೆ ಸೇವೆ ಮುಂದುವರಿಸಲಿದೆ. ಒಟ್ಟು ನಾಲ್ಕು ಟ್ರಿಪ್‌ಗಳ ಹೆಚ್ಚುವರಿ ಸೇವೆ ಪ್ರಯಾಣಿಕರಿಗೆ ಸಿಗಲಿದೆ.

Video: ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ತಪ್ಪಿಸಲು ಸರ್ವೀಸ್‌ ರಸ್ತೆಗೆ ಇಳಿದ KSRTC ಬಸ್, ಚಾಲಕನಿಗೆ ನೆಟ್ಟಿಗರ ತರಾಟೆ
Video: ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ತಪ್ಪಿಸಲು ಸರ್ವೀಸ್‌ ರಸ್ತೆಗೆ ಇಳಿದ KSRTC ಬಸ್, ಚಾಲಕನಿಗೆ ನೆಟ್ಟಿಗರ ತರಾಟೆ

* ಅದೇ ರೀತಿ ರಾಮೇಶ್ವರಂ-ಹುಬ್ಬಳ್ಳಿ ರೈಲು (07356) ಪ್ರತಿ ಸೋಮವಾರಗಳಂದು ಕಾರ್ಯಾಚರಣೆ ಮಾಡಲಾಗುತ್ತದೆ. ಈ ರೈಲು ಜೂನ್ 8ರಿಂದ ಜೂನ್ 29ರವರೆಗೆ ವಿಸ್ತರಣೆ ಆಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು (07313) ಪ್ರತಿ ಭಾನುವಾರ ಸಂಚರಿಸಲಿ. ಮೇ 24ರಂದು ಅಂತ್ಯಗೊಳ್ಳದೇ, ಈ ರೈಲಿನ ಸೇವೆಯನ್ನು ಇದೀಗ ಮೇ 31ರಿಂದ ಜೂನ್ 21ರವರೆಗೆ ವಿಸ್ತರಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಜೂನ್ 7 ಸಿವಿಲ್ ಕಾಮಗಾರಿಗಳ ಕಾರಣದಿಂದ ಈ ಸೇವೆ ರದ್ದಾಗಿದೆ.

* ಕೊಲ್ಲಂ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (07314) ಪ್ರತಿ ಸೋಮವಾರಗಳಂದು ಸಂಚಾರ ಸೇವೆ ನೀಡಲಿದೆ. ಮೇ 25ರವರೆಗೆ ಮಾತ್ರವೇ ಇದ್ದ ಸೇವೆಯನ್ನು ಜೂನ್ 1ರಿಂದ ಜೂನ್ 22ರವರೆಗೆ ವಿಸ್ತರಿಸಲಾಗಿದೆ. ರೈಲ್ವೆ ಕಾಮಗಾರಿ ಪ್ರಯುಕ್ತ ಜೂನ್ 8ರಂದು ಈ ರೈಲು ಸೇವೆ ರದ್ದುಗೊಳಿಸಲಾಗಿದೆ. ತಿಂಗಳಲ್ಲಿ ಒಟ್ಟು ಮೂರು ಸೇವೆ ಮಾತ್ರ ನೀಡಲಿದೆ.

* ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಸೆಂಟ್ರಲ್ ವಿಶೇಷ ರೈಲು (06523) ಪ್ರತಿ ಸೋಮವಾರ ಮೇ 25ರವರೆಗೆ ಮಾತ್ರವೇ ಸೇವೆಗೆ ನಿಯೋಜಿಸಲಾಗಿತ್ತು. ಇದೀಗ ಜೂನ್ 1ರಿಂದ ಜೂನ್ 22ರವರೆಗೆ ಇದರ ಸೇವೆ ವಿಸ್ತರಣೆಗೊಂಡಿದೆ.

* ತಿರುವನಂತಪುರಂ ಸೆಂಟ್ರಲ್-ಎಸ್‌ಎಂವಿಟಿ ಬೆಂಗಳೂರು ರೈಲು (06524)ಪ್ರತಿ ಮಂಗಳವಾರ ಅದೇ ದಿಕ್ಕಿನಲ್ಲಿ ಸೇವೆ ಒದಗಿಸಲಿದೆ. ಜೂನ್ 2ರಿಂದ ಜೂನ್ 23ರವರೆಗೆ ವಿಸ್ತರಣೆಗೊಂಡಿದೆ. ಈ ಮಾರ್ಗದಲ್ಲಿ ಒಟ್ಟು ನಾಲ್ಕು ಟ್ರಿಪ್‌ಗಳು ಸೇವೆ ಪ್ರಯಾಣಿಕರಿಗೆ ಸಿಗಲಿದೆ.

* ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಸೆಂಟ್ರಲ್ ರೈಲು (06547) ಪ್ರತಿ ಬುಧವಾರಕ್ಕೊಮ್ಮೆಯಂತೆ ಮೇ 27ರವರೆಗೆ ಮಾತ್ರ ಸಂಚರಿಸಬೇಕಿತ್ತು. ವಿಸ್ತರಣೆಯ ನಿರ್ಧಾರದಿಂದಾಗಿ ಈ ರೈಲು ಜೂನ್ 3ರಿಂದ ಜೂನ್ 24ರವರೆಗೆ ಕಾರ್ಯಾಚರಣೆ ಮಾಡಲಿದೆ.

KWIN City: ಬೆಂಗಳೂರಿಗೆ ಬಂಪರ್, 'ಕ್ವೀನ್ ಸಿಟಿ'ಯಲ್ಲಿ ವಿಶ್ವದಲ್ಲೇ ಮೊದಲ 'ಬಿಝ್ಇಂಟೆಲ್ ಹಬ್' ಸ್ಥಾಪನೆ
KWIN City: ಬೆಂಗಳೂರಿಗೆ ಬಂಪರ್, 'ಕ್ವೀನ್ ಸಿಟಿ'ಯಲ್ಲಿ ವಿಶ್ವದಲ್ಲೇ ಮೊದಲ 'ಬಿಝ್ಇಂಟೆಲ್ ಹಬ್' ಸ್ಥಾಪನೆ

*ತಿರುವನಂತಪುರಂ ಸೆಂಟ್ರಲ್-ಎಸ್‌ಎಂವಿಟಿ ಬೆಂಗಳೂರು ರೈಲು (06548) ಪ್ರತಿ ಗುರುವಾರ ಸಂಚರಿಸಲಿದೆ. ಜೂನ್ 4ರಿಂದ ಜೂನ್ 25ರವರೆಗೆ ಸೇವೆ ಮುಂದುವರಿಸಲಿದೆ. ವಿಸ್ತರಣೆ ಅವಧಿಯಲ್ಲಿ ಈ ರೈಲಿನಿಂದ ಒಟ್ಟು ನಾಲ್ಕು ಟ್ರಿಪ್‌ಗಳ ಕಾರ್ಯಾಚರಣೆ ಸಾಧ್ಯವಾಗಲಿದೆ.

* ಎಸ್‌ಎಂವಿಟಿ ಬೆಂಗಳೂರು-ತಿರುವನಂತಪುರಂ ಸೆಂಟ್ರಲ್ ರೈಲು (06555) ಪ್ರತಿ ಶುಕ್ರವಾರ ಸಂಚರಿಸುತ್ತದೆ. ಮೇ 29ರವರೆಗೆ ಮಾತ್ರವೇ ಸೀಮಿತವಾಗಿದ್ದ ಈ ರೈಲು ಸೇವೆಯನ್ನು ಜೂನ್ 19ರಿಂದ ಜೂನ್ 26ರವರೆಗೆ ವಿಸ್ತರಿಸಲಾಗಿದೆ. ಆದರೆ ಜೂನ್ 5 ಮತ್ತು ಜೂನ್ 12ರಂದು ರೈಲ್ವೆ ಟ್ರ್ಯಾಕ್ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸೇವೆ ರದ್ದಾಗಲಿದೆ.

* ತಿರುವನಂತಪುರಂ ಸೆಂಟ್ರಲ್-ಎಸ್‌ಎಂವಿಟಿ ಬೆಂಗಳೂರು ರೈಲು (06556) ಭಾನುವಾರಗಳಲ್ಲಿ ಸಂಚರಿಸಲಿದೆ. ಮೇ 31ರವರೆಗೆ ಸೀಮಿತವಾಗಿದ್ದ ರೈಲು ಜೂನ್ 21ರಿಂದ ಜೂನ್ 28ರವರೆಗೆ ವಿಸ್ತರಿಸಲಾಗಿದೆ. ಜೂನ್ 7 ಮತ್ತು ಜೂನ್ 14ರಂದು ಈ ಸೇವೆಯೂ ರದ್ದಾಗಲಿದ್ದು, ಒಟ್ಟು ಎರಡು ಟ್ರಿಪ್ ಸೇವೆ ಈ ರೈಲಿನಿಂದ ಸಿಗಲಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ತರಣೆಗೊಂಡ ರೈಲುಗಳ ಮಾಹಿತಿ, ವೇಳಾಪಟ್ಟಿಗಾಗಿ ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ NTES ಆಪ್ ಅಥವಾ 139 ಸಹಾಯವಾಣಿ ಸಂಪರ್ಕಿಸುವಂತೆ ನೈಋತ್ಯ ರೈಲ್ವೆ ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+