ಕೃಷಿ ಸುಧಾರಣೆಗಳು ಈಗಾಗಲೇ ರೈತರಿಗೆ ಲಾಭ ತಂದುಕೊಡುತ್ತಿದೆ: ಮೋದಿ
ನವದೆಹಲಿ, ಡಿಸೆಂಬರ್ 19:ಕೃಷಿ ಸುಧಾರಣೆಗಳು ಈಗಾಗಲೇ ರೈತರಿಗೆ ಲಾಭವನ್ನು ತಂದುಕೊಡಲು ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸೋಚಾಮ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಆರು ವರ್ಷಗಳಲ್ಲಿ ಭಾರತವು ಹೂಡಿಕೆಗೆ ವಿಶ್ವದ ಆದ್ಯತೆಯ ತಾಣವಾಗಿ ಹೊರಹೊಮ್ಮಿದೆ ಎಂದು ಹೇಳಲು ಉತ್ಪಾದನಾ ವಲಯದಿಂದ ಕಾರ್ಮಿಕರವರೆಗೆ ವ್ಯಾಪಿಸಿರುವ ಸುಧಾರಣೆಗಳನ್ನು ಪ್ರಮುಖ ಅಂಶವಾಗಿ ಹೇಳಿದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಆರು ತಿಂಗಳ ಹಿಂದೆ ತಮ್ಮ ಸರ್ಕಾರ ತಂದ ಸುಧಾರಣೆಗಳಿಂದ ಈಗಾಗಲೇ ರೈತರಿಗೆ ಲಾಭವಾಗತೊಡಗಿದೆ ಎಂದರು.

ಹೊಸ ಕೃಷಿ ಕಾಯ್ದೆಗಳು ರೈತರಿಗೆ ಬೆಳೆಗಳನ್ನು ಮಾರಾಟ ಮಾಡಲು, ಆದಾಯವನ್ನು ಹೆಚ್ಚಿಸಲು ಪರ್ಯಾಯ ಮಾರ್ಗಕ್ಕೆ ಅವಕಾಶವಾಗಿದೆ ಮತ್ತು ಕೃಷಿಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ಗುರಿಯನ್ನು ಹೊಂದಿದೆ ಎಂದು ಅದು ಹೇಳುತ್ತದೆ.ಅಲ್ಲದೆ, ಹೊಸ ಕಾನೂನುಗಳು ಎಂಎಸ್ ಪಿ ಆಧಾರಿತ ಖರೀದಿಯನ್ನುಅಂತ್ಯಗೊಳಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಲು ಬಯಸುತ್ತದೆ ಎಂದು ಹೇಳಿದರು.
ಕೊರೊನಾ ಸಮಯದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ (ಎಫ್‌ಪಿಐ) ದಾಖಲೆಯಾಗಿದ್ದು, ಜಗತ್ತು ಈಗ ಭಾರತದಲ್ಲಿ ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು. ಆರು ತಿಂಗಳ ಹಿಂದೆಯೇ ಪ್ರಾರಂಭಿಸಲಾದ ಕೃಷಿ ಸುಧಾರಣೆಗಳು ರೈತರಿಗೆ ಪ್ರಯೋಜನವನ್ನು ನೀಡಲು ಪ್ರಾರಂಭಿಸಿವೆ ಎಂದು ನುಡಿದರು.












Click it and Unblock the Notifications