ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ಏಷ್ಯಾ, ರಷ್ಯಾ, ಬ್ರಿಕ್ಸ್ ಸಭೆ, ಮೋದಿ ಟೂರ್ ಗೈಡ್

By Mahesh
|
Google Oneindia Kannada News

ನವದೆಹಲಿ, ಜುಲೈ 06: ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಂಟು ದಿನಗಳ ಪ್ರವಾಸದಲ್ಲಿ ಬ್ರಿಕ್ಸ್, ಎಸ್ಸಿಒ ಸಮಾವೇಶ, ಸೇರಿದಂತೆ ಹಲವು ಮಹತ್ವದ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಉಜ್ಬೇಕಿಸ್ತಾನದಿಂದ ಮೋದಿ ಅವರ ಪ್ರವಾಸ ಆರಂಭವಾಗಲಿದೆ. ಮಂಗಳವಾರ ಕಜಕಿಸ್ತಾನಕ್ಕೆ ಭೇಟಿ ನೀಡುವರು. ಜು.8 ರಂದು ರಷ್ಯಾ, ಜು.10-11 ರಂದು ತುರ್ಕೇನಿಸ್ತಾನ, ಜು.11-12 ರಂದು ಕಿರ್ಜಿಸ್ತಾನ್ ಹಾಗೂ ಜು.12-13 ರಂದು ತಜಿಕಿಸ್ಥಾನ್ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಆರ್ಥಿಕ ಅಭಿವೃದ್ಧಿ ಮತ್ತು ಇಂಧನ ಉತ್ಪಾದನೆಗೆ ಸಂಬಂಧಿಸಿದಂತೆ ಒಪ್ಪಂದಗಳಿಗೆ ಸಹಿ ಹಾಕುವುದು, ಬ್ರಿಕ್ಸ್ ಸಭೆಯಲ್ಲಿ ಪಾಲ್ಗೊಳ್ಳುವುದು, ಹಾಗೂ ಶಾಂಘಾಯ್ ಸಹಕಾರ ಸಂಘಟನೆಗೆ ಹಾಜರಾಗುವುದು ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ವೇಳಾಪಟ್ಟಿಯಲ್ಲಿದೆ.

Modi

ರಷ್ಯಾದಲ್ಲಿ ಎಸ್‌ಸಿಒ ಸಮಾವೇಶ (ಶಾಂಘೈ ಸಹಕಾರ ಸಂಘಟನೆಯ ಸಮಾವೇಶ) ಜುಲೈ 8 ರಿಂದ 10ರ ತನಕ ನಡೆಯಲಿದೆ. ಈ ಸಂದರ್ಭ ಚೀನಾ, ರಷ್ಯಾ, ಕಜಕಿಸ್ತಾನ, ಕಿರ್ಜಿಸ್ತಾನ, ಉಜಬೆಕಿಸ್ತಾನ ಮತ್ತು ತಜಿಕಿಸ್ತಾನಗಳ ಒಕ್ಕೂಟಕ್ಕೆ ಭಾರತವೂ ಸೇರ್ಪಡೆಗೊಳ್ಳುವ ಕಾರ್ಯಕ್ರಮವಿದೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ಸೌತ್ ಆಫ್ರಿಕಾ ದೇಶಗಳ ಬ್ರಿಕ್ಸ್ (ಬಿಆರ್‌ಐಸಿಎಸ್) ಸಮಾವೇಶವು ದೇಶದ ಅಭಿವೃದ್ಧಿ, ಹೊರದೇಶಗಳೊಂದಿಗಿನ ಬಾಂಧವ್ಯ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಬ್ರಿಕ್ಸ್ ಸಮಾವೇಶದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಬ್ರೆಜಿಲಿಯನ್ ಅಧ್ಯಕ್ಷೆ ದಿಲ್ಮಾ ರೊಸೆಫ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ದಕ್ಷಿಣ ಆಫ್ರಿಕಾದ ಜಾಕಬ್ ಜುಮಾ ಅವರನ್ನು ಮೋದಿ ಭೇಟಿ ಮಾಡಲಿದ್ದಾರೆ. ಶಾಂಘೈ ಸಹಕಾರ ಸಂಘಟನೆಗಳ ಸಭೆಯಲ್ಲಿ ಪಾಕಿಸ್ತಾನದ ನವಾಜ್ ಷರೀಫ್ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.

* ಉಜ್ಬೇಕಿಸ್ತಾನದಲ್ಲಿ ತಾಷ್ಕೆಂಟ್ ನಲ್ಲಿ ಹಿಂದಿ ವಿದ್ಯಾರ್ಥಿಗಳ ಜೊತೆ ಮೋದಿ ಅವರ ಸಂವಾದ ಕಾರ್ಯಕ್ರಮವಿದೆ.
* ಕಜಕಿಸ್ತಾನ್: ನಜರ್ ಬಯೆವ್ ವಿವಿಯಲ್ಲಿ ಭಾಷಣ, ಭಾರತ-ಕಜಕ್ ಸ್ತಾನ್ ಸೆಂಟರ್ ಫಾರ್ ಎಕ್ಸಲೆನ್ಸಿ ಭಾರತದ ಪರಮ್ ಸೂಪರ್ ಕಂಪ್ಯೂಟರ್ ವೀಕ್ಷಣೆ.
* ಅಲ್ಮಟಿಯಲ್ಲಿ ವಿವಿಧ ಸಂಸ್ಥೆಗಳ ಸಿಇಒಗಳ ಜೊತೆ ಮೋದಿ ಸಂವಾದ.
* ತುರ್ಕ್ ಮೇನಿಸ್ತಾನದಲ್ಲಿ ಸಾಂಪ್ರದಾಯಿಕ ಔಷಧ ಹಾಗೂ ಯೋಗ ಕೇಂದ್ರ ಉದ್ಘಾಟನೆ.
* ಕಿರ್ಜಿಸ್ತಾನ್: ಇ ಆರೋಗ್ಯ ಯೋಜನೆ ಬಿಷ್ಕೆಕ್ ನಲ್ಲಿ ಆಸ್ಪತ್ರೆ ಜೊತೆಗೆ ಭಾರತದ ಆಸ್ಪತ್ರೆ ಜೊತೆ ಸಂಪರ್ಕ.
* ತಜಕಿಸ್ತಾನ್: ಅಧ್ಯಕ್ಷ ಎಮೊಮಲಿ ರೊಹ್ಮನ್ ಜೊತೆ ಮಾತುಕತೆ ಹಾಗೂ ಇನ್ನಿತರ ಕಾರ್ಯಕ್ರಮ. (ಐಎಎನ್ ಎಸ್)

English summary
Prime Minister Narendra Modi will be on an eight-day visit to the five Central Asian countries and to Ufa in Russia for the BRICS and SCO back-to-back summits from July 6-13 that will see a packed schedule with the prime minister spending barely 24 hours in each country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X