ಮೆಟ್ರೋ ಮೆಜೆಂತಾ ಲೈನ್ ಉದ್ಘಾಟನೆ ಪಿಎಂ vs ಸಿಎಂ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ದೆಹಲಿ ಮೆಟ್ರೋ ರೈಲಿನ ಮೆಜೆಂತಾ ಲೈನ್‌‌ ಉದ್ಘಾಟಿಸಲಿದ್ದಾರೆ. ಆದರೆ, ಈ ಉದ್ಘಾಟನಾ ಸಮಾರಂಭಕ್ಕೆ ದೆಹಲಿಸಿಎಂ ಅರವಿಂದ್‌‌ ಕೇಜ್ರಿವಾಲ್‌ಗೆ ಅಧಿಕೃತ ಆಹ್ವಾನ ಸಿಕ್ಕಿಲ್ಲ.

ನೋಯ್ಡಾದ ಬಟಾನಿಕಲ್‌ ಗಾರ್ಡನ್‌‌ನಿಂದ ದಕ್ಷಿಣ ದೆಹಲಿಯ ಕಲ್ಕಾಜಿ ಮಂದಿರದ ತನಕ ಇರುವ ಮೆಜೆಂತಾ ಲೈನ್‌‌ ಸಂಪರ್ಕವನ್ನು ಲೋಕಾರ್ಪಣೆ ಮಾಡಲಾಗಿದೆ.

PM Modi to flag off Delhi Metro's magenta line, Kejriwal not invited

ನೋಯ್ಡಾದಲ್ಲಿ ಉದ್ಘಾಟನೆ ಕಾರ್ಯಕ್ರಮದ ನಂತರ ಮೋದಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ವಿವಿಐಪಿ ಆಹ್ವಾನಿತರಾಗಿದ್ದಾರೆ.

ಈ ಕಾರ್ಯಕ್ರಮದ ಕುರಿತು ಯಾವುದೇ ರೀತಿಯ ಆಹ್ವಾನವನ್ನು ಇದುವರೆಗೂ ಸ್ವೀಕರಿಸಿಲ್ಲ ಎಂದು ದೆಹಲಿ ಸರ್ಕಾರದ ವಕ್ತಾರರು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರ ನಡುವಿನ ಗುದ್ದಾಟ ಮುಂದುವರೆದಿದೆ. ಮೆಟ್ರೋ ದರ ಏರಿಕೆ ನಂತರ ಈಗ ಮೆಟ್ರೋ ಹೊಸ ಲೈನ್ ಉದ್ಘಾಟನೆ ಕಿತ್ತಾಟ ಆರಂಭವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Botanical Garden (Noida) to Kalkaji (Delhi) metro line is all set to be inaugurated by Prime Minister Narendra Modi on December 25, sans Kejriwal. However, inauguration ceremony does not include the name of Delhi Chief Minister, Arvind Kejriwal on the list of VIP invitees.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ