Get Updates
Get notified of breaking news, exclusive insights, and must-see stories!

'ಸುಳ್ಳು ಸುದ್ದಿ'ಗೆ ಶಿಕ್ಷೆ: ನಿರ್ಧಾರ ಹಿಂಪಡೆಯಲು ಮೋದಿ ಸೂಚನೆ

ನವದೆಹಲಿ, ಏಪ್ರಿಲ್ 03: ಸುಳ್ಳುಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದುಗೊಳಿಸುವ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಪತ್ರಕರ್ತರ ಮಾನ್ಯತೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳಲ್ಲಿ ತಿದ್ದುಪಡಿ ತಂದು, ಸುಳ್ಳು ಸುದ್ದಿ ಬಿತ್ತರಿಸಿದ್ದು ಸಾಬೀತಾದರೆ ಅಂಥ ಪತ್ರಕರ್ತರ ಮಾನ್ಯತೆ(ಅಕ್ರೆಡಿಷನ್) ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ ಒಂದು ದಿನದ ನಂತರ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಯಾವುದೇ ಒಂದು ಸುದ್ದಿ ಸುಳ್ಳೋ ಅಥವಾ ಅತ್ಯವೋ ಎಂಬುದನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ(ಪಿಸಿಐ)ಮತ್ತು ನ್ಯೂಸ್ ಬ್ರಾಡ್ ಕಾಸ್ಟ್ಟರ್ಸ್ ಅಸೋಸಿಯೇಶನ್(ಎನ್ ಬಿಎ)ಗಳು ನಿರ್ಧರಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು.

PM Modi directs to withdraw guidelines to stop fake news

ಈ ಕುರಿತಂತೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರದ ನಿರ್ಧಾರದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕೂಗು ಎದ್ದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+