ಮೌನಿ ಸಿಂಗ್: ಪ್ರಧಾನಿ ಬಳಿ ಮೊಬೈಲು ಇಲ್ವಂತೆ

Prime Minister Manmohan Singh has no mobile phone email account to hack
ನವದೆಹಲಿ, ಅ. 25: ಮತ್ತೆ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆಯೇ ಬರೆಯಬೇಕಿದೆ. ಏನಪ್ಪಾ ಅಂದರೆ ಕಲ್ಲನ್ನೂ ಮಾತನಾಡಿಸಬಲ್ಲ ಛಾತಿ ಪಡೆದಿರುವ ಇಂದಿನ ಮೊಬೈಲ್ ದೂರವಾಣಿಗಳು ಪ್ರಧಾನಿ ಸಿಂಗ್ ವಿಷಯದಲ್ಲಿ ಸೋತಿವೆ.

ಮೌನಿ ಸಿಂಗ್ ರೂಪದರ್ಶಿಯಾಗಿರುವ ಮೊಬೈಲ್ ತೆಗೆದುಕೊಂಡರೆ ಮನಮೋಹನ್ ಸಿಂಗ್ ಅವರಂತೆ ತಾನೂ ಎಲ್ಲಿ ಮೌನ ಮುನಿಯಾಗಬಿಡುತ್ತೇನೋ ಎಂಬ ಆತಂಕದಲ್ಲಿ ಜನ ಮೊಬೈಲ್ ಅನ್ನು ಖರೀದಿಸುವುದಿಲ್ಲ. ಇನ್ನು, ನಷ್ಟದ ಬಾಬ್ತು ಎಂದು ಮೊಬೈಲ್ ಆಪರೇಟರುಗಳು ಸಹ ಮೌನಿ ಸಿಂಗ್ ರನ್ನು ತಮ್ಮ ಮೊಬೈಲಿಗೆ ರೂಪದರ್ಶಿಯಾಗಿ ಹೊಂದಲು ಬಯಸುವುದಿಲ್ಲ.

ಬಹುಶಃ ಇದನ್ನೆಲ್ಲಾ ಅರ್ಥ ಮಾಡಿಕೊಂಡೇ ಏನೋ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊಬೈಲ್ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದಾರಂತೆ. ಏನಪ್ಪಾ ಅಂದರೆ ಅವರ ಬಳಿ ಮೊಬೈಲೇ ಇಲ್ವಂತೆ! ಸೆಟಲೈಟ್ ಫೋನ್, ಹಾಟ್ ಲೈನುಗಳು ಇರ್ತಾವಲ್ಲಾ ಅನ್ನಬಹುದು. ಆದರೆ ಖುದ್ದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಳಿ ಮೊಬೈಲ್ ಫೋನಿಲ್ಲ ಎಂಬುದು ಗಹನ ವಿಚಾರ.

ಅಷ್ಟೇ ಅಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ email ಸಹ ಇಲ್ಲ. ಹಾಗಾಗಿ ಅಮೆರಿಕ ಎಚ್ಚರಿಸಿರುವಂತೆ ನಮಗೇನೂ ಹ್ಯಾಕರುಗಳ ಆತಂಕ/ಭಯವೂ ಇಲ್ಲ ಎಂದು ನಮ್ಮ ಪ್ರಧಾನಿ ಕಚೇರಿ ಹೇಳಿಕೊಂಡಿದೆ.

ಅಮೆರಿಕದ ಗೂಢಚಾರರು ವಿಶ್ವದ 35 ಪ್ರಭಾವಿ ನಾಯಕರ ದೂರವಾಣಿ ಕರೆಗಳನ್ನು ಮತ್ತು emailಗಳನ್ನು ಕದ್ದುನೋಡುತ್ತಿವೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಧಾನಿಯ ಕಥೆಯೇನು ಎಂದು ಸುದ್ದಿಗಾರರು ಪ್ರಧಾನಿ ಕಚೇರಿಯನ್ನು ಕೇಳಲಾಗಿ ಅಲ್ಲಿನ ಅಧಿಕಾರಿಗಳು ಅಂಥಾ ಸಮಸ್ಯೆಯೇ ಇಲ್ಲ. ನಮ್ಮ ಪ್ರಧಾನಿ ಬಳಿ mobile phone ಇಲ್ಲ; personal email ಸಹ ಇಲ್ಲ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+