ಭಾರತದ ಮೊದಲ ಲೋಕಪಾಲರಾಗಿ ಪಿನಾಕಿ ಚಂದ್ರ ಅಧಿಕೃತ ನೇಮಕ
ನವದೆಹಲಿ, ಮಾರ್ಚ್ 19: ಭಾರತದ ಮೊದಲ ಲೋಕಪಾಳರಾಗಿ ಸುಪ್ರಿಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ಅಧಿಕೃತವಾಗಿ ನೇಮಿಸಲಾಗಿದೆ.
ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಪಿನಾಕಿ ಚಂದ್ರ ಘೋಷ್ ಅವರನ್ನು ಲೋಕಪಾಲರಾಗಿ ನೇಮಿಸಿದ್ದಾರೆ. ಪಿನಾಕಿ ಅವರು ಲೋಕಪಾಲರಾಗಿ ಕೇಂದ್ರವು ಆಯ್ಕೆ ಮಾಡಿತ್ತು, ಆದರೆ ಅಧಿಕೃತ ಘೋಷಣೆ ಮಾತ್ರವೇ ಬಾಕಿ ಇತ್ತು.
ನ್ಯಾಯಮೂರ್ತಿ ದಿಲೀಪ್.ಬಿ.ಬೋಸಲೆ, ಪಿ.ಕೆ.ಮೊಹಂತಿ, ಅಭಿಲಾಶ್ ಕುಮಾರಿ, ತ್ರಿಪಾಟಿ ಅವರುಗಳನ್ನು ನ್ಯಾಯಾಂಗ ಸದಸ್ಯರನ್ನಾಗಿ ರಾಷ್ಟ್ರಪತಿಗಳು ನೇಮಿಸಿದ್ದಾರೆ, ದಿನೇಶ್ ಕುಮಾರ್ ಜೈನ್, ಅರ್ಚನಾ ರಾಮಸುಂದರಂ, ಮಹೇಂದ್ರ ಸಿಂಗ್, ಡಾ.ಐಪಿ ಗೌತಮ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಮೇ 2017ರಲ್ಲಿ ಸುಪ್ರೀಂಕೋರ್ಟಿನಿಂದ ನಿವೃತ್ತಿಹೊಂದಿದ ಜಸ್ಟೀಸ್ ಘೋಶ್ ಅವರು ಸದ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ದ ಸದಸ್ಯರಾಗಿದ್ದಾರೆ. ಇದಕ್ಕೂ ಮುನ್ನ್ ಕೋಲ್ಕತ್ತಾದ ಹೈಕೋರ್ಟಿನ ಜಡ್ಜ್ ಹಾಗೂ ಆಂಧ್ರಪ್ರದೇಶ ಹೈಕೋರ್ಟಿನ ಮಾಜಿ ಮುಖ್ಯ ಜಸ್ಟೀಸ್ ಅಗಿದ್ದರು.

2013ರ ಲೋಕಯುಕ್ತ ಕಾಯ್ದೆ ಸೆಕ್ಷನ್ 4(3) ಅನ್ವಯ ಎಂಟು ಸದಸ್ಯರ ಸಮಿತಿಯನ್ನು ನೇಮಸಲಾಗಿತ್ತು. ಸುಮಾರು 20 ಹೆಸರುಗಳು ಕೇಳಿ ಬಂದಿದ್ದು, ಈ ಪೈಕಿ ನ್ಯಾಯಮೂರ್ತಿ ಪಿ. ಸಿ ಘೋಶ್ ಹೆಸರು ಅಂತಿಮವಾಗಿರುವ ಸುದ್ದಿ ಬಂದಿದೆ.
ಚುನಾವಣೆ ಸಮಯದಲ್ಲಿ ಲೋಕಪಾಲರನ್ನು ನೇಮಕ ಮಾಡಿರುವುದು ಬಿಜೆಪಿಯ ಚುನಾವಣೆ ಸ್ಟಂಟ್ ಎಂದು ವಿರೋಧ ಪಕ್ಷಗಳು ಟೀಕಿಸಿವೆ.












Click it and Unblock the Notifications