• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿಐಬಿ ಮುಖ್ಯಸ್ಥರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್

|

ನವದೆಹಲಿ, ಜೂನ್.08: ಭಾರತದ ಪತ್ರಿಕಾ ಮಾಹಿತಿ ಬ್ಯುರೋದ ಪ್ರಿನ್ಸಿಪಲ್ ಡೈರೆಕ್ಟರ್ ಜನರಲ್ ಕೆ.ಎಸ್.ದತ್ವಾಲಿಯಾ ಅವರಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

   ಚಿರಂಜೀವಿಯನ್ನು ನೋಡಿ ಕಣ್ಣಿರಿಟ್ಟ ಅಭಿಮಾನಿಗಳು | Chiranjeevi Sarja|

   ನವದೆಹಲಿಯ ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಆಸ್ಪತ್ರೆಯ ಅಪಘಾತ ವಿಭಾಗದಲ್ಲಿ ಕೆ.ಎಸ್.ದತ್ವಾಲಿಯಾರನ್ನು ದಾಖಲಿಸಿಕೊಳ್ಳಲಾಗಿದೆ. ಏಮ್ಸ್ ಆಸ್ಪತ್ರೆಯ ಅಪಘಾತ ವಿಭಾಗವನ್ನು ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿಯೇ ಮೀಸಲು ಇರಿಸಲಾಗಿದೆ.

   ನವದೆಹಲಿ ಆಸ್ಪತ್ರೆಗಳಲ್ಲಿ ಸ್ಥಳೀಯ ರೋಗಿಗಳಿಗಷ್ಟೇ 'ಬೆಡ್' ವ್ಯವಸ್ಥೆ!

   ಪಿಐಬಿ ಪ್ರಿನ್ಸಿಪಲ್ ಡೈರೆಕ್ಟರ್ ಜನರಲ್ ಕೆ.ಎಸ್.ದತ್ವಾಲಿಯಾ ಆರೋಗ್ಯ ಸ್ಥಿತಿಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ರಾಷ್ಟ್ರೀಯ ವೈದ್ಯಕೀಯ ಕೇಂದ್ರದ ಬಳಿ ಇರುವ ಕಚೇರಿಯನ್ನು ಬಂದ್ ಮಾಡಲಾಗಿದ್ದು, ಕಚೇರಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

   ಶಾಸ್ತ್ರಿ ಭವನದಲ್ಲಿ ಮಾಧ್ಯಮಗೋಷ್ಠಿಗಳಿಗೆ ಅವಕಾಶ:

   ರಾಷ್ಟ್ರೀಯ ವೈದ್ಯಕೀಯ ಕೇಂದ್ರದ ಬಳಿ ಇರುವ ಕಚೇರಿಯನ್ನು ಶಿಷ್ಟಾಚಾರದ ಪ್ರಕಾರ 48 ಗಂಟೆಗಳ ಕಾಲ ಬಂದ್ ಮಾಡಲಾಗುತ್ತದೆ. ಜೂನ್.09ರ ಮಂಗಳವಾರ ಪಿಐಬಿ ಕಚೇರಿಯು ಎಂದಿನಂತೆ ಕಾರ್ಯಾರಂಭ ಮಾಡಲಿದೆ. ಎರಡು ದಿನಗಳ ಕಾಲ ಕಚೇರಿಗೆ ಸ್ಯಾನಿಟೈಸರ್ ನಿಂದ ಶುದ್ಧಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ಅಗತ್ಯ ಮಾಧ್ಯಮಗೋಷ್ಠಿಗಳನ್ನು ಶಾಸ್ತ್ರಿ ಭವನದಲ್ಲಿ ನಡೆಸಲು ಅವಕಾಶ ನೀಡಲಾಗಿದೆ.

   English summary
   PIB chief KS Dhatwalia test Coronavirus positive. National Medical Centre Office Closed Till June.09.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X