Cabinet: ರಾಜ್ಯ ಸಚಿವ ಸಂಪುಟ ಸರ್ಜರಿ ಬಗ್ಗೆ ಶಿವರಾಜ್ ತಂಗಡಗಿ ಅಚ್ಚರಿ ಹೇಳಿಕೆ

ಕೊಪ್ಪಳ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಹುದ್ದೆಗೆ ಪೈಪೋಟಿ ಬೂದಿ ಮುಚ್ಚಿದ ಕೆಂಡಂದಂತಿದೆ. ಆಗಾಗ ಚರ್ಚೆಗಳು ನಡೆಯುತ್ತಿವೆ. ಬಹುದಿನಗಳಿಂದ ಸಚಿವ ಸಂಪುಡ ಪುನರ್‌ರಚನೆ ಕುರಿತು ಮಾತುಗಳು ಕೇಳಿ ಬರುತ್ತಲೇ ಇವೆ. ಯಾರಿಗೆ ಕೋಕ್ ನೀಡಲಾಗುತ್ತದೆ. ಯಾರಿಗೆ ಮಣೆ ಹಾಕಲಾಗುತ್ತದೆ ಎಂಬ ಚರ್ಚೆಗಳು ಕೇಳಿ ಬರುತ್ತಿರುವ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ತಾವು ಸಚಿವ ಸ್ಥಾನದಲ್ಲಿ ಮುಂದುವರಿಯುವುದರ ಕುರಿತು, ಸಂಪುಟ ಸರ್ಜರಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ

ಕೊಪ್ಪಳದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ಜನರ ಆಶೀರ್ವಾದ, ಕನಕ ಚಲಪತಿ ಕೃಪೆಯಿಂದ ಸಚಿವ ಸಂಪುಟ ಸರ್ಜರಿ ಬಳಿಕವೂ ಸಚಿವನಾಗಿರುತ್ತೇನೆ ಎಂಬ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ. ಅಂದರೆ ಸಚಿವ ಸಂಪುಟದಿಂದ ಕೈ ಬಿಡುವ ಪಟ್ಟಿಯಲ್ಲಿ ಅವರ ಹೆಸರು ಇದಿಯಾ ಎಂಬ ಅನುಮಾನ ಉಂಟಾಗಿದೆ.

Minister Shivraj Tangadagi

"ಸಚಿವ ಸುಂಪಟದ ಸರ್ಜರಿ ಅವಶ್ಯಕತೆ ಇದೆ ಅಂತಲೂ ತಿಳಿಸಿರುವ ಅವರು, ಏಳೆಂಟು ವರ್ಷಗಳಿಂದ ಶಾಸಕರಾಗಿರುವವರಿಗೆ ಸಚಿವರಾಗುವ ಆಸೆ ಇದ್ದೇ ಇರುತ್ತದೆ. ಹೀಗಾಗಿ ಹೈಕಮಾಂಡ್ ಭೇಟಿಗೆ ಹೋಗುವುದು ಸಹಜ. ಜನರ ಆಶೀರ್ವಾದ, ಕನಕ ಚಲಪತಿಯ ಕೃಪೆಯಿಂದ ಮುಂದೆ ಸಹ ಸಚಿವ ಸ್ಥಾನದಲ್ಲಿ ಮುಂದುವರೆಯತ್ತೇನೆ ಎಂದು ಪುನರುಚ್ಚರಿಸಿದರು.

Arecanut: ಎಲೆಚುಕ್ಕೆ ರೋಗ ವಿರುದ್ಧ ಹೋರಾಟ: ಯಶಸ್ಸಿನತ್ತ ಪ್ರಾತ್ಯಕ್ಷಿಕತೆ, ಪ್ರಾಯೋಗಿಕ ಯೋಜನೆ
Arecanut: ಎಲೆಚುಕ್ಕೆ ರೋಗ ವಿರುದ್ಧ ಹೋರಾಟ: ಯಶಸ್ಸಿನತ್ತ ಪ್ರಾತ್ಯಕ್ಷಿಕತೆ, ಪ್ರಾಯೋಗಿಕ ಯೋಜನೆ

ಎಚ್‌ಡಿಕೆ, ಅಮಿತ್‌ ಶಾ ಭೇಟಿಗೆ ಹೋಗಿಲ್ಲ

"ಪಕ್ಷದ ವರಿಷ್ಠರು ಹೈಕಮಾಂಡ್ ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ?, ಕೇಂದ್ರ ಸಚಿವರ ಎಚ್.ಡಿ. ಕುಮಾರಸ್ವಾಮಿ ಅಥವಾ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಮ್ಮ ಪಕ್ಷದವರು ತೆರಳಿಲ್ಲ. ಕಾಂಗ್ರೆಸ್‌ದವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ.

ರಾಜಕಾರಣ ಎಂದ ಮೇಲೆ ಕೇಳುವುದು, ಹೇಳುವುದು ಹೀಗೆ ಹಲವು ವಿಚಾರಗಳಿರುತ್ತವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಪತ್ರಕರ್ತರನ್ನೇ ಮರು ಪ್ರಶ್ನಿಸಿದರು. ಈ ಮೂಲಕ ಪಕ್ಷದ ಕಾರ್ಯಚಟುವಟಿಕೆಗಳಿಗೆ ಅವರು ತೆರಳಿದ್ದಾರೆ ಎಂಬಂತೆ ಉತ್ತರಿಸಿದರು.

ಶಿಸ್ತು ಉಲ್ಲಂಘಿಸಿದವರು ಸಂಪುಟದಿಂದ ಹೊರಕ್ಕೆ?

ಬಹುದಿನಗಳಿಂದ ಸಚಿವ ಸಂಪುಟ ಸರ್ಜರಿ ಆದರೆ ಯಾರು ಉಳಿಯುತ್ತಾರೆ, ಯಾರನ್ನು ಸರ್ಕಾರ ಸಚಿವ ಸ್ಥಾನದಿಂದ ಕೈ ಬಿಡುತ್ತದೆ ಎಂಬುದರ ಮೇಲೆ ಕುತೂಹಲ ನೆಟ್ಟಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಯಾರೆಲ್ಲ ಪಕ್ಷಕ್ಕೆ ಮುಜುಗರ ಉಂಟಾಗುವಂತೆ, ಶಿಸ್ತು ಉಲ್ಲಂಘಿಸಿದ್ದಾರೋ ಅಂಥವರು ಸಚಿವ ಸ್ಥಾನದಲ್ಲಿದ್ದರೆ ಅವರಿಗೆ ಕೋಕ್ ನೀಡುವ ಸಾಧ್ಯತೆ ಇದೇ ಅಂತಲೂ, ಕೆಲವರ ಹೆಸರು ಸಹಿತ ಚರ್ಚೆಗಳು ನಡೆಯುತ್ತಿವೆ. ಇದೆಲ್ಲ ಅನುಮಾನ, ಊಹೆ, ಚರ್ಚೆಗಳಿಗೆ ಶೀಘ್ರವೇ ಬ್ರೇಕ್ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+