Arecanut: ಎಲೆಚುಕ್ಕೆ ರೋಗ ವಿರುದ್ಧ ಹೋರಾಟ: ಯಶಸ್ಸಿನತ್ತ ಪ್ರಾತ್ಯಕ್ಷಿಕತೆ, ಪ್ರಾಯೋಗಿಕ ಯೋಜನೆ
Arecanut leaf Disease: ಮಲೆನಾಡು ಸೇರಿದಂತೆ ರಾಜ್ಯದ ಅಡಿಕೆ ಬೆಳೆಗಾರರು ಪ್ರಮುಖವಾಗಿ ಎದುರಿಸುತ್ತಿರುವ ಎಲೆಚುಕ್ಕೆ ರೋಗ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ನಾಟಕದ ಎರಡು ಪ್ರಮುಖ ಸರ್ಕಾರಿ ಸಂಸ್ಥೆಗಳು ನಡೆಸುತ್ತಿರುವ ಕ್ಷೇತ್ರ ಪ್ರಾತ್ಯಕ್ಷಿಕೆಗಳು ಇದೇ ಜೂನ್‌ಗೆ ಒಂದು ವರ್ಷ ಪೂರೈಸಲಿದೆ. ಒಟ್ಟು ಮೂರು ವರ್ಷಗಳ ಕ್ಷೇತ್ರ ಸಂದರ್ಶನ ಇದಾಗಿದೆ. 'ಪರಿಷ್ಕೃತ ಬೇಸಾಯ ಪದ್ಧತಿ' ಅಳವಡಿಸಿಕೊಳ್ಳುವ ಮೂಲಕ ರೋಗ ನಿಯಂತ್ರಣಕ್ಕೆ ಮಾರ್ಗದರ್ಶನ ನೀಡುವುದು. ಅಡಿಕೆಯನ್ನು ಎಲೆಚುಕ್ಕೆ ರೋಗ ಮುಕ್ತಗೊಳಿಸುವ ಉದ್ದೇಶ ಯೋಜನೆ ಹೊಂದಿದೆ.
ಕೇರಳದ ಕಾಸರಗೋಡಿನ ಕೇಂದ್ರ ತೋಟಗಾರಿಕಾ ಸಂಶೋಧನಾ ಸಂಸ್ಥೆ (CPCRI) ಮತ್ತು ಶಿವಮೊಗ್ಗದ ಕಳಸೂರು ನಾಯಕರ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (KSNUAHS) ಜೂನ್ 2025 ರಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 10 ತಾಲೂಕುಗಳಲ್ಲಿ 125 ಎಕರೆ (50 ಹೆಕ್ಟೇರ್) ಅಡಿಕೆ ತೋಟಗಳಿಗೆ ಭೇಟಿ ನೀಡಿದ್ದಾರೆ ಎಂದು 'ದಿ ಹಿಂದೂ'ವರದಿ ಮಾಡಿದೆ.

ಸಿಪಿಸಿಆರ್‌ಐ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ನಡುಗಲ್ಲು, ಚಾನಿಲ ಹಾಗೂ ಬೆಳ್ತಂಗಡಿ ತಾಲೂಕಿನ ಕದಿರುದ್ಯಾವರದಲ್ಲಿರುವ 21 ರೈತರ 25 ಎಕರೆ ತೋಟಗಳಲ್ಲಿ ಪ್ರದರ್ಶನ ನಡೆಸುತ್ತಿದೆ. ಇನ್ನೂ ಉತ್ತರ ಕನ್ನಡದ ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ 25 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಕಾರ್ಯ ಪ್ರಗತಿಯಲ್ಲಿವೆ. ಪರಿಹಾರೋಪಾಯಗಳನ್ನು ಪ್ರಯೋಗಿಕ ಜಾರಿ ಮಾಡುವ ಕೆಲಸ ಸಹ ನಡೆದಿದೆ.
2022ರಲ್ಲೇ ಸಮಿತಿ ರಚನೆ
ಕೇಂದ್ರ ಸರ್ಕಾರವು 2022ರ ಅಕ್ಟೋಬರ್ 20 ರಚಿಸಿದ ರಾಷ್ಟ್ರೀಯ ಅಡಿಕೆ ವೈಜ್ಞಾನಿಕ ಸಮಿತಿ (NSC) ಶಿಫಾರಸುಗಳ ಅನ್ವಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ತಲಾ ಮೂರು ತಾಲೂಕು ಸೇರಿ ಒಟ್ಟು ಆರು ತಾಲೂಕುಗಳ 75 ಎಕರೆ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಈ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡಿದೆ. ಅಡಿಕೆ ಬೆಳೆಗೆ ಕಂಡು ಬರುವ ಹಳದಿ ರೋಗ ಮತ್ತು ಎಲೆಚುಕ್ಕೆ ರೋಗ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರ ಕಂಡಕೊಳ್ಳಲು ಈ ಸಮಿತಿ ಸ್ಥಾಪಿಸಲಾಗಿದೆ.
ಮೂರು ವರ್ಷಗಳ ಸಮಗ್ರ ಕ್ಷೇತ್ರ ಅಧ್ಯಯನ ನಡೆಯಲಿದೆ. ವೈಜ್ಞಾನಿಕ ಮೌಲ್ಯಮಾಪನಗಳ ನಂತರ ಎನ್‌ಎಸ್‌ಸಿ ಅಂತಿಮ ವರದಿ ಸಲ್ಲಿಸಲಿದೆ. ಸೂಕ್ತ ಪೋಷಕಾಂಶ ನಿರ್ವಹಣೆ ಮತ್ತು ಶಿಲೀಂಧ್ರನಾಶಕಗಳ ಬಳಕೆಯ ಮೂಲಕ ಎಲೆಚುಕ್ಕೆ ರೋಗದ ಸಮಗ್ರ ನಿರ್ವಹಣೆಯನ್ನು ಶಿಫಾರಸು ಮಾಡಲಿದೆ. ಈ ಹಿಂದೆ
ಸಿಪಿಸಿಆರ್‌ಐ ನಿರ್ದೇಶಕ ಕೆ. ಬಾಲಚಂದ್ರ ಹೆಬ್ಬಾರ್ ಅವರು, ಕೇವಲ ಶಿಲೀಂಧ್ರನಾಶಕ ಸಿಂಪಡಿಸುವುದು ರೋಗ ನಿರ್ವಹಣೆ ಅದೊಂದು ಪರಿಹಾರ ಅಲ್ಲ. ಸಾಮೂಹಿಕ ನಿರ್ವಹಣಾ ವಿಧಾನಗಳು ಮತ್ತು ಅಡಿಕೆ ಮರಗಳ ಒಟ್ಟಾರೆ ಆರೋಗ್ಯ ಸುಧಾರಿಸುವುದು ಮುಖ್ಯ ಎಂದು ಹೇಳಿದ್ದರು.

ಪರಿಹಾರ ಕ್ರಮಗಳು ಸಾಮೂಹಿಕವಾಗಿ ಜಾರಿ
ಸಿಪಿಸಿಆರ್‌ಐ ವಿಜ್ಞಾನಿಗಳಾದ ಭವಿಷ್ಯ ಮತ್ತು ತವರಪ್ರಕಾಶ್ ಪಾಂಡಿಯನ್ ಅವರು ಪ್ರಕಾರ, ರೋಗ ನಿರ್ವಹಣಾ ಕ್ರಮಗಳನ್ನು ಪ್ರತ್ಯೇಕ ತೋಟಗಳಲ್ಲಿ ಅಳವಡಿಸುವ ಬದಲು ನೆರೆಯ ತೋಟಗಳಲ್ಲಿ ಸಾಮೂಹಿಕವಾಗಿ ಜಾರಿ ಮಾಡಲಾಗುತ್ತಿದೆ. ಶಿಲೀಂಧ್ರನಾಶಕ ಸಿಂಪಡಣೆಗೆ ಮಾತ್ರ ಸೀಮಿತವಾಗದೇ ವೈಜ್ಞಾನಿಕ ಬೆಳೆ ನಿರ್ವಹಣಾ ಪದ್ಧತಿಗಳ ಮೂಲಕ ಮರದ ಆರೋಗ್ಯವನ್ನು ಸುಧಾರಿಸುವತ್ತಲೂ ಒತ್ತು ನೀಡಿದ್ದೇವೆ. ಹೆಚ್ಚುವರಿ ನೀರಿಗೆ ಸರಿಯಾದ ಒಳಚರಂಡಿ, ಮಣ್ಣು ಪರೀಕ್ಷೆ ಆಧರಿಸಿ ಆಮ್ಲೀಯ ಮಣ್ಣಿಗೆ ಸುಣ್ಣದ ಮಿಶ್ರಣ, ಸಮತೋಲಿತ ಪೋಷಕಾಂಶ ಮತ್ತು ಸೂಕ್ಷ್ಮ ಪೋಷಕಾಂಶಗಳ ಅನ್ವಯ ಇದರಲ್ಲಿ ಸೇರಿವೆ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ಕಾರದ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ (MIDH) ಯೋಜನೆಯಡಿ ಸಿಪಿಸಿಆರ್‌ಐ ಈ ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಂಸ್ಥೆಯ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ವಿನಾಯಕ ಹೆಗಡೆ ಅವರು ಈ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ. ಕರಾವಳಿ, ಮಲೆನಾಡಿನ ತೋಟಗಳಲ್ಲಿ ಪ್ರಾತ್ಯಕ್ಷಿಕೆಗಳು ನಡೆದಿವೆ.














Click it and Unblock the Notifications