ಮೋದಿಗೆ ಕೊಟ್ಲರ್ ಪ್ರಶಸ್ತಿ, ಪ್ರಧಾನಿಯ ಕಾಲೆಳೆದ ರಾಹುಲ್ ಗಾಂಧಿ

ನವದೆಹಲಿ, ಜನವರಿ 16: ಅತ್ಯುತ್ತಮ ನಾಯಕತ್ವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊಟ್ಟ ಮೊದಲ ಫಿಲಿಪ್ ಕೊಟ್ಲರ್ ಪ್ರೆಸಿಡೆನ್ಶಿಯಲ್ ಪ್ರಶಸ್ತಿ ಲಭಿಸಿದ್ದು, ಸೋಮವಾರ ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಮೋದಿ ಸ್ವೀಕರಿಸಿದರು.

ಆದರೆ ಆ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಮೋದಿ ಅವರನ್ನು ಅಣಕಿಸಿದ್ದು, ಪ್ರಶಸ್ತಿ ನೀಡಿದ ಸಂಸ್ಥೆಗೂ ಇರಿಸುಮುರಿಸುಂಟು ಮಾಡಿತ್ತು.

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಲೇಖಕ, ಅರ್ಥಶಾಸ್ತ್ರಜ್ಞ ಫಿಲಿಪ್ ಕೊಟ್ಲರ್, "ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಭಾರತ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡಿದೆ. ದೇಶಕ್ಕಾಗಿ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡುತ್ತಿದ್ದೇವೆ. ಆದರೆ ಭಾರತೀಯ ಮಾಧ್ಯಮಗಳು ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುತ್ತಿವೆ" ಎಂದು ಕೊಟ್ಲರ್ ಟ್ವೀಟ್ ಮಾಡಿದ್ದಾರೆ.

Philip Kotler defends Presidential Award to PM Modi

''People, profit and planet" ಎಂಬುದನ್ನು ಆದ್ಯತೆಯನ್ನಾಗಿ ಹೊಂದಿರುವ ಈ ಪ್ರಶಸ್ತಿಯನ್ನು ಈ ಮೂರು ಅಂಶಗಳಿಗೆ ವ್ಯಕ್ತಿ ನೀಡಿದ ಕೊಡುಗೆಯನ್ನು ಪರಿಗಣಿಸಿ ನೀಡಲಾಗುತ್ತದೆ.

ಲೇಖಕ, ಅರ್ಥಶಾಸ್ತ್ರಜ್ಞ ಫಿಲಿಪ್ ಕೊಟ್ಲರ್ ಅವರ ಹೆಸರಿನಲ್ಲಿ ಕೊಡಾಡುವ ಈ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಿದ ನಂತರ ಕೊಟ್ಲರ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಕಾಲೆಳೆದ ರಾಹುಲ್ ಗಾಂಧಿ

ಫಿಲಿಪ್ ಕೊಟ್ಲರ್ ಪ್ರಶಸ್ತಿಗಾಗಿ ಮೋದಿ ಅವರನ್ನು ಬಿಜೆಪಿ ಮುಖಂಡರು, ಅಭಿಮಾನಿಗಳು ಅಭಿನಂದಿಸಿದರೆ, ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಪ್ರಶಸ್ತಿಯನ್ನು ಲೇವಡಿ ಮಾಡಿದ್ದಾರೆ. ಈ ಮೂಲಕ ಮೋದಿ ಅವರ ಕಾಲೆಳೆದಿದ್ದಾರೆ. 'ವಿಶ್ವಪ್ರಸಿದ್ಧ ಕೊಟ್ಲರ್ ಪ್ರೆಸಿಡೆನ್ಷಿಯಲ್ ಪ್ರಶಸ್ತಿ ಪಡೆದ ನಮ್ಮ ಪ್ರಧಾನಿಗೆ ಅಭಿನಂದನೆಗಳು. ಈ ಪ್ರಶಸ್ತಿ ಎಷ್ಟು ಪ್ರಸಿದ್ಧ ಎಂದರೆ ಇದಕ್ಕೆ ಜ್ಯೂರಿಗಳಿಲ್ಲ, ಇದನ್ನು ಇದುವರೆಗೂ ಯಾರಿಗೂ ಕೊಟ್ಟಿರಲಿಲ್ಲ! ಅಷ್ಟೇ ಅಲ್ಲ, ಈ ಕಾರ್ಯಕ್ರಮದ ಪಾಲುದಾರರು ಪತಂಜಲಿ ಮತ್ತು ರಿಪಬ್ಲಿಕ್ ಟಿವಿ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+