ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆ: ಟ್ವಿಟ್ಟಿರ್ ನಲ್ಲಿ ಹಾಸ್ಯವೋ ಹಾಸ್ಯ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: "ಅಯ್ಯೋ, ಈ ಪೆಟ್ರೋಲ್ ರೇಟ್ ನೋಡಿದ್ರೆ ಗಾಡಿ ಕೊಳ್ಳೋ ಸಹವಾಸಾನೇ ಸಾಕು ಅನ್ನಿಸ್ತಿದೆ. ಸೈಕಲ್ಲು, ಕಾಲು ನಂಬಿಕೊಂಡ್ರೆ ಬದುಕು, ಇಲ್ಲಾಂದ್ರೆ ಹೀಗೆ ಬಂದ ಸಂಬಳ, ಹಾಗೆ ಹೋಗೋದು ಗ್ಯಾರಂಟಿ" ಎಂದು ಹಲವರು ಅಲವತ್ತುಕೊಳ್ಳುತ್ತಿದ್ದರೆ ಅಚ್ಚರಿಯೇನಿಲ್ಲ!

ದೀಪಾವಳಿ ಹೊತ್ತಿಗೆ ಇಂಧನ ಬೆಲೆಯಲ್ಲಿ ಇಳಿಕೆ: ಕೇಂದ್ರ ಆಶ್ವಾಸನೆದೀಪಾವಳಿ ಹೊತ್ತಿಗೆ ಇಂಧನ ಬೆಲೆಯಲ್ಲಿ ಇಳಿಕೆ: ಕೇಂದ್ರ ಆಶ್ವಾಸನೆ

ದಿನದಿನವೂ ಪೆಟ್ರೋಲ್ ದರ ಪರಿಷ್ಕರಣೆ ಆರಂಭವಾದ ಮೇಲೆ ಪೆಟ್ರೋಲ್ ದರದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಲೀಟರ್ ಗೆ 70 ರೂ. ಗಿಂತ ಕೆಳಗಿಳಿಯದ ಈ ದರ ಶ್ರೀಸಾಮಾನ್ಯನನ್ನು ಹೈರಾಣಾಗಿಸಿದೆ. ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆಯ ಕುರಿತಂತೆ ವಿಪಕ್ಷಗಳು ಮೋದಿ ಸರ್ಕಾರವನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿವೆ. ಜೊತೆಗೆ ಈ ಇಂಧನ ದರ ಏರಿಕೆ ತಮಾಷೆಗೆ, ವ್ಯಂಗ್ಯಕ್ಕೆ ವಸ್ತುವಾಗಿ ಸಾಮಾಜಿಕ ಮಾಧ್ಯಮಗಳಲ್ಲೂ ಟ್ರೆಂಡಿಂಗ್ ಆಗಿದೆ.

ಜಿಎಸ್ ಟಿ ಅಡಿ ಪೆಟ್ರೋಲಿಯಂ ಉತ್ಪನ್ನ ತರಲು ಸರಕಾರ ಒಪ್ಪಲ್ಲ ಏಕೆ?ಜಿಎಸ್ ಟಿ ಅಡಿ ಪೆಟ್ರೋಲಿಯಂ ಉತ್ಪನ್ನ ತರಲು ಸರಕಾರ ಒಪ್ಪಲ್ಲ ಏಕೆ?

ಈಗಾಗಲೇ ಟ್ವಿಟ್ಟರ್ ನಲ್ಲಿ #IndiaAgainstFuelPriceHike ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಪೆಟ್ರೋಲ್ ದರ ಏರಿಕೆಯನ್ನೂ, ಮೋದಿ ಸರ್ಕಾರವನ್ನೂ ಟೀಕಿಸಲಾಗುತ್ತಿದೆ. ಇದನ್ನೇನಾ ಮೋದೀಜಿ ಅಚ್ಛೇ ದಿನ್ ಎಂದಿದ್ದು ಎಂದು ಅಣುಕಿಸಲಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯ ದುಃಖದಲ್ಲೂ, ಮರೆಯಾಗದ ನಮ್ಮ ಜನರ ಹಾಸ್ಯಪ್ರಜ್ಞೆ ಮೆಚ್ಚಬೇಕಾದ್ದೇ!

ರಿವಾಲ್ವಾರ್ ಆದ ಫಯೂಯೆಲ್ ನಾಜಲ್

ಫ್ಯೂಯೆಲ್ ನಾಜೆಲ್ ಅನ್ನು ವ್ಯಕ್ತಿಯೊಬ್ಬನಿಗೆ ರಿವಾಲ್ವಾರ್ ನಂತೆ ಗುರಿಯಾಗಿಸಿ "ನಿನ್ನ ಪರ್ಸ್ ಗಳನ್ನು ಕೊಟ್ಟುಬಿಡು" ಎಂದು ಪೆಟ್ರೋಲ್ ಪಂಪ್ ಹೇಳುತ್ತಿರುವ ಕಾರ್ಟೂನ್, ಪೆಟ್ರೋಲ್ ದರ ಏರಿಕೆ ಹೇಗೆ ಶ್ರೀಸಾಮಾನ್ಯನನ್ನು ದೋಚುತ್ತಿದೆ ಎಂಬುದನ್ನು ಸೊಗಸಾಗಿ ವಿವರಿಸಿದೆ.

ಸ್ಕೇಟಿಂಗ್ ಶೂ ಮತ್ತು ಕಾರಿನ ಕವಚ!

ಆಫೀಸರ್ ಗಳು, ಬಿಸಿನೆಸ್ ಮನ್ ಗಳು ಕಾರಿನ ಹೊರ ಕವಚವನ್ನಷ್ಟೇ ಹಿಡಿದುಕೊಂಡು, ಸ್ಕೇಟಿಂಗ್ ಶೂ ಧರಿಸಿ ಹೋಗುತ್ತಿರುವ ವ್ಯಂಗ್ಯ ಮಿಶ್ರಿತ ಹಾಸ್ಯದ ಕಾರ್ಟೂನ್ ವೂಂದು ಟ್ವಿಟ್ಟರ್ ನಲ್ಲಿ ಸದ್ದು ಮಾಡುತ್ತಿದೆ.

ಕಾಪಾಡಿ ಪೊಲೀಸರೇ..!

"ನನ್ನ ಗಾಡಿ ಕಳುವಾಗಿದೆ. ಅದರ ಬಗ್ಗೆ ನನಗೆ ಚಿಂತೆಯಿಲ್ಲ. ಆದರೆ ಅದಕ್ಕೆ 5 ಲೀಟರ್ ಪೆಟ್ರೋಲ್ ತುಂಬಿಸಿದ್ದೆ. ನನಗೆ ಅದೇ ಚಿಂತೆಯಾಗಿರೋದು" ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡುತ್ತಿರುವ ಕಾರ್ಟೂನ್ ಸಹ ವಿನೋದದ ಜೊತೆಗೆ ಕುಹಕವನ್ನೂ ಪ್ರತಿನಿಧಿಸುತ್ತದೆ.

ಇಲ್ಲಿ ಪೆಟ್ರೋಲ್ ಸಾಲ ಸಿಗುತ್ತದೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಒಂದರ ಮುಂದೆ ಇಲ್ಲಿ ಪೆಟ್ರೋಲ್ ಸಾಲ ಸಿಗುತ್ತದೆ ಎಂಬ ಬೋರ್ಡ್ ನ ಚಿತ್ರ ಹಾಕಿ ಪೆಟ್ರೋಲ್ ದರ ಏರಿಕೆಯ ಬಿಸಿಯನ್ನು ಶ್ರೀಸಾಮಾನ್ಯರೊಬ್ಬರು ವ್ಯಕ್ತಪಡಿಸಿದ್ದಾರೆ.

English summary
After fuel rates are hiked many twitterians are commenting Prime minister Narendra Modi government. Here are some interesting cartoons and jokes on twitter related to Fuel price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X