ಪೆಟ್ರೋಲ್ ಬೆಲೆ ಏರಿಕೆ: ಬೆಂಗಳೂರಲ್ಲಿ ಲೀ.ಗೆ 81 ರೂ!
ಮುಂಬೈ, ಸೆಪ್ಟೆಂಬರ್ 01: ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಪಕ್ಷಣ ಕಾಣುತ್ತಿಲ್ಲ. ಇಂಧನ ದರದಲ್ಲಿ ಇಂದು ಮತ್ತಷ್ಟು ಏರಿಕೆಯಾಗಿದ್ದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.12 ರೂ.ಗೆ ಏರಿಕೆಯಾಗಿದೆ.
ಡೀಸೆಲ್ ಬೆಲೆಯೂ ಕಳೆದ ಕೆಲ ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಇಂದು ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 72.51 ರೂ. ತಲುಪಿದೆ.
ಡಾಲರ್ ಎದುರು ರೂಪಾಯಿ ಪಾತಾಳಕ್ಕೆ; ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ
ವಾಣಿಜ್ಯನಗರ ಮುಂಬೈಯಲ್ಲಿ ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ ಲೀಟರ್ ಗೆ 86.09 ರೂ.-74.76 ರೂ. ದಾಖಲಾಗಿದೆ.
ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ : ರಾಜ್ಯಗಳಿಂದ ವಿರೋಧ
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 78.68 ರೂ, ಆಗಿದ್ದರೆ ಡೀಸೆಲ್ ದರ ಲೀಟರ್ ಗೆ 70.42 ರೂ ತಲುಪಿದೆ.
ಆಗಸ್ಟ್ 16 ರ ನಂತರ ಡಾಲರ್ ಎದುರು ರೂಪಾಯಿ ದರ ಕುಸಿತ ಕಂಡಿದ್ದು ಇಂಧನ ಬೆಲೆಯ ಮೇಲೆ ಪರಿಣಾಮ ಬೀರಿದೆ. ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 71 ರೂ. ತಲುಪಿದೆ.