• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಮುನಾ ನದಿಯ ವಿಷಕಾರಿ ನೊರೆಯ ಮಧ್ಯೆ ಛತ್ ಪೂಜೆ, ಸ್ನಾನ

|
Google Oneindia Kannada News

ನವದೆಹಲಿ ನವೆಂಬರ್ 8: ಛತ್ ಪೂಜೆಯ ಮೊದಲ ದಿನವಾದ ಇಂದು (ನವೆಂಬರ್ 8) ಹಲವಾರು ಭಕ್ತರು ವಿಷಕಾರಿ ನೊರೆಯಿಂದ ಆವೃತವಾಗಿರುವ ದೆಹಲಿಯ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ಯಮುನಾ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆ ತೇಲುತ್ತಿದ್ದರೂ ಜನ ನದಿಯಲ್ಲಿ ಛತ್ ಪೂಜೆ ಮಾಡುತ್ತಿದ್ದಾರೆ. ದೇಹದೆತ್ತರಕ್ಕೆ ವಿಷಕಾರಿ ನೊರೆ ನೀರಿನ ಮೇಲ್ಬಾಗ ತುಂಬಿಕೊಂಡಿದ್ದರೂ ಜನ ಅದನ್ನ ಲೆಕ್ಕಿಸದೆ ಕಾಯಿ, ಹೂ, ಹಣ್ಣು ಅರ್ಪಿಸುವ ಮೂಲಕ ಛತ್ ಪೂಜೆ ನೆರವೇರಿಸುತ್ತಿದ್ದಾರೆ. ಈ ವೀಡಿಯೊಗಳು ಮತ್ತು ಫೋಟೋಗಳು ಸದ್ಯ ವೈರಲ್ ಆಗಿವೆ. ಆದಾಗ್ಯೂ, ಯಮುನಾದಲ್ಲಿ ವಿಷಕಾರಿ ನೊರೆ ಕಾಣಿಸಿಕೊಳ್ಳುತ್ತಿರುವುದು ಹೊಸದಲ್ಲ. ಪ್ರತಿ ವರ್ಷ ಛತ್ ಪೂಜೆಯ ಸಮಯದಲ್ಲಿ ನದಿಯಲ್ಲಿ ಅಧಿಕ ವಿಷಕಾರಿ ನೊರೆಯಲ್ಲಿ ನಿಂತು ಛತ್ ಪೂಜೆ ಮಾಡುವ ಭಕ್ತರ ಫೋಟೋಗಳು ಗಮನ ಸೆಳೆಯುತ್ತವೆ.

ಯಮುನಾದಲ್ಲಿ ಅಮೋನಿಯ ಮಟ್ಟವು 3 ppm (ಪಾರ್ಟ್ಸ್ ಪರ್ ಮಿಲಿಯನ್) ಗೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯ ಭಾಗಗಳಲ್ಲಿ ನೀರಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ವರ್ಷ ಯಮುನಾ ದಡದಲ್ಲಿ ಛಠ್ ಪೂಜೆಯನ್ನು ನಿಷೇಧಿಸಿದ್ದು ಇದು ಬಿಜೆಪಿ ಮತ್ತು Yamuna river ಎಎಪಿ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ. ಆದಾಗ್ಯೂ, ದೆಹಲಿಯ ಯಮುನಾ ದಂಡೆಗಳನ್ನು ಹೊರತುಪಡಿಸಿ "ನಿಯೋಜಿತ ಸೈಟ್‌ಗಳಲ್ಲಿ" ಛಾತ್ ಆಚರಣೆಯನ್ನು DDMA ಅನುಮತಿಸಿದೆ.

ಯಮುನಾ ನದಿ ವಿವಾದ: ಆರ್ಟ್ ಆಫ್ ಲಿವಿಂಗ್ ಮೇಲೆ ಕೋಟ್ಯಂತರ ದಂಡಯಮುನಾ ನದಿ ವಿವಾದ: ಆರ್ಟ್ ಆಫ್ ಲಿವಿಂಗ್ ಮೇಲೆ ಕೋಟ್ಯಂತರ ದಂಡ

ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶಕ್ಕೆ ಸೇರಿದ ಜನರು ಆಚರಿಸುವ ಛಾತ್, ಮೊಣಕಾಲು ಆಳದ ನೀರಿನಲ್ಲಿ ನಿಂತು ಸೂರ್ಯ ದೇವರಿಗೆ ಉಪವಾಸ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸುವುದನ್ನು ಒಳಗೊಂಡಿರುತ್ತದೆ. ಆಚರಣೆಗಳು ಮೂರು ದಿನಗಳವರೆಗೆ ನಡೆಯುತ್ತವೆ. ಛತ್ ಪೂಜೆಯ ನಿಮಿತ್ತ ದೆಹಲಿ ಸರ್ಕಾರ ಶುಕ್ರವಾರ ನವೆಂಬರ್ 10 ರಂದು ಸಾರ್ವಜನಿಕ ರಜೆ ಘೋಷಿಸಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಳೆದ ವಾರ ಯಮುನಾ ನದಿಯ ದಡವನ್ನು ಹೊರತುಪಡಿಸಿ ನಗರದ ನಿಗದಿತ ಸ್ಥಳಗಳಲ್ಲಿ ಛತ್ ಪೂಜೆಯನ್ನು ಆಚರಿಸಲು ಅನುಮತಿ ನೀಡಿತ್ತು. ದೆಹಲಿಯ ಎನ್‌ಸಿಟಿಯ ಜನರಿಗೆ ಛತ್ ಪೂಜೆ ಒಂದು ಪ್ರಮುಖ ಹಬ್ಬವಾಗಿದೆ. ಅದರಂತೆ, ದೆಹಲಿ ಸರ್ಕಾರವು ನವೆಂಬರ್ 10, 2021 ರಂದು ಛತ್ ಪೂಜೆಯ ನಿಮಿತ್ತ ಸಾರ್ವಜನಿಕ ರಜೆ ಎಂದು ಘೋಷಿಸಲು ನಿರ್ಧರಿಸಿದೆ' ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಈ ವರ್ಷದ ಆರಂಭದಲ್ಲಿ, ದೆಹಲಿ ಸರ್ಕಾರವು ಯಮುನಾ ನದಿಗೆ ಸಂಸ್ಕರಿಸದ ಕೊಳಚೆನೀರನ್ನು ಬಿಡುವುದರಿಂದ ನೊರೆಯನ್ನು ಕಡಿಮೆ ಮಾಡಲು ಒಂಬತ್ತು ಅಂಶಗಳ ಕ್ರಿಯಾ ಯೋಜನೆಯನ್ನು ರೂಪಿಸಿತು. ಆದರೆ ತಂತ್ರಜ್ಞಾನ ಮತ್ತು ಲಾಭದ ಆಮಿಷದ ಮುಂದೆ ನದಿಗಳ ಪರಿಸರ ವ್ಯವಸ್ಥೆಯನ್ನೇ ನಿರ್ಲಕ್ಷಿಸಲಾಗಿದೆ. ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯು ನಮ್ಮ ರಾಜಕೀಯ ನಾಯಕರಲ್ಲಿ ಕನಿಷ್ಠ ನದಿಗಳ ಜೀವನೋಪಾಯ ಮತ್ತು ಅವಲಂಬಿತ ಜನಸಂಖ್ಯೆಯ ಮೇಲೆ ಅವುಗಳ ಪ್ರಭಾವದ ಬಗ್ಗೆಯೂ ಉದಾಸೀನತೆ ಸೃಷ್ಟಿಸಿದೆ ಪರಿಸರವಾದಿಗಳು ಆರೋಪಿಸುತ್ತಾರೆ.

People take dip in Yamuna in the midst of toxic foam on Chhath Puja

ಪ್ರಸ್ತುತ ಸರ್ಕಾರವು ನದಿಗಳನ್ನು ಸ್ವಚ್ಛಗೊಳಿಸುವುದೂ ಸೇರಿದಂತೆ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಹೆಚ್ಚು ಉತ್ಸುಕವಾಗಿದೆ. ಅಗತ್ಯವಾದ ಕೌಶಲ್ಯ ಮತ್ತು ಸಂಪನ್ಮೂಲಗಳ ಕೊರತೆಯಿದ್ದೂ ಖಾಸಗಿ ಕಂಪನಿಗಳು ಬೃಹತ್ ಎಸ್‌ಟಿಪಿ (ಒಳಚರಂಡಿ ಸಂಸ್ಕರಣಾ ಘಟಕ) ಗಳನ್ನು ನಿರ್ಮಿಸುತ್ತವೆ ಮತ್ತು ಅವುಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ವಹಿಸುತ್ತವೆ. ಆದರೆ ಅವು ಕಾರ್ಯನಿರ್ವಹಿಸಲು ವಿಫಲವಾಗುತ್ತವೆ ಮತ್ತು ಅದರ ನೇರ ಪರಿಣಾಮ ನದಿಗಳ ಮೇಲಾಗುತ್ತವೆ. ಸ್ವತಃ ಕೇಂದ್ರದ ಪರಿಸರ ಸಚಿವಾಲಯವೇ ದೇಶದ 70% ಎಸ್‌ಟಿಪಿಗಳು ನಿಷ್ಕ್ರಿಯವಾಗಿದೆ ಎಂದು ವರದಿ ಮಾಡಿದೆ. ಆದರೆ ಸಚಿವಾಲಯವನ್ನು ಒಳಗೊಂಡ ಅದೇ ಸರ್ಕಾರವು ಎಲ್ಲಾ ಸಮಸ್ಯೆಗಳಿಗೂ ಈ ವ್ಯರ್ಥ 'ಪರಿಹಾರಗಳನ್ನೇ' ಸೂಚಿಸುತ್ತಿದೆ ಎಂದು ಪರಿಸರ ವಾದಿಗಳು ದೂರುತ್ತಾರೆ.

English summary
Several devotees were seen taking a dip in Delhi's Yamuna river, which was covered in a thick layer of toxic foam, on the first day of Chhath Puja on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X