ನಿವೃತ್ತಿ ಬಳಿಕ ನ್ಯಾಯಾಧೀಶರು ಸರ್ಕಾರಿ ಹುದ್ದೆಗೆ ಏರಬಾರದು- ದೀಪಕ್ ಗುಪ್ತಾ
ನವ ದೆಹಲಿ, ಮೇ 9: ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಸಮಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರ ಬಗ್ಗೆ ನ್ಯಾಯಮೂರ್ತಿ ದೀಪಕ್ ಗುಪ್ತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
Recommended Video
ದೀಪಕ್ ಗುಪ್ತಾ ಸಹ ಸುಪ್ರೀಂಕೋರ್ಟ್ ನ್ಯಾಯಾದೀಶ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ನಿವೃತ್ತ ನಂತರ ಸರ್ಕಾರ ನೀಡುವ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ರಂಜನ್ ಗೊಗೊಯ್ ರೀತಿ ತಾವು ಯಾವುದಾರೂ ಹುದ್ದೆಯನ್ನು ಸ್ವೀಕರುತ್ತಾರೆಯೇ ಎನ್ನುವ ಅನುಮಾನಗಳಿಗೆ ಅವರು ಉತ್ತರ ನೀಡಿದ್ದಾರೆ.
ನ್ಯಾಯಾಂಗದ ಬಗ್ಗೆ ಸಾರ್ವಜನಿಕರ ಗ್ರಹಿಕೆ ಬದಲಾಗಿದೆ. ನ್ಯಾಯಾಧೀಶರು ನಿವೃತ್ತಿಯಾದ ಬಳಿಕ ಸರ್ಕಾರಿ ಹುದ್ದೆಯನ್ನು ಸ್ವೀಕರಿಸಿದಾಗ ಜನರಿಗೆ ಅನುಮಾನಗಳು ಮೂಡುತ್ತವೆ. ನನ್ನ ದೃಷ್ಟಿಯಲ್ಲಿ, ನ್ಯಾಯಾಧೀಶರು ನಿವೃತ್ತಿಯಾದ ಕೂಡಲೇ ಸರ್ಕಾರಿ ಹುದ್ದೆಗಳನ್ನು ವಹಿಸಿಕೊಂಡಾಗ ಸಾರ್ವಜನಿಕರು ಅದನ್ನು ಬಹಳ ಸಂತೋಷದಿಂದ ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ಅಂದಹಾಗೆ, ಸಂದರ್ಶನದಲ್ಲಿ ದೀಪಕ್ ಗುಪ್ತಾ ಹಂಚಿಕೊಂಡ ಕೆಲವು ಪ್ರಮುಖ ಅಂಗಳಗಳು ಹೀಗಿವೆ.

ರಾಜಕೀಯ ಹುದ್ದೆಗಳನ್ನು ಸ್ವೀಕರಿಸಬಾರದು
''ಕೆಲವು ಬಾಹ್ಯ ಕಾರಣಗಳಿಂದಾಗಿ ನ್ಯಾಯಾಧೀಶರು ನಿವೃತ್ತಿ ನಂತರ ಈ ಹುದ್ದೆಯನ್ನು ಪಡೆದಿದ್ದಾರೆ ಎಂದು ಸಾರ್ವಜನಿಕರು ಭಾವಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಜನರು ಹೊಂದಿರುವ ಗ್ರಹಿಕೆ ಇದು. ಆದರೆ, ಇದು ಅನೇಕ ಸಂದರ್ಭಗಳಲ್ಲಿ ಸರಿ ಇರಬಹುದು ಅಥವಾ ಇರದಿರಲುಬಹುದು. ಆದರೆ ಅದು ಸಾರ್ವಜನಿಕ ಗ್ರಹಿಕೆ. ನನ್ನ ಪ್ರಕಾರ ಸಾಮಾನ್ಯವಾಗಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ರಾಜಕೀಯ ಹುದ್ದೆಗಳನ್ನು ಸ್ವೀಕರಿಸಬಾರದು. ನಾನು ಇದರ ಪರವಾಗಿಲ್ಲ. ನಾನು ಅದನ್ನು ಮಾಡುವುದಿಲ್ಲ.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್ ನ್ಯಾಯಾದೀಶ

ಅರುಣ್ ಜೇಟ್ಲಿ ಹೇಳಿದ ಮಾತು
''ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಾಗಬೇಕು. ಆದರೆ, ಅವರಿಗೆ ನಿವೃತ್ತಿಯ ನಂತರದ ಉದ್ಯೋಗಗಳು ಇರಬಾರದು ಎಂದು ನನ್ನ ಸ್ನೇಹಿತ ಅರುಣ್ ಜೇಟ್ಲಿ ಹೇಳುತ್ತಿದ್ದರು. ನ್ಯಾಯಾಧೀಶರಿಗೆ ನಿವೃತ್ತಿಯ ಸರ್ಕಾರಿ ಹುದ್ದೆಗಳು ಇರಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗಿದ್ದರೂ, ನಿವೃತ್ತ ನ್ಯಾಯಾಧೀಶರು ಭರ್ತಿ ಮಾಡಬೇಕಾದ ಕೆಲವು ಹುದ್ದೆಗಳಿವೆ ಮತ್ತು ಕೆಲವು ನ್ಯಾಯಾಧೀಶರು ನ್ಯಾಯಮಂಡಳಿಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್ ನ್ಯಾಯಾದೀಶ

ಸೋಷಿಯಲ್ ಮೀಡಿಯಾದಿಂದ ದೂರ
''ಹೆಚ್ಚಿನ ನ್ಯಾಯಾಧೀಶರು ಸೋಷಿಯಲ್ ಮೀಡಿಯಾದಿಂದ ದೂರವಿರುತ್ತಾರೆ. ಆದರೆ, ಅನೇಕರು ಅಲ್ಲಿ ಆಗುವ ಚರ್ಚೆಗಳ ಬಗ್ಗೆ ಗಮನ ಇಟ್ಟಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಹೇಳುವುದು ಎಂದಿಗೂ ನನ್ನ ಮೇಲೆ ಪರಿಣಾಮ ಬೀರಿಲ್ಲ. ನಾನು ಅದನ್ನು ಓದಿದ್ದೇನೆ. ಕೆಲವೊಮ್ಮೆ ಅದರ ಬಗ್ಗೆ ನಗುತ್ತೇನೆ. ಕೆಲವೊಮ್ಮೆ, ನನಗೂ ಕೋಪ ಬರುತ್ತದೆ. ಆದರೆ ನ್ಯಾಯಾಧೀಶನಾಗಿ ನನ್ನ ನಿರ್ಧಾರಗಳ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್ ನ್ಯಾಯಾದೀಶ

ಕೇಸ್‌ಗಳನ್ನು ಲೈವ್-ಸ್ಟೀಮಿಂಗ್ ಮಾಡುವ ಪರ
''ನಾನು ಯಾವಾಗಲೂ ಕೇಸ್‌ಗಳನ್ನು ಲೈವ್-ಸ್ಟೀಮಿಂಗ್ ಮಾಡುವ ಪರವಾಗಿರುತ್ತೇನೆ. ಲೈವ್-ಸ್ಟೀಮಿಂಗ್ ಎಂಬುದು ಇಂದಿನ ಅಗತ್ಯವಾಗಿದೆ ಎಂಬುದು ನನ್ನ ವೈಯಕ್ತಿಕ ದೃಷ್ಟಿಕೋನ. ಇದು ಯಾವಾಗಲೂ ಅಗತ್ಯವಾಗಿತ್ತು. ಆದರೆ ಕೋವಿಡ್ -19 ರೊಂದಿಗೆ, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕಾಗಿರುವುದರಿಂದ ಇದು ಅನಿವಾರ್ಯವಾಯಿತು ಮತ್ತು ನೀವು ನ್ಯಾಯಾಲಯದಲ್ಲಿ ಕಡಿಮೆ ಸಂಖ್ಯೆಯ ಜನರನ್ನು ಹೊಂದಿರಬೇಕು. ಅದನ್ನು ಲೈವ್-ಸ್ಟ್ರೀಮಿಂಗ್ ಮೂಲಕ ಮಾತ್ರ ಮಾಡಬಹುದು.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್ ನ್ಯಾಯಾದೀಶ

ನಿವೃತ್ತಿ ನಂತರ ಮಾಡುವ ಕೆಲಸಗಳು
''ನಿವೃತ್ತಿ ನಂತರ ನಾನು ಓದಲು ಸಾಕಷ್ಟು ಸಮಯವನ್ನು ಪಡೆಯುತ್ತೇನೆ. ನಾನು ಓದುವುದನ್ನು ತುಂಬಾ ಇಷ್ಟಪಡುತ್ತೇನೆ. ನಾನು ತುಂಬಾ ಪ್ರಯಾಣಿಸಲು ಇಷ್ಟಪಡುತ್ತೇನೆ ಆದರೆ, ಕೋವಿಡ್ -19 ಕಾರಣ ಹೆಚ್ಚು ಪ್ರಯಾಣ ಮಾಡಲು ಸಾಧ್ಯವಿಲ್ಲ. ಹಾಗಾಗಿ ನನ್ನ ಹೆಚ್ಚಿನ ಸಮಯವನ್ನು ಓದುವುದರಲ್ಲಿ ಕಳೆಯಲಿದ್ದೇನೆ. ನಾನು ಛಾಯಾಗ್ರಹಣವನ್ನೂ ಮಾಡುತ್ತೇನೆ. ನನ್ನ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತೇನೆ.''- ದೀಪಕ್ ಗುಪ್ತಾ, ಸುಪ್ರೀಂಕೋರ್ಟ್ ನ್ಯಾಯಾದೀಶ
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications