ರೇಪ್ ಕೇಸಿನಿಂದ ಪೀಪ್ಲಿ ಲೈವ್ ಸಹ ನಿರ್ದೇಶಕನಿಗೆ ಮುಕ್ತಿ
ನವದೆಹಲಿ, ಸೆ. 25: ಅತ್ಯಾಚಾರ ಪ್ರಕರಣದಿಂದ ಪೀಪ್ಲಿ ಲೈವ್ ಚಿತ್ರದ ಸಹ ನಿರ್ದೇಶಕ ಮಹಮ್ಮದ್ ಫಾರೂಕಿ ಅವರಿಗೆ ಮುಕ್ತಿ ಸಿಕ್ಕಿದೆ. ಅಮೆರಿಕ ಮೂಲದ ಸಂಶೋಧಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತುಕೊಂಡಿದ್ದರು.
ನಿರ್ದೇಶಕ ಮಹಮ್ಮದ್ ಫಾರೂಕಿ ಮೇಲಿನ ಆರೋಪ ಸಾಬೀತಾಗಿ ಕಳೆದ ವರ್ಷ ದೆಹಲಿ ಹೈಕೋರ್ಟಿನಿಂದ 7 ಶಿಕ್ಷೆ ವಿಧಿಸಲಾಗಿತ್ತು. ಈಗ ಆರೋಪ ಮುಕ್ತಗೊಳಿಸಲಾಗಿದ್ದು, ಶಿಕ್ಷೆಯೂ ರದ್ದಾಗಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ 35 ವರ್ಷದ ವಿದೇಶಿ ಸಂಶೋಧನಾ ವಿದ್ಯಾರ್ಥಿನಿಯನ್ನು 2015 ಮಾರ್ಚ್ 28 ರ ರಾತ್ರಿ ಊಟದ ನೆಪದಲ್ಲಿ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪ ಫರೂಕಿ ಮೇಲಿತ್ತು.
ಜೂನ್ 19, 2015ರಂದು ಫರೂಕಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದ ವಿಚಾರಣೆ ಬಳಿಕ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದರು ಎಂಬುದು ಜುಲೈ 30ರಂದು ಸಾಬೀತಾಗಿತ್ತು.












Click it and Unblock the Notifications