ದೆಹಲಿ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ!
ದೆಹಲಿಯ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಬುಧವಾರ (ಮೇ 10)ದಿಂದ ಹೊಸ ದರ ಜಾರಿಗೆ ಬರಲಿದ್ದು, ಕನಿಷ್ಠ 10 ರು ಹಾಗೂ ಗರಿಷ್ಠ 50 ರು ಪ್ರಯಾಣ ದರ ನಿಗದಿ ಮಾಡಲಾಗಿದೆ.
ನವದೆಹಲಿ, ಮೇ 08: ದೆಹಲಿಯ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಬುಧವಾರ (ಮೇ 10) ದಿಂದ ಹೊಸ ದರ ಜಾರಿಗೆ ಬರಲಿದ್ದು, ಕನಿಷ್ಠ 10 ರು ಹಾಗೂ ಗರಿಷ್ಠ 50 ರು ಪ್ರಯಾಣ ದರ ನಿಗದಿ ಮಾಡಲಾಗಿದೆ ಎಂದು ದೆಹಲಿ ಮೆಟ್ರೋ ನಿಗಮ ಸೋಮವಾರದಂದು ಪ್ರಕಟಿಸಿದೆ.
ದರ ಏರಿಕೆಗೆ ದೆಹಲಿ ಮೆಟ್ರೋ ರೈಲು ನಿಗಮವು ಒಪ್ಪಿಗೆ ಸೂಚಿಸಿದ್ದು, ಬುಧವಾರ (ಮೇ 10)ದಿಂದ ನೂತನ ದರ ಜಾರಿಗೆ ಬರಲಿದೆ. ಪರಿಷ್ಕೃತ ದರ ಪಟ್ಟಿಯಂತೆ ಕನಿಷ್ಠ ದರ 8 ರು ಬದಲಿಗೆ 10 ರು ಹಾಗೂ ಗರಿಷ್ಠ ದರ ಮಿತಿ 30ರು ಬದಲಿಗೆ 50 ರುಗೇರಿದೆ.

ದರ ಪಟ್ಟಿ: [ಚೆನ್ನೈ ಮೆಟ್ರೋ ಟಿಕೆಟ್ ದರ ದೇಶದಲ್ಲೇ ಅಧಿಕ!]
2 ಕಿ.ಮೀ ತನಕ: 10 ರು
5 ರಿಂದ 12 ಕಿ.ಮೀ : 15 ರು
12 ರಿಂದ 21 ಕಿ.ಮೀ : 30 ರು
21 ರಿಂದ 32 ಕಿ.ಮೀ : 40 ರು
32 ಕಿ.ಮೀ : 50 ರು
ದೇಶದ ಇತರೆ ನಗರಗಳ ಕನಿಷ್ಠ ಹಾಗೂ ಗರಿಷ್ಠ ದರ
* ಚೆನ್ನೈ -(10 ಕಿ.ಮೀ) - 10 ರಿಂದ 40 ರು
* ಮುಂಬೈ (12.3 ಕಿ.ಮೀ) - 10 ರಿಂದ 40 ರು
* ಬೆಂಗಳೂರು (6.7 ಕಿ.ಮೀ) - 10 ರಿಂದ 17 ರು
* ದೆಹಲಿ - 10 ರಿಂದ 50 ರು
* ಕೋಲ್ಕತ್ತಾ - 5 ರಿಂದ 25 ರು
* ಜೈಪುರ - 5 ರಿಂದ 15 ರು
ಮಂಗಳವಾರದಂದು ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗುತ್ತದೆ. 2009ರ ಬಳಿಕೆ ದರ ಏರಿಕೆ ಮಾಡಿರಲಿಲ್ಲ.












Click it and Unblock the Notifications