ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಸಂದೇಶವನ್ನು ದೈಹಿಕ ಸಂಬಂಧಕ್ಕೆ ಒಪ್ಪಿಗೆ ಎಂದು ಪರಿಗಣಿಸಲಾಗದು: ಕೋರ್ಟ್

|
Google Oneindia Kannada News

ನವದೆಹಲಿ, ಮಾರ್ಚ್ 17: ವಾಟ್ಸಾಪ್ ಸಂದೇಶ ಹಾಗೂ ಹಳೆಯ ದೈಹಿಕ ಸಂಬಂಧದ ಅನುಭವವನ್ನು ಪ್ರಸ್ತುತ ದೈಹಿಕ ಸಂಬಂಧಕ್ಕೆ ಸಮ್ಮತಿ ಎಂದು ಪರಗಣಿಸಲಾಗದು ಎಂದು ದೆಹಲಿ ಪಟಿಯಾಲಾ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಅತ್ಯಾಚಾರ ಪ್ರಕರಣವೊಂದರಲ್ಲಿ ಪತ್ರಕರ್ತ ವರುಣ್ ಹಿರೇಮಠ ವಿರುದ್ಧದ ಅತ್ಯಾಚಾರ ಪ್ರಕರಣ ವಿಚಾರಣೆಗೆ ಸಂಬಂಧಿಸಿ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅತ್ಯಚಾರ ನಡೆದು 27 ವರ್ಷಗಳ ಬಳಿಕ ದೂರು ನೀಡಿದ ಸಂತ್ರಸ್ತೆ, ಕಾರಣವೇನು?ಅತ್ಯಚಾರ ನಡೆದು 27 ವರ್ಷಗಳ ಬಳಿಕ ದೂರು ನೀಡಿದ ಸಂತ್ರಸ್ತೆ, ಕಾರಣವೇನು?

ಇನ್‌ಸ್ಟಾಗ್ರಾಂ ಅಥವಾ ವಾಟ್ಸಾಪ್ ಸಂದೇಶಗಳಲ್ಲಿ ಸಂತ್ರಸ್ತೆಯು ದೈಹಿಕ ಸಂಬಂಧಗಳ ಬಗ್ಗೆ ಸಂದೇಶಗಳನ್ನು ಕಳುಹಿಸಿರಬಹುದು, ಆದರೆ ಇದನ್ನೇ ಆರೋಪಿಯು ದೈಹಿಕ ಸಂಬಂಧಕ್ಕೆ ನೀಡಿದ ಒಪ್ಪಿಗೆ ಎಂದು ಪರಿಗಣಿಸಲಾಗದು ಹೀಗಾಗಿ, ಅತ್ಯಾಚಾರ ಪ್ರಕರಣವನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

 Past Sexual Experience Does Not Imply Consent, Says Delhi Court In Rape Case

ಆರೋಪಿಯ ಪರ ವಕೀಲರು ಕೋರ್ಟ್‌ಗೆ ಹೇಳಿದಂತೆ, ಸಂತ್ರಸ್ತೆ ಕೂಡ ಆರೋಪಿ ಜತೆಗೆ ಮಾತನಾಡಿಕೊಂಡೇ ದೆಹಲಿಗೆ ಬಂದಿದ್ದಾಳೆ, ಸಮ್ಮತಿಯ ಮೇರೆಗೆ ಹೋಟೆಲ್‌ನಲ್ಲಿ ವಾಸವಾಗಲು ನಿರ್ಧರಿಸಿದ್ದಾರೆ, ಹೋಟೆಲ್‌ಗೆ ಅಧಿಕೃತ ದಾಖಲೆಗಳನ್ನು ನೀಡಿಯೇ, ವಾಸವಾಗಿದ್ದಾಳೆ.

ಈ ವಿಚಾರದಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ, ಸಮ್ಮತಿಯ ಮೇರೆಗೆ ದೂರದಾರರ ಸಮ್ಮತಿ ಮೇರೆಗೆ ನಡೆದ ದೈಹಿಕ ಸಂಬಂಧವಾಗಿದೆ ಎಂದು ವಾದಿಸಿದ್ದಾರೆ. ಘಟನೆ ನಡೆದ ಬಳಿಕ ವಾಟ್ಸಾಪ್ ಸಂದೇಶದಲ್ಲಿ ಆರೋಪಿಯು ಕ್ಷಮೆ ಕೇಳಿದ್ದಾನೆ, ಈ ಘಟನೆಯೇ ಆರೋಪಿಯಲ್ಲಿ ಅಪರಾಧದ ಮನೋಭಾವ ಮೂಡಿರುವುದನ್ನು ಸಾಕ್ಷೀಕರಿಸುತ್ತದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.

English summary
A Delhi court has dismissed the anticipatory bail application of a 28-year-old Mumbai-based journalist, accused in a rape case, observing that previous relationship with the victim does not "imply consent".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X